Awareness

ಜಗತ್ತಿನ 10 ಅತ್ಯಂತ ಭಯಾನಕ ನಗರಗಳು!!!

1. ಸ್ಯಾನ್‍ಪೆಡ್ರೋ ಸುಲಾ, ಹೋಂಡುರಾಸ್
ವಿಶ್ವದಲ್ಲಿ ಅತಿ ಹೆಚ್ಚು ಹತ್ಯೆ ನಡೆಯುವ ನಗರವಿದು. ಮೆಕ್ಸಿಕೋದ ಸಿಯುಡಾಡ್ ಜುವಾರೆeóïನ್ನು ಹಿಂದಕ್ಕಿಕ್ಕಿ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಈ ನಗರಕ್ಕೆ ಈ ಕುಖ್ಯಾತಿ ಎರಡನೇ ವರ್ಷಕ್ಕೂ ಮುಂದುವರೆದಿದೆ. ಇಲ್ಲಿ ಪ್ರತಿದಿನ ಸರಾಸರಿ ಮೂರು ಹತ್ಯೆಗಳು ನಡೆಯುತ್ತವೆ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ. ಆದಾಗ್ಯೂ ಪೂರ್ವಏಷಿಯಾ ರಾಷ್ಟ್ರಗಳನ್ನು ಇದರಲ್ಲಿ ಸೇರಿಸಲಾಗಿಲ್ಲ.

Image result for san pedro sula dangerous


2. ಅಕಾಪುಲ್ಕೊ, ಮೆಕ್ಸಿಕೋ
ವಿಶ್ವದ ಅತ್ಯಂತ ಸುಂದರ ಪ್ರವಾಸಿ ತಾಣವಾಗಿದ್ದರೂ ಇಲ್ಲಿ ಜನ ಕಾಣಸಿಗುವುದು ವಿರಳ. ಮೆಕ್ಸಿಕೋ ನಗರದಾದ್ಯಂತ ಪ್ರಮುಖ ಸಮಸ್ಯೆಯಾಗಿರುವ ಡ್ರಗ್ ಕಾರ್ಟಲ್ಸ್ ಸಮಸ್ಯೆ ಕಳೆದ ಒಂದು ದಶಕದಿಂದ ಕೆಟ್ಟದಾಗೇ ಮುಂದುವರೆದಿದೆ. ಬಂದರು ನಗರದಲ್ಲಿ ದೊಡ್ಡ ಸಂಖ್ಯೆಯ ಮೃತದೇಹಗಳು ಕಾಣಬರುವುದು ತೀರ ಸಾಮಾನ್ಯ ಸಂಗತಿ.

Image result for acapulco mexico dangerous

3. ಕ್ಯಾರಕಾಸ್, ವೆನಿಜುವೆಲಾ
ವೆನಿಜುವೆಲಾ ದೇಶದ ರಾಜಧಾನಿ ಕ್ಯಾರಕಾಸ್ ನಗರವು ನರಹತ್ಯೆ ದರದಲ್ಲಿ ವಿಶ್ವದಲ್ಲೇ ಪ್ರಮುಖ ಸ್ಥಾನ ಪಡೆದಿದೆ. 100,000 ನಿವಾಸಿಗಳಲ್ಲಿ 122 ಜನರು ಹತ್ಯೆಗೊಳಗಾಗುತ್ತಾರೆಂಬ ಅಂದಾಜಿದೆ. ನಗರವು ಪ್ರತಿದಿನ ಡ್ರಗ್ ಕಾರ್ಟಲ್ಸ್, ಬೀದಿ ಜಗಳ, ಸಶಸ್ತ್ರ ದರೋಡೆಯ ಭೀತಿಯನ್ನೆದುರಿಸುತ್ತಿದೆ.ನ ಆತಂಕ ಎದುರಿಸುತ್ತಿದೆ. ಇಲ್ಲಿನ ನಿವಾಸಿಗಳು, ಭೇಟಿ ನೀಡುವವರು ಯಾರೇ ಆಗಿರಲಿ ಇಲ್ಲಿ ಮಾತ್ರ ಸದಾ ಎಚ್ಚರದಿಂದಿರಬೇಕು.

