fbpx
Editor's Pick

ಅಮರವಾಣಿ ಕನ್ನಡ!!

೨೦೦೦ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಅಮರವಾಣಿ ಎಂಬುದರಲ್ಲಿ ಎರಡು ಮಾತಿಲ್ಲಾ, ಹಾಗಾಗಿ ಕನ್ನಡ ಮಾತನಾಡುವ ಕನ್ನಡಿಗರೆಂದು ಹೆಮ್ಮೆಯಿಂದ ಹೇಳಬಹುದು. ಹೀಗೆ ಕನ್ನಡಿಗರೆಂದು ಹೇಳಲು ಹಲವಾರು ಕಾರಣಗಳಿದೆ, ಭಾರತದ ಭೂಪಟದಲ್ಲಿ ನಮ್ಮ ಕನ್ನಡದ್ದು ಕನ್ನಡಿಗರದ್ದು ವಿಷಿಷ್ಟವಾದ ಸ್ಥಾನ, ಕನ್ನಡಿಗರಾದ ನಮಗೆ ನಮ್ಮ ಅಮರವಾಣಿ ಕನ್ನಡ ಭಾಷೆಯ ಬಗ್ಗೆ ಕೆಳಗಿನ ವಿಷಯಗಳು ತಿಳಿದಿರಲೇ ಬೇಕು.

ನಮ್ಮ ಕನ್ನಡ ಭಾಷೆಗೆ ಪ್ರಪಂಚದಲ್ಲಿ ೨೫ನೇ ಸ್ಥಾನವಿದೆ, ಭಾರತದ ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಮೂರನೆಯ ಸ್ಥಾನವಲ್ಲದೇ ಅತಿ ಪ್ರಾಚೀನ ಭಾಷೆಯೆಂಬ ಹೆಗ್ಗಳಿಕೆ. ನಮ್ಮ ಕನ್ನಡ ಬರವಣಿಗೆಗೆ ೨೦೦೦ ವರ್ಷಗಳ ಇತಿಹಾಸವಿದೆ ಗೊತ್ತಾ? ಕನ್ನಡ ಭಾಷೆ ೯೯.೯೯ ಶೇಕಡಾ ಪರಿಪೂರ್ಣವಾಗಿದೆ. ತರ್ಕಬದ್ದವಾಗಿ ಹಾಗೂ ವೈಜ್ನಾನಿಕವಾಗಿದೆ. ರಾಷ್ಟ್ರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ನಾನಪೀಠ ಪ್ರಶಸ್ತಿಯನ್ನು ಕನ್ನಡ ಎಂಟು ಬಾರಿ ತನ್ನ ಮಡಿಲಿಗೆ ಹಾಕಿಕೊಂಡಿದೆ, ಭಾರತದ ಬೇರೆ ಯಾವ ಭಾಷೆಗೂ ಇಷ್ಟು ಭಾರಿ ಈ ಸಾಹಿತ್ಯ ಪ್ರಶಸ್ತಿ ಬಂದಿಲ್ಲಾ! ಇಂಥಹ ಕನ್ನಡ ಭಾಷೆಯನ್ನು ವಿನೋಭಾಭಾವೆಯವರು ” ವಿಶ್ವ ಲಿಪಿಗಳ ರಾಣಿ” ಎಂದು ಬಣ್ಣಿಸಿದ್ದಾರೆ.

