fbpx
god

ನಿಸರ್ಗದ ಸುಂದರ ಪರಿಸರದಲ್ಲಿ ನೆಲೆಸಿರುವ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯ ಮಹತ್ವ

ಪ್ರಶಾಂತವಾಗಿ ಹರಿಯುವ ಸೌಪರ್ಣಿಕಾ ನದಿಯ ತೀರದಲ್ಲಿರುವ ಕೊಲ್ಲೂರಿನ ಮೂಕಾಂಬಿಕೆಯ ದರ್ಶನ ಪಡೆದರೆ ಬಾಳು ಧನ್ಯ ಎಂಬುದು ಹಲವು ವರ್ಷಗಳಿಂದ ಮೂಡಿಬಂದಿರುವ ನಂಬಿಕೆ. ಕೊಡಚಾದ್ರಿ ಪರ್ವತದ ಸುಂದರ ನೋಟ,  ದಟ್ಟವಾದ ಕಾನನದ ನಡುವೆ ನಿಸರ್ಗದ ರಮಣೀಯ ಸುಂದರ ಪರಿಸರದ ಕೊಲ್ಲೂರಿನಲ್ಲಿ ನೆಲೆಸಿರುವ ಮೂಕಾಂಬಿಕೆ, ದುಷ್ಟಶಿಕ್ಷಣೆ ಶಿಷ್ಟರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಚತುರ್ಭುಜಳಾಗಿ ಶಂಖ, ಚಕ್ರ, ಅಭಯ ಮತ್ತು ವರದ ಮುದ್ರೆಯಲ್ಲಿ ಪದ್ಮಾಸನಾರೂಢಳಾಗಿರುವ ಪಂಚಲೋಹದ ಸುಂದರ ಪ್ರತಿಮೆಯ ರೂಪದಲ್ಲಿರುವ ತಾಯಿಯನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎಂದು ಹಿರೀಕರು ಹೇಳುತ್ತಾರೆ.

mookambike

ಮೂಕಾಂಬಿಕಾ ದೇವಿಗೆ ಸಮರ್ಪಿಸಲಾದ ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು (ಕನ್ನಡ:ಮೂಕಾಂಬಿಕಾ ದೇವಿ), ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಜನರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಸೊಂಪಾಗಿ ರಸಭರಿತವಾಗಿರುವ ಹಸಿರು ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟದಿಂದ ಸಾದರಪಡಿಸಲ್ಪಟ್ಟಿರುವ ಚಿತ್ರಸದೃಶ ಪರಿಸರದಲ್ಲಿ, ಮಂಗಳೂರಿನಿಂದ ೧೪೭ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನವು ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಪೂಜ್ಯಭಾವನೆಯಿಂದ ಕಾಣಲ್ಪಡುವ ಹಿಂದೂ ಸಂತ ಮತ್ತು ವೈದಿಕ ವಿದ್ವಾಂಸ ಆದಿ ಶಂಕರರೊಂದಿಗೆ ಈ ದೇವಸ್ಥಾನವು ಸಂಬಂಧವನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದ, ಭಕ್ತ-ಸಮುದಾಯಕ್ಕೆ ಸಂಬಂಧಿಸಿದಂತೆ ಇದು ಅಗಾಧವಾದ ಪ್ರಸ್ತುತತೆಯನ್ನು ಹೊಂದಿದೆ.

shankaracharya

adi-shankaracharya

ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವೊಂದನ್ನು ಸ್ಥಾಪಿಸುವ ಪರಿಕಲ್ಪನೆಯನ್ನು ಆದಿ ಶಂಕರರು ಗ್ರಹಿಸಿದರು ಮತ್ತು ಸುಮಾರು ೧೨೦೦ ವರ್ಷಗಳಷ್ಟು ಹಿಂದೆಯೇ ದೇವಸ್ಥಾನದಲ್ಲಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಮೂಕಾಂಬಿಕಾ ದೇವತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವಿರ್ಭವಿಸುವಿಕೆ ಅಥವಾ ಅವತಾರ ಎಂಬುದಾಗಿ ಪರಿಗಣಿಸಲ್ಪಟ್ಟಿರುವುದರಿಂದ, ಮೂಕಾಂಬಿಕಾ ದೇವಿಯ ದೇವಸ್ಥಾನದಲ್ಲಿ ಜನರು ಅತೀವವಾದ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ, ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ ‘ಸಪ್ತ ಮುಕ್ತಿಸ್ಥಳ’ ತೀರ್ಥಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಆ ತಾಣಗಳೆಂದರೆ: ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ.