Image result for caracas venezuela dangerous

4. ಡಿಸ್ಟ್ರಿಯೋ ಸೆಂಟ್ರಲ್, ಹೋಂಡುರಾಸ್
ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಹತ್ಯೆಯ ದರ ಈ ನಗರದಲ್ಲಿದೆ. ಒಂದು ಹಂತದಲ್ಲಿ ಈ ನಗರ ಹಿಂಸೆಗೇ ಒಗ್ಗಿಹೋಗಿದೆ ಎನ್ನಬಹುದು. ಇದೇ ಅಪಾಯದಿಂದ ನಗರದಲ್ಲಿ ಮಿತಿಮೀರಿದ ದಾರಿದ್ರ್ಯ, ಭ್ರಷ್ಟಾಚಾರ, ಭಾರೀ ಮಾಫಿಯಾ ಉಪಸ್ಥಿತಿಗೆ ಕಾರಣವಾಗಿದೆ.

5.ಟೊರಿಯನ್, ಮೆಕ್ಸಿಕೋ
ಇದು ಮೆಕ್ಸಿಕೋದ ಅತ್ಯಂತ ಪ್ರಮುಖ ಕೈಗಾರಿಕಾ ಹಾಗೂ ಆರ್ಥಿಕ ಕೇಂದ್ರಗಳಲ್ಲೊಂದು, ಜೊತೆಗೆ ವಿಶ್ವದ ಅಪಾಯಕಾರಿ ನಗರಗಳಲ್ಲೂ ಒಂದು ಎಂಬುದೇ ವಿಪರ್ಯಾಸ. ವ್ಯವಸ್ಥಿತ ಅಪರಾಧ ಹಾಗೂ ಡ್ರಗ್ ಮಾರಾಟಕ್ಕೆ ಹೆಸರಾಗಿರುವ ಟೊರಿಯನ್ ನಗರದಲ್ಲಿ 100,000 ನಿವಾಸಿಗಳಲ್ಲಿ 87 ಮಂದಿ ಹತ್ಯೆಗೀಡಾಗುತ್ತಾರೆ ಎಂಬ ಅಂದಾಜಿದೆ.

Image result for torreón mexico dangerous\

6.ಮ್ಯಾಕಿಯೋ, ಬ್ರೆಜಿಲ್
ಅಲಗೊವಾಸ್ ರಾಜ್ಯದ ರಾಜಧಾನಿ ಮ್ಯಾಕಿಯೋದಲ್ಲಿ ಪ್ರತಿವರ್ಷ 100,000 ಜನರಲ್ಲಿ 135 ಮಂದಿ ಹತ್ಯೆಗೀಡಾಗುತ್ತಾರೆ. ಇಂತಹ ಕುಖ್ಯಾತಿಯೊಂದಿಗೆ ದೇಶದಲ್ಲಿ ಅತ್ಯಂತ ಅಪಾಯಕಾರಿ ನಗರವೆನಿಸಿದೆ.

7.ಕಾಲಿ, ಕೊಲಂಬಿಯಾ
ಲ್ಯಾಟಿನ್ ಅಮೆರಿಕದ ಹಲವು ನಗರಗಳು ಒಳ್ಳೆಯ ಕಾರಣಗಳಿಗೆ ಖ್ಯಾತಿ ಪಡೆದಿದ್ದರೆ, ಕಾಲಿ ಕುಖ್ಯಾತಿಯ ಪಟ್ಟಿಯಲ್ಲಿದೆ. ಅಂದಾಜು 8ಂ ಹತ್ಯೆಗಳು ನಡೆಯುವ ಈ ನಗರ ವಾಸಯೋಗ್ಯವಲ್ಲವೆಂದೇ ಹೇಳಲಾಗುತ್ತದೆ.