ಅಂತರಾಷ್ಟ್ರೀಯ ಭಾಷೆಯಾದ ಇಂಗ್ಲೀಷ್‌ಗೆ ತನ್ನದೇ ಆದ ಲಿಪಿ ಇಲ್ಲಾ! ಇಂಗ್ಲೀಷನ್ನು ರೋಮನ್ ಲಿಪಿಯಲ್ಲಿಯೇ ಈಗಲೂ ಬರೆಯುತ್ತಾರೆ. ಹಾಗೆಯೇ ರಾಷ್ಟ್ರ ಭಾಷೆಯಲ್ಲದಿದ್ದರೂ ರಾಷ್ಟ್ರ ಭಾಷೆಯೆಂದು ಕರೆಸಿಕೊಳ್ಳುವ ಹಿಂದಿಗೂ ಸಹ ತನ್ನದೇ ಆದ ಲಿಪಿ ಇಲ್ಲಾ! ತಮಿಳು ಭಾಷೆಗೆ ಲಿಪಿ ಇದ್ದರೂ ಅದು ಪರಿಪೂರ್ಣವಾಗಿಲ್ಲಾ! ಏಕೆಂದರೆ ಒಂದೇ ಪದವನ್ನು ಸಂಭಾಷಣೆಯಲ್ಲಿ ಅಥವಾ ಉಚ್ಚರಿಸುವಾಗ ಹಲವು ಬಾರಿ ಬಳಸುತ್ತಾರೆ. ಆದರೆ ನಮ್ಮ ಕನ್ನಡ ಭಾಷೆ ಹಾಗಲ್ಲಾ! ಇದು ತುಂಬಾ ಸರಳ ಹಾಗೂ ಸುಂದರ ಭಾಷೆ, ನೀವು ಎನನ್ನು ಮಾತನಾಡುತ್ತಿರೋ ಅದನ್ನು ಹಾಗೆಯೇ ಕರಾರುವಕ್ಕಾಗಿ ಬರೆಯಬಹುದು, ಹಾಗೇಯೇ ಏನು ಬರೆಯುತ್ತಿರೋ ಅದನ್ನು ಕರಾರುವಕ್ಕಾಗಿ ಓದಬಹುದು.

ಆಮೋಘವರ್ಷ ಕವಿರಾಜಮಾರ್ಗವನ್ನು ಬರೆದಾಗ ಇಂಗ್ಲೀಷ್ ಭಾಷೆ ಇನ್ನೂ ತೊಟ್ಟಿಲಲ್ಲೇ ಇದ್ದರೆ ಹಿಂದಿ ಇನ್ನೂ ಹುಟ್ಟಿಯೇ ಇರಲಿಲ್ಲಾ! ” ಕಾವೇರಿಯಿಂದ ಗೋದಾವರಿಯವರೆಗಿರ್ಪ” ಎಂದು ಹೇಳಿದಾಗ ಅಗಲೇ ಕನ್ನಡ ಕಾವೇರಿಯಿಂದ ಗೋದಾವರಿಯವರೆಗು ಹಬ್ಬಿತ್ತು ತನ್ನ ಕಂಪನ್ನು ಬೀರಿತ್ತು ಎಂದು ತಿಳಿಯುತ್ತದೆ.

ವಿದೇಶಿಯರಿಂದ ಶಭ್ದಕೋಶವನ್ನು ರಚಿಸಿಕೊಂಡ ಭಾರತದ ಎಕಮಾತ್ರ ಭಾಷೆ ಕನ್ನಡ! ಇದನ್ನು ರಚಿಸಿದವರು “ಕಿಟ್ಟೆಲ್”, ಇಂದಿಗೂ “ಕೆಟ್ಟೆಲ್ ಶಭ್ದಕೋಶ” ಎಂದು ಪ್ರಸಿದ್ದವಾಗಿದೆ. “ರಗಳೆ ಸಾಹಿತ್ಯ” ಕನ್ನಡ ಭಾಷೆಯಲ್ಲಿ ಬಿಟ್ಟರೆ ಭಾರತದ ಬೇರೆ ಯಾವ ಭಾಷೆಯಲ್ಲೂ ಹುಡುಕಿದರೂ ಸಿಗುವುದಿಲ್ಲಾ! ರಗಳೆ ಸಾಹಿತ್ಯ ಕನ್ನಡ ಭಾಷೆಯ ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಸಾಹಿತ್ಯವಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಶಸ್ತಿಯನ್ನು ಪಡೆದವರು ಕರ್ನಾಟಕದ ಕವಿ “ಕುವೆಂಪು” ರವರು, ಬೇರೆ ಯಾವ ಭಾಷೆಯ ಸಾಹಿತಿಗಳಿಗೂ ಸಾಹಿತ್ಯ ಕ್ಷೇತ್ರದಲ್ಲಿ ಇಷ್ಚೋಂದು ಪ್ರಶಸ್ತಿಗಳು ಲಭಿಸಿಲ್ಲಾ! ಸಾಹಿತ್ಯ ಕ್ಷೇತ್ರದಲ್ಲಿ ಇವರು ಅಪಾರವಾದ ಪ್ರಶಸ್ತಿಯನ್ನು ಪಡೆದಿರುವುದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಷಯವಾಗಿದೆ. ಕನ್ನಡದ ಛಂದ್ದಸ್ಸು (ಷಟ್ಪಧಿಗಳು)ಸರಿಸಾಟಿಯಾದವೂ ಬೇರೆ ಯಾವ ಭಾಷೆಯಲ್ಲೂ ಇಲ್ಲಾ! ಇಂಥಹ ವಿಶೇಷವಾದ ಭಾಷೆಯನ್ನು ಬಳಸುವ ನಾವು ಕನ್ನಡಿಗರೆಂದು ಹೇಳಲು ಹೆಮ್ಮೆಯೆನಿಸುತ್ತದೆ.