ಈ ದೇವಿಯ ಪ್ರತಿಷ್ಠಾಪಿಸುವ ಮುನ್ನ ಇಲ್ಲಿ ಜ್ಯೋತಿರ್ಲಿಂಗವಿತ್ತು. ಕೋಲ ಮಹರ್ಷಿಗಳು ತಪವನ್ನಾಚರಿಸುತ್ತಿದ್ದ ಈ ಸ್ಥಳದಲ್ಲಿ ಈ ಲಿಂಗ ಉದ್ಭವಿಸಿತಂತೆ. ಇಂದೂ ದೇವಾಲಯದ ಮೂರ್ತಿಯ ಎದುರು ಇರುವ ನೆಲ ಅಂತಸ್ತಿನ ಅನತಿ ದೂರದಲ್ಲಿ ಈ ಪುರಾತನ ಜೋತಿರ್ಲಿಂಗ ದರ್ಶನ ಮಾಡಬಹುದು.

ಕೊಲ್ಲೂರು ಮೂಕಾಂಬಿಕಾದೇವಿ,  ಈ ಜ್ಯೋತಿರ್ಲಿಂಗವು ಎರಡು ಅಸಮಾನ ಭಾಗವಾಗಿ ಬಂಗಾರದ ರೇಖೆಯಿಂದ ವಿಭಜಿಸಲ್ಪಟ್ಟಿದೆ. ಈ ರೇಖೆಯು ಸೂರ್ಯ ಕಿರಣದಲ್ಲಿ ಗೋಚರಿಸುತ್ತದೆ. ಭಕ್ತರಿಗೆ ಕನ್ನಡಿಯ ಸಹಾಯದಿಂದ ರೇಖೆಯ ದರ್ಶನ ಮಾಡಿಸಲಾಗುತ್ತದೆ. ಈ ದೇವಾಲಯದ ಬಗ್ಗೆ ಸ್ಕಂದ ಪುರಾಣದಲ್ಲಿ ಕೂಡ ಉಲ್ಲೇಖವಿದೆ. ಇದು ದೇಗುಲದ ಪ್ರಾಚೀನತೆಯನ್ನು ಸೂಚಿಸುತ್ತದೆ.

%e0%b2%95%e0%b3%8a%e0%b2%b2%e0%b3%8d%e0%b2%b2%e0%b3%82%e0%b2%b0%e0%b3%81-%e0%b2%ae%e0%b3%82%e0%b2%95%e0%b2%be%e0%b2%82%e0%b2%ac%e0%b2%bf%e0%b2%95%e0%b3%86-2

ಪೂಜಾ ಕೈಂಕರ್ಯ: ಇಲ್ಲಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೇ ಪೂಜಾಕೈಂಕರ್ಯಗಳು ಪ್ರಾರಂಭವಾಗುತ್ತವೆ. ಇದಕ್ಕೆ ಉದಯಕಾಲದ ಪೂಜೆ ಎನ್ನುತ್ತಾರೆ. ಮಧ್ಯಾಹ್ನದ ಪೂಜೆಯ ಬಳಿಕ ರಾತ್ರಿ ಏಳು ಗಂಟೆಗೆ ಪ್ರದೋಷ ಪೂಜೆಯೂ ಜರುಗುತ್ತದೆ. ಈ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಗಣಿತ. ಕನ್ನಡಿಗರಿಗಿಂತ ಈ ದೇಗುಲಕ್ಕೆ ತಮಿಳುನಾಡು ಹಾಗೂ ಕೇರಳದಿಂದಲೇ ಹೆಚ್ಚು ಭಕ್ತರು ಆಗಮಿಸುತ್ತಾರೆ. ಮಂಗಳವಾರ ಹಾಗೂ ಶುಕ್ರವಾರಗಳಂದು ಇಲ್ಲಿ ಸಹಸ್ರಾರು ಜನ ದೇವಿಯ ದರ್ಶನ ಪಡೆಯುತ್ತಾರೆ.

