Health

ದೀರ್ಘ ಆಯಸ್ಸಿನ ಗುಟ್ಟು

 

ಸುಖೀ ಜೀವನಕ್ಕೆ ಆರೋಗ್ಯಕರ ಜೀವನಕ್ರಮ ಪೂರ್ವಾ ಪೇಕ್ಷಿತವಾದದ್ದು. ಒಳ್ಳೆಯ ಆಹಾರ ಸೇವನೆ ಮತ್ತು ವ್ಯಯಾಮ ಮಾತ್ರವಲ್ಲ, ಅದರಲ್ಲಿ ಸಕಾರಾತ್ಮಕ ಮಾನಸಿಕ ಆರೋಗ್ಯವೂ ಸೇರಿದೆ. ಆರೋಗ್ಯಕರ  ಜೀವನದ ಗುಟ್ಟೆಂದರೆ ಜೀವನ ಕ್ರಮದಲ್ಲಿ ಸಣ್ಣಪುಟ್ಟ ಮಾರ್ಪಾಟು ಬದಲಾವಣೆಗಳೇ ಜೀವನದ ಮಟ್ಟವನ್ನು ಸುಧಾರಿಸುತ್ತದೆ, ಅವುಗಳಲ್ಲಿ ಪಥ್ಯ, ಆಹಾರಕ್ರಮ, ವ್ಯಾಯಾಮ, ನಿದ್ರೆ, ಹವ್ಯಾಸಗಳು, ಮಾನಸಿಕ ಆರೋಗ್ಯ ಮತ್ತು ಒಳ್ಳೆಯ ಗೆಳೆಯರೂ ಅಗತ್ಯ.

ಯಾವಾಗ ಕೌಟುಂಬಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನ ಶೈಲಿ ಸುಧಾರಿಸುತ್ತೋ ಆಗ ಮನುಷ್ಯನ ಮಾನಸಿಕ ಆರೋಗ್ಯವೂ ಸುಧಾರಿಸುತ್ತೆ. ಆಯಸ್ಸೂ ಹೆಚ್ಚಾಗುತ್ತೆ. ಹೇಗಿದ್ದರೆ ಜೀವನ ಚೆಂದ?

*ದೇಹದ ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ದೇಹಕ್ಕೆ ಹಾನಿಯನ್ನುಂಟು ಮಾಡುವ ಜಂಕ್ ಫುಡ್ ನಂಥ ಆಹಾರಗಳಿಂದ ದೂರವಿರಿ. ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿದ್ದಷ್ಟೂ ಹೃದಯ ಸುರಕ್ಷಿತನಾಗಿರುತ್ತದೆ.

*ಅಧ್ಯಯನದ ಪ್ರಕಾರ ವ್ಯವಸ್ಥಿತ ವ್ಯಾಯಾಮದಿಂದ ಸರಾಸರಿ ಆಯಸ್ಸು ಹೆಚ್ಚುತ್ತೆ. ಸಾಮಾನ್ಯವಾಗಿ ಕಾಡುವ ರೋಗ ಹಾಗೂ ಖಿನ್ನತೆಯನ್ನು ದೂರ ಮಾಡುವಲ್ಲಿ ವ್ಯಾಯಾಮ ಅತ್ಯಗತ್ಯ.

*ವಾಹನಗಳನ್ನು ಓಡಿಸುವಾಗ ರಕ್ಷಣಾ ಕವಚಗಳನ್ನು ತೊಡಿ. ಇದರಿಂದ ಸಣ್ಣಪುಟ್ಟ ಅವಘಡಗಳು ಸಂಭವಿಸಿದರೂ ಅಪಾಯದಿಂದ ಪಾರಾಗಬಹುದು.

*ಅಗತ್ಯದಷ್ಟು ನಿದ್ರಿಸಿ. ಇದು ಬೊಜ್ಜು, ಡಯಾಬಿಟೀಸ್, ಹೃದ್ರೋಗದಂಥ ಸಮಸ್ಯಗಳನ್ನು ದೂರವಿಡುತ್ತದೆ. ಕೆಲವು ನಿಮಿಷಗಳ ಕಾಲ ಹಗಲು  ನಿದ್ರೆಗೆ ಮೊರೆ ಹೋದರೂ ಆರೋಗ್ಯಕ್ಕೆ ಒಳ್ಳೆಯದು.

*ಆತ್ಯತ್ತುಮ ಹವ್ಯಾಸಗಳು ಜೀವನದ ಮಟ್ಟ ಸಿಧಾರಿಸುತ್ತದೆ. ಉತ್ತಮ ಸಂಗೀತ ಕೇಳುವುದು, ಪುಸ್ತಕ ಒದುವುದು… ಮುಂತಾದ ಹವ್ಯಾಸಗಳು ಮಾನಸಿಕ ಆರೋಗ್ಯದ ವೃದ್ಧಿಗೆ ಸಹಕಾರಿ, ಯಾವಾಗ ಮಾನಸಿಕ ಸ್ವಾದ್ಥ್ಯ ಸುಧಾರಿಸುತ್ತೋ ಆಗ ದೈಹಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ,

*ಧಾರ್ಮಿಕ, ಆಧ್ಯಾತ್ಮಿಕ ಕಾರ್ಯ ಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದರಿಂದ ಸಾಕಷ್ಟು ಋಣಾತ್ಮಕ ಗುಣಗಳು ಮರೆಯಾಗುತ್ತವೆ, ತಾಳ್ಮೆ ಹೆಚ್ಚಾಗಿ, ದುಗುಡ ಕಡಿಮೆ ಮಾಡುವಲ್ಲಿ ಇಂಥ ಚಟುವಟಿಕೆಗಳು ಹೆಚ್ಚು ಸಹಕಾರಿ.

