fbpx
god

ಪ್ರವಾಸಿಗರ ಕಣ್ಮನ ಸೆಳೆಯುವ ಕ್ಷೇತ್ರ ಶ್ರೀ ದೇವಿ ಚೌಡೇಶ್ವರಿ ದೇವಾಲಯ ಸಿಗಂಧೂರು

ಸಿಗಂಧೂರು ಸಾಗರದಿಂದ ೫೦ ಕಿ.ಮೀ ದೂರದಲ್ಲಿ ತುಮರಿ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸಾಗರದಿಂದ ಹೊಳೆಬಾಗಿಲು ಮಾರ್ಗದಲ್ಲಿ ಹೋಗುವ ಬಸ್ಸಿನಲ್ಲಿ ೧೦-೧೫ ನಿಮಿಷ ಶರಾವತಿ ಹಿನ್ನಿರಿನಲ್ಲಿ ಲಾಂಚ್ ಪ್ರಯಾಣ ಮತ್ತೆ ನಾಲ್ಕೈದು ಕಿ.ಮೀ. ಬಸ್ ನಲ್ಲಿ ಸಾಗಿದರೆ ಸಿಗಂಧೂರು ಸಿಗುತ್ತದೆ. ಧಾರ್ಮಿಕ ಪಾವಿತ್ರತ್ಯೆಯ ಜೊತೆಗೆ ಪ್ರವಾಸಿಗರ ಕಣ್ಮನ ಸೆಳೆಯುವ ಕ್ಷೇತ್ರವಾಗಿ ಈಚೆಗೆ ಬೆಳೆಯುತ್ತಿದೆ. ಇದಕ್ಕೆ ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಇದೆ ಎಂದು ಸ್ಥಳೀಕರ ಅಭಿಪ್ರಾಯ. ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಎರಡು ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ, ಶುಕ್ರವಾರಗಳಲ್ಲಿ ವಿಶೇಷ ಪೂಜೆ ಇದೆ. ಶರಾವತಿ ಹಿನ್ನೀರಿನಲ್ಲಿ ಲಾಂಚ್ ಯಾನ ಒಂದು ರೋಮಾಂಚಕ ಅನುಭವ ನೀಡುತ್ತದೆ.

sigandur

ದೇವಿ ಚೌಡೇಶ್ವರಿ ದೇವಾಲಯದ ನೆಲೆಯಾಗಿದೆ ಸಿಗಂಧೂರು. ಹೊನ್ನೆಮರಡುವಿನಲ್ಲಿ ನೋಡಬಹುದಾದ ಮಹತ್ವವಾದ ಸ್ಥಳ ಇದಾಗಿದೆ. ಈ ದೇವಾಲಯದಿಂದಾಗಿಯೇ ಸಿಗಂಧೂರು ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳಿಲ್ಲದೆಯೂ ಈ ಸ್ಥಳವು ಅತ್ಯಂತ ಪ್ರಸಿದ್ಧವೆನಿಸಿದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ ದೇವಿ ಚೌಡೇಶ್ವರಿಯು ಈ ಸ್ಥಳದಲ್ಲಿ ಯಾವುದೇ ಕಳ್ಳತನ ಸುಲಿಗೆಗಳಂತಹ ಅಪರಾಧಗಳಾಗದಂತೆ ಕಾಪಾಡುತ್ತಾಳೆ ಎನ್ನಲಾಗುತ್ತದೆ. ಬೃಹತ್ ರಚನೆಯನ್ನು ಹೊಂದಿರುವ ಈ ದೇವಾಲಯದಲ್ಲಿ ಸಂಕ್ರಾಂತಿಯ ಸಂದರ್ಭದಲ್ಲಿ ಜಾತ್ರೆ ನಡೆಯುತ್ತದೆ.