yesudas

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂಜಿಆರ್ ದೇವಿಗೆ ಒಂದು ಕಿಲೋಗ್ರಾಂ ತೂಕದ ಚಿನ್ನದ ಖಡ್ಗ ಅರ್ಪಿಸಿದ್ದಾರೆ. ಪ್ರಖ್ಯಾತ ಗಾಯಕ ಏಸುದಾಸ್ ಪ್ರತಿವರ್ಷ ತಮ್ಮ ಹುಟ್ಟುಹಬ್ಬದ ದಿನ ಇಲ್ಲಿಗೆ ಬಂದು ತಾಯಿಗೆ ಸಂಗೀತಾರಾಧನೆ ಮಾಡುತ್ತಾರೆ. ಈ ದೇಗುಲದ ಪೂಜಾ ವಿಧಗಳಲ್ಲಿ ಸಲಾಂ ಪೂಜೆ ಕೂಡ ನಡೆಯುತ್ತದೆ. ದೇವಿಯ ಭಕ್ತರಾಗಿದ್ದ ಟಿಪ್ಪೂಸುಲ್ತಾನರ ಸ್ಮರಣಾರ್ಥ ಈ ಪೂಜೆ ನಡೆಯುತ್ತದೆ.

ಐತಿಹ್ಯ : ಹಿಂದೆ ಈ ಕ್ಷೇತ್ರ ಮಹಾರಣ್ಯಪುರ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಕೋಲ ಮಹರ್ಷಿಗಳು ಲೋಕಕಲ್ಯಾಣಾರ್ಥ ತಪವನ್ನಾಚರಿಸಿದರು. ಇವರ ಭಕ್ತಿಗೆ ಒಲಿದ ಶಿವನು ಅದೇ ಸ್ಥಳದಲ್ಲಿ ಪರಾಶಕ್ತಿಯನ್ನು ಪೂಜಿಸುವಂತೆ ಆಣತಿ ಇತ್ತನು. ಕೋಲ ಮಹರ್ಷಿಗಳು ತಪವನ್ನಾಚರಿಸಿದ ಭೂಮಿ ಕಾಲಾನಂತರದಲ್ಲಿ ಕೋಳಪುರಂ ಆಗಿ ಈಗ ಕೊಲ್ಲೂರಾಗಿದೆ. ಈ ಸ್ಥಳದಲ್ಲಿ ಮೂಕಾಂಬಿಕೆಯೂ ನೆಲೆಸಿದ್ದಾಳೆ. ಮೂಕಾಂಬಿಕೆಯ ಅವತಾರದ ಬಗ್ಗೆ ಒಂದು ಕಥೆ ಇದೆ.

samhara

ಅತ್ಯಂತ ದುಷ್ಟನಾಗಿದ್ದ ಕಮ್ಮಾಸುರ ಅಥವಾ ಕಾಮಾಸುರ ಎಂಬ ದೈತ್ಯ ಶಿವನಿಂದ ವರಪಡೆದು ತ್ರಿಭುವನವನ್ನೇ ತನ್ನ ಅತ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ದೇವಾದಿ ದೇವತೆಗಳ ಪ್ರಾರ್ಥನೆಗೆ ಒಲಿದ ಆದಿಪರಾಶಕ್ತಿಯು, ಶಿವ ಪ್ರತ್ಯಕ್ಷನಾಗಿ ಕೊಲ್ಲೂರು ಮೂಕಾಂಬಿಕಾದೇವಿ,  ಶಂಕರಾಚಾರ್ಯ ಪ್