ಇಷ್ಟೇ ಅಲ್ಲಾ! ಕನ್ನಡಿಗರು ಸಹ ಕಲೆ, ಸಾಹಿತ್ಯ, ಸಂಶೋಧನೆ ಹಾಗೂ ವಿಜ್ನಾನ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿ ಮಹತ್ತರವಾದ ಕೆಲಸಗಳನ್ನು ಮಾಡಿ ಕನ್ನಡ ನಾಡಿಗೆ ವಿಶೇಷವಾದ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಮಾಹಿತಿ ತಂತ್ರಜ್ನಾನ ಕ್ಷೇತ್ರದಲ್ಲಿ ಮೂಂಚೂಣಿಯಲ್ಲಿರುವ ನಮ್ಮ ಕರುನಾಡು ಪ್ರಪಂಚದ ಭೂಪಟದಲ್ಲಿ ವಿಶೇಷವಾದ ಸ್ಥಾನವನ್ನು ತಂದುಕೊಟ್ಟಿದೆ. ಮಾಹಿತಿ ತಂತ್ರಜ್ನಾನ ದಿಗ್ಗಜ ಇನ್ಫೋಸಿಸ್‌ನ ಸಂಸ್ಥಾಪಕರಾದ ನಾರಾಯಣಮೂರ್ತಿಯವರು ಹಾಗೂ ವಿಪ್ರೋದ ಸ್ಥಾಪಕರಾದ ಅಜೀಮ್ ಪ್ರೀಮ್‌ಜಿಯವರು ಕನ್ನಡದವರು.ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತರತ್ನವನ್ನು ಪಡೆದ ಸರ್ ಎಂ ವಿಶ್ವೇಶ್ವರಯ್ಯನವರು ಕನ್ನಡದವರು. ಇವರನ್ನು “ಅಭಿಜಾತ ಅಭಿಯಂತರರು” ಎಂದೇ ಗುರುತಿಸಲಾಗುತ್ತದೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಭಾರತದ ಕ್ರಿಕೇಟ್ ತಂಡಕ್ಕೆ ಕನ್ನಡನಾಡು ನೀಡಿದ ಅಮೂಲ್ಯ ರತ್ನಗಳು.ಇನ್ನು ಕರ್ನಾಟಕ ನಾಡಿನ ನೆಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ ಧೀರ್ಘಾಯುಷಿಗಳಾದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀಶಿವಕುಮಾರ ಸ್ವಾಮೀಜಿಯವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಇಂಥಹ ಮಹಾನ್ ವ್ಯಕ್ತಿಯ “ಸಮಕಾಲೀನರು ನಾವು” ಎಂದು ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಮೈಸೂರು ರಾಜವಂಶಸ್ಥರಿಂದ ಪ್ರಾರಂಭಿಸಲ್ಪಟ್ಟ ಮೈಸೂರು ದಸರಾಕ್ಕೆ ನಾನೂರು ವರ್ಷಗಳ ಇತಿಹಾಸವಿದ್ದು ಇಂದಿಗೂ ವಿಶ್ವಪ್ರಸಿದ್ದಿಯಾಗಿದೆ. ಭಾರತದ ನಯಾಗರವೆಂದೆ ಪ್ರಖ್ಯಾತವಾದ “ಜೋಗ ಜಲಪಾತ” ಕನ್ನಡನಾಡಿನ ಹೆಮ್ಮೆ. ಕರ್ನಾಟಕದ ದೇವಸ್ಥಾನಗಳಲ್ಲಿ ಜಾರಿಯಲ್ಲಿರುವ ಭೋಜನ ವ್ಯವಸ್ಥೆ ದೇಶದ ಬೇರಾವ ದೇವಸ್ಥಾನಗಳಲ್ಲೂ ಇಲ್ಲಾ! ಇತ್ತೀಚೆಗಷ್ಟೇ ಶತಮಾನೋತ್ಸವ ಆಚರಿಸಿಕೊಂಡ ” ಮೈಸೂರು ವಿಶ್ವವಿಧ್ಯಾನಿಲಯ” ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಅಪಾರ! ಹೀಗೆ ಬರೆಯುತ್ತಾ ಹೋದರೆ ಕನ್ನಡಿಗರ ಕನ್ನಡದ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕನ್ನಡನಾಡೆಂಬುದು ಬರಿ ಮಣ್ಣಲ್ಲಾ! ಇನ್ನು ಕನ್ನಡವೆಂಬುದು ಬರಿ ಭಾಷೆಯಲ್ಲಾ! ಕರ್ನಾಟಕ ಕನ್ನಡದಿಂದಲೇ ಈ ನೆಲಕ್ಕೊಂದು ವಿಶೇಷತೆಯನ್ನು ತಂದಿದೆ. ಕನ್ನಡ ಭಾಷೆ ಒಂದೆ ಅದರೆ ಅದನ್ನು ಮಾತನಾಡುವ ಶೈಲಿ ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಬೇರೆ. ಹೀಗೆ ಭಿನ್ನ ಭಿನ್ನವಾಗಿ ಮಾತನಾಡುವ ಕನ್ನಡ ಭಾಷೆಯೇ ಚಂದ,ಇದನ್ನು ಮಾತನಾಡುವ ಕಲೆ ಅಂದ, ದಕ್ಷಿಣ ಕರ್ನಾಟಕದ ಮೈಸುರು, ಬೆಂಗಳೂರು, ಶಿವಮೊಗ್ಗ ಭಾಗದಲ್ಲಿ ಮಾತನಾಡುವ ಕನ್ನಡಕ್ಕೂ ಉತ್ತರ ಕರ್ನಾಟಕದ ಕಡೆ ಮಾತನಾಡುವ ಕನ್ನಡಕ್ಕೆ ಅಜಗಜಾಂತರ ಅದರೂ ಅದು ಚೆಂದ,ಈ ರೀತಿ ಒಂದೇ ಭಾಷೆಯನ್ನು ವಿಭಿನ್ನವಾಗಿ ಮಾತನಾಡುವ ಭಾಷೆ ಕನ್ನಡ ಬಿಟ್ಟರೆ ಬೆರೋಂದಿಲ್ಲಾ!ಇಂಥಹ ಅಮರವಾಣಿ ಕನ್ನಡವನ್ನು ಮಾತನಾಡುವ ಕನ್ನಡಿಗರೆ ಪುಣ್ಯವಂತರು, ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿ. ಕನ್ನಡದ ಬಗ್ಗೆ, ಕನ್ನಡ ನೆಲ ಜಲದ ಬಗ್ಗೆ ಹೆಮ್ಮೆಯಿರಲಿ. ಇಂಥಹ ಅಮರವಾಣಿ ಕನ್ನಡವನ್ನು ಬಳಸಿ, ಬೆಳಸಿ ಉಳಿಸಿಕೊಂಡು sಹೋಗಲು ಗಟ್ಟಿಮನಸ್ಸು ಮತ್ತು ಅಭಿಮಾನ ಕನ್ನಡಿಗರಿಗೆ ಬರಬೇಕು.ಸಹೃದಯಿ ಕನ್ನಡಿಗರೆಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಪ್ರಕಾಶ್.ಕೆ.ನಾಡಿಗ್
ಶಿವಮೊಗ್ಗ
[email protected]

ಪ್ರಕಾಶ್.ಕೆ.ನಾಡಿಗ್
Manager-Regulatory Affairs
Wexford Laboratories Pvt Ltd
No-18, KIADB Industrial Area.
Anthrasanahalli
TUMKUR-572106
(ಮೊಬೈಲ್-೯೮೪೫೫೨೯೭೮೯)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top