ಮೇಷ
ನಿಮ್ಮ ಬಹುದಿನಗಳ ಬೇಡಿಕೆ ಈಡೇರುವ ಸಾಧ್ಯತೆ, ವೃತ್ತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ, ಉತ್ತಮ ಕೆಲಸ ಕಾರ್ಯಗಳಿಂದ ಮನ್ನಣೆ ಗಳಿಸುವುದು, ಆರೋಗ್ಯದ ಕಡೆ ನಿಗಾ ಇರಲಿ.
ವೃಷಭ
ನಂಬಿ ಬಂದವರಿಗೆ ಉತ್ತಮ ಆಸರೆ ನೀಡಿ, ಹರ್ಷದಾಯಕ ಸಂದೇಶ ನೀಡುವಿರಿ, ಸತ್ಕಾರ್ಯಗಳಲ್ಲಿ ತೊಡಗಿ ಯಶಸ್ವಿಗೊಳಿಸುವಿರಿ, ಜನರ ಪ್ರಶಂಸೆಗೆ ಪಾತ್ರರಾಗುವಿರಿ.
ಮಿಥುನ
ಧಾರ್ಮಿಕ ವಿಚಾರದಲ್ಲಿ ವಿಶೇಷ ಆಸಕ್ತಿ, ಚರ್ಚೆಗೆ ಹೊಂದಿಕೊಳ್ಳುವ ಮನೋಭಾವದಿಂದ ಮಹತ್ವದ ಕಾರ್ಯದಲ್ಲಿ ಯಶಸ್ಸು. ಹಲವು ಸನ್ನಿವೇಶಗಳು ಎದುರಾಗಬಹುದು.
ಕಟಕ
ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ, ಭರವಸೆಗಳ ಮಹಾಪೂರ ಹರಿದು ಬಂದು ಯಶಸ್ಸಿನಲ್ಲಿ ಸಂತಸ ಮೂಡುವುದು, ಸವಾಲುಗಳಿಗೆ ಎದೆಗುಂದದೆ ಮುನ್ನುಗ್ಗಿ.
ಸಿಂಹ
ಉದ್ಯೋಗ ರಂಗದಲ್ಲಿ ಬದಲಾವಣೆ ಸಾಧ್ಯತೆ, ಹೊಸ ಕೆಲಸ ಕಾರ್ಯಗಳಲ್ಲಿ ತೊಡಗಲು ಪ್ರಶಸ್ತ ಕಾಲ. ಬಂಧು ಮಿತ್ರರ ಸಲಹೆ, ಆಶ್ವಾಸನೆಗಳಲ್ಲಿ ವಿಶ್ವಾಸವಿಡಿ.
ಕನ್ಯಾ
ಮೇಧಾವಿ ತನದಿಂದಾಗಿ, ಹಿತಕರ ವಾತವರಣ ನಿಮ್ಮ ದಾಗುವುದು, ನಿಮ್ಮ ವಿರುದ್ಧ ಪಿತೂರಿ ನಡೆಸುವವರ ಬಣ್ಣ ಇಂದು ಬಯಲಾಗಲಿದೆ.
ತುಲಾ
ಭರವಸೆಗಳ ಈಡೇರಿಕೆಗಾಗಿ ಅತ್ಯಂತ ಶ್ರಮವಹಿಸಬೇಕಾದೀತು.ಬಹುದಿನಗಳಿಂದ ಬಾಕಿ ಇರುವ ಕೆಲಸ ಕಾರ್ಯಗಳು ಇಂದು ನೆರವೇರುವುದು.
ವೃಶ್ಚಿಕ
ಹಿರಿಯರ ಮಾತುಗಳನ್ನು ಗೌರವಿಸುವುದರಿಂದ ಆಪತ್ತಿನಿಂದ ದೂರಾಗುವಿರಿ, ಫಲಕ್ಕೊಂದು ಬಲ ದೊರೆತು ಯಶಸ್ಸು ಪಡೆಯುವಿರಿ, ಬೇರೆಯವರ ಸಲಹೆಯಿಂದ ಅಪಾಯ ಸಂಭವ.
ಧನು
ಇಷ್ಟ ಮಿತ್ರರ ಮಧ್ಯಸ್ಥಿಕೆಯಲ್ಲಿ ಗಂಭೀರ ಸಮಾಲೋಚನೆಗಳು ನಡೆಯುವ ಸಾಧ್ಯತೆ, ಸದಾಚಾರ ಕಾರ್ಯಗಳಲ್ಲಿ ಸ್ಪಷ್ಟ ಮನಸ್ಸಿನಿಂದ ತೊಡಗುವಿರಿ, ಶುಭವಾರ್ತೆ ಕೇಳಿಬರಲಿದೆ.
ಮಕರ
ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆ ಸುಲಭವಾಗಿ ಸಾಕಾರಗೊಳ್ಳುವುದು, ಕೆಲಸ ಕಾರ್ಯಗಳಿಗೆ ಸೂರ್ತಿ ದೊರಕುವುದು, ಬಂಧುಗಳಿಂದ ನೆರವು.
ಕುಂಭ
ಅಭಿರುಚಿಗೆ ತಕ್ಕಂತೆ ಸ್ವಾವಲಂಬಿ ಕಾರ್ಯಗಳಲ್ಲಿ ತೊಡಗುವಿರಿ, ಉತ್ತಮ ಕೆಲಸ ಕಾರ್ಯಗಳಿಗೆ ಸಹಾಯ ದೊರಕಿ ಘನತೆ ಗೌರವಗಳು ನಿಮ್ಮದಾಗಲಿದೆ.
ಮೀನ
ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ, ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಹೊಸ ಜಾಣ್ಮೆಯನ್ನು ಬಳಸಬೇಕಾದ ಸಂದರ್ಭ ಬರಬಹುದು, ನೇರ ಮಾತಿನಿಂದ ಯಶಸ್ಸು.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