Image result for cali colombia violence

8.ನುವೇವೋ ಲಾರೆಡೋ,
ಮೆಕ್ಸಿಕೋ ಗಡಿ ಭಾಗದಲ್ಲಿರುವ ಈ ನಗರ ಟರ್ಫ್ ಯುದ್ಧಕ್ಕೆ ಪ್ರಖ್ಯಾತಿ. ಅಪಹರಣ, ಕಾರು ಕಳ್ಳತನದಂತಹ ಅಪರಾಧಗಳು ರಾತ್ರಿ ವೇಳೆ ಹೆಚ್ಚಿದ್ದರೆ, ದಿನದ ಎಲ್ಲ ಎಲ್ಲ ವೇಳೆಯಲ್ಲೂ ನಡೆಯುತ್ತಿರುತ್ತವೆ. ಡ್ರಗ್ ಸಂಬಂಧಿತ ಅಪರಾಧದಲ್ಲಿ 2006 ರಿಂದ 60,000 ಮಂದಿ ಮೃತಪಟ್ಟಿದ್ದಾರೆ.

Image result for nuevo laredo crime

9.ಬಾಕ್ರ್ವಿಸಿಮೆಟೋ, ವೆನಿಜುವೆಲಾ
ಮಿಲಿಯನ್‍ಗೂ ಮೀರಿದ ಜನಸಂಖ್ಯೆಯಿರುವ ಈ ನಗರದಲ್ಲಿ ಕೊಲೆಯಂತಹ ಅಪರಾಧಗಳು ನಿತ್ಯ ನಡೆಯುತ್ತಿರುತ್ತವೆ. ವಿಶ್ವವಿದ್ಯಾನಿಲಯಗಳು ಹಾಗೂ ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊಂದಿರುವ ಈ ನಗರ ಈ ಪ್ರದೇಶದ ರಾಜಧಾನಿಯೂ ಹೌದು. ಪ್ರಸಿದ್ಧ ಪ್ರವಾಸೀ ಕೇಂದ್ರವಾಗಿದ್ದೂ, ಇಲ್ಲಿ ಅಪರಾಧಗಳಿಗೆ ಬರವಿಲ್ಲ.

Image result for barquisimeto venezuela crime

10. ಜೊವೋ ಪೆಸೋವಾ, ಬ್ರೆಜಿಲ್
ಬ್ರೆಜಿಲ್‍ನ ಪರೈಬಾದ ರಾಜಧಾನಿಯಾದ ಜವಾ ಪಸೋವಾ ನಗರವನ್ನು ಭೂಮಾರ್ಗ ಹಾಗೂ ಸಮುದ್ರಮಾರ್ಗದಿಂದ ಸುಲಭವಾಗಿಉಪಬಹುದಾಗಿದೆ. ಬ್ರೆಜಿಲ್‍ನ ಪೂರ್ವದ ನಗರವಾಗಿರುವ ಜೋವಾ ಪಸೋವಾ ವಿಶ್ವದ ಹಚ್ಚಹಸಿರಿನ ನಗರಗಳಲ್ಲೊಂದು. ದುರದೃಷ್ಟವಶಾತ್ ಬ್ರೆಜಿಲ್‍ನಾದ್ಯಂತ ಇರುವ ಹಿಂಸಾಕ್ರಾಂತ ಪರಿಸ್ಥಿತಿಯಿಂದ ಈ ನಗರದಲ್ಲೂ ಹಿಂಸೆಯ ಪ್ರಮಾಣ ಹೆಚ್ಚು ಎನ್ನಲಾಗಿದೆ. ಇಲ್ಲಿನ 100,000 ನಿವಾಸಿಗಳಲ್ಲಿ ಶೇ.71.59ರಷ್ಟು ಮಂದಿ ಹತ್ಯೆಗೀಡಾಗುತ್ತಾರಂತೆ. ರಜಾದಿನಗಳನ್ನು ಮಜವಾಗಿ ಕಳೆಯಲಂತೂ ಈ ನಗರ ಸೂಕ್ತವಲ್ಲ.

Image result for joao pessoa brazil crime

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top