*ಗೆಳೆಯರ ಹವ್ಯಾಸಗಳು ನಮ್ಮ ಮೇಲೆ ಧನಾತ್ಮಕ ಪ್ರಭಾವ ಬೀರುವುದರಿಂದ ಆಂಥಸ್ನೇಹ ಅತ್ಯಗತ್ಯ.

*ಧ್ಯಾನವು ನಿಮ್ಮ ದೇಹದ ರಕ್ಷಣಾ ಶಕ್ತಿಯನ್ನು ಹೆಚ್ಚಿಸಿ, ಅನಾರೋಗ್ಯವನ್ನು ದೂರವಿಡುತ್ತದೆ. ಧ್ಯಾನವು , ನೀವು ಅನಾರೋಗ್ಯದಿಂದ ಬಳಲುತ್ತಿದ್ದಾಗ ಬೇಗನೆ ಗುಣಮುಖರಾಗಲು ಸಹಾಯ ಮಾಡುತ್ತದೆ.

*ಒಂದು ಸಂತುಲಿತ ಆಹಾರ ಕ್ರಮವು ಸರಿಯಾದ ದೇಹ ತೂಕವನ್ನು ಕಾಪಾಡಿಕೊಳ್ಳಲು, ಆರೋಗ್ಯಕರ ಜೀವನವನ್ನು ನಡೆಸಲು ಮತ್ತು ಕಾಯಿಲೆಗಳ ಅಪಾಯವನ್ನು ತಗ್ಗಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಏನನ್ನು ತಿನ್ನುತ್ತೇವೆ ಮತ್ತು ಹೇಗೆ ತಿನ್ನುತ್ತೇವೆ ಎಂಬ ಅಂಶಗಳು ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತವೆ. ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಸಹ ಬಹಳ ಆವಶ್ಯಕ. ಸುದೀರ್ಘ‌ ಸಮಯದ ಉಪವಾಸದ ಅನಂತರ ತೆಗೆದುಕೊಳ್ಳುವ ಉಪಾಹಾರವು ಸಂತುಲಿತವಾಗಿರಬೇಕು ಮತ್ತು ಹೊಟ್ಟೆಯನ್ನು ತುಂಬಿಸುವಂತಿರಬೇಕು. ಬೆಳಗ್ಗಿನ ಉಪಾಹಾರ ಸೇವಿಸಿದ ಅನಂತರ, ಪ್ರತೀ ಮೂರು ಗಂಟೆಗಳಿಗೊಮ್ಮೆ ಸಣ್ಣ ಸಣ್ಣ ಪ್ರಮಾಣದ ಸಂಪೂರ್ಣ ಊಟಗಳನ್ನು ಸೇವಿಸಬಹುದು.

ನಾವು ಪ್ರತಿ ವರ್ಷ ಜನ್ಮ ದಿನ ಆಚರಿಸಿಕೊಳ್ಳುದು ನಮ್ಮ ದೇಹಕ್ಕಾಗಿರುವ ಭೌತಿಕ ವಯಸ್ಸನ್ನು ಸೂಚಿಸುತ್ತದೆ. ಆದರೆ ದೇಹಕ್ಕೆ ತನ್ನದೇ ಆದ ಜೈವಿಕ ವಯಸ್ಸು ಎಂಬುದಿರುತ್ತದೆ ಇದನ್ನು ಲೆಕ್ಕ ಹಾಕಿಕೊಳ್ಳಲು ಶರೀರದಲ್ಲಿರುವ ವ್ಯವಸ್ಥೆಯೇ ಜೈವಿಕ ಗಡಿಯಾರ. ಒಬ್ಬ ಮನುಷ್ಯನು 65 ವರ್ಷಕ್ಕೆ ಅಸುನೀಗಿದ ಎಂದಿಟ್ಟುಕೊಂಡರೆ ಅದು ಆತನ ಅಸಲಿ ವಯಸ್ಸು. ಈ ಅಸಲಿ ವಯಸ್ಸು ಹಾಗೂ ಜೈವಿಕ ವಯಸ್ಸು ಒಂದೇ ರೀತಿ ಇದ್ದವರಿಗಿಂತ ಜೈವಿಕ ವಯಸ್ಸು ಹೆಚ್ಚಿರುವವರೆ ಬೇಗನೆ ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕುಡಿತ, ದೂಮಪಾನ, ಹೃದ್ರೋಗ, ಮಧುಮೇಹ ಮುಂತಾದ ಕಾಯಿಲೆಗಳೂ ಜೈವಿಕ ಗಡಿಯಾರವನ್ನು ವೇಗವಾಗಿ ಓಡಿಸುತ್ತವಂತೆ ಅದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುವುದು ಎಂಬುವುದು ವೈದ್ಯರ ಅಭಿಪ್ರಾಯವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top