sigandur-temple

ಬೇರೆ ಬೇರೆ ವಲಯಗಳಿಂದ ಹಲವಾರು ಭಕ್ತರು ಸಂಕ್ರಾಂತಿಯ ಸಂದರ್ಭದಲ್ಲಿ ಸಿಗಂಧೂರು ಪಟ್ಟಣದಲ್ಲಿ ಸೇರುತ್ತಾರೆ. ಈ ದೇವಾಲಯಕ್ಕೆ ಬರುವವರ ಸಂಖ್ಯೆಯು ಅಪಾರವಾದ್ದರಿಂದ ಇಲ್ಲಿಗೆ ಬರಲು ಆಸಕ್ತಿಯಿರುವವರು ಪ್ರವೇಶ ಕೂಪನ್ ಅನ್ನು ಪಡೆಯಬೇಕು. ಇಲ್ಲಿ ಮೊದಲು ಬಂದವರಿಗೆ ಮೂದಲು ಆದ್ಯತೆ ನೀಡಲಾಗುತ್ತದೆ. ಧಾರ್ಮಿಕ ಪಾವಿತ್ರತ್ಯೆಯ ಜೊತೆಗೆ ಪ್ರವಾಸಿಗರ ಕಣ್ಮನ ಸೆಳೆಯುವ ಕ್ಷೇತ್ರವಾಗಿ ಈಚೆಗೆ ಬೆಳೆಯುತ್ತಿದೆ. ಇದಕ್ಕೆ ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಇದೆ ಎಂದು ಸ್ಥಳೀಕರ ಅಭಿಪ್ರಾಯ. ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಎರಡು ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ, ಶುಕ್ರವಾರಗಳಲ್ಲಿ ವಿಶೇಷ ಪೂಜೆ ಇದೆ. ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುವಾಗ ಶರಾವತಿ ನದಿ ಹಾಗೂ ಕಾಡನ್ನು ದಾಟಿ ಬರಬೇಕು. ಈ ಪ್ರಯಾಣವು ಅತ್ಯಂತ ರೋಮಾಂಚನಕಾರಿಯಾ ಅನುಭವ ಸಿಗುತ್ತದೆ.

sigandur-lanch

ಯಾವ ಕ್ಷೇತ್ರದಲ್ಲುಯೂ ಇಲ್ಲದ ವಿಶೇಷತೆ ಸಿಂಗಧೂರಿನಲ್ಲಿ  ಕ್ಷೇತ್ರದಲ್ಲಿ ದೆ. ಕಳ್ಳರಿಂದ ತಮ್ಮ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ದತಿಯಿದೆ, ಜಮೀನು, ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಲ್ಲಿಳಲ್ಲಿ ವಸ್ತುಗಳಿಗೆ “ಶ್ರೀ ದೇವಿಯ ರಕ್ಷಣೆ ಇದೆ” ಎಂಬ ಬೋರ್ಡ್ ಹಾಕಿದರೆ ಕಳ್ಳತನವಾಗುವುದಿಲ್ಲ, ಒಂದೊಮ್ಮೆ ಕಳ್ಳನಿಗೆ ಗೊತ್ತಾಗದೇ ಕದ್ದರೂ ಅವನಿಗೆ ತೊಂದರೆಯಾಗಿ ಕದ್ದ ಮಾಲನ್ನು ವಾಪಾಸು ತಂದಿಟ್ಟು ಹೋಗುತ್ತಾನೆ. ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿ ಶ್ರೀ ದೇವಿಯ ರಕ್ಷಣೆಯ ಬೋರ್ಡ್ಗಳನ್ನು ಕಾಣಬಹುದು.

sigandur-1

ಶ್ರೀ ಸಿಗಂಧೂರಿಗೆ ಹೋಗುವ ಮಾರ್ಗ: ಸಾಗರದಿಂದ ೩೨ ಕಿ.ಮಿ. ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿ ಹಿನ್ನೀರನ್ನು (ಲಿಂಗನಮಕ್ಕಿ ಜಲಾಶಯ) ಲಾಂಚ್ ಮುಖಾಂತರ ದಾಟಿ ಹೋಗಬೇಕು.

(ಶ್ರೀ ಸಿಗಂಧೂರು,  ತಾಲ್ಲೂಕು: ಸಾಗರ, ತಾಲ್ಲೂಕು ಕೇಂದ್ರದಿಂದ: ೫೦ ಕಿ.ಮೀ. ಜಿಲ್ಲಾ ಕೇಂದ್ರದಿಂದ: ೧೩ ಕಿ.ಮೀ ದೂರವಿದೆ.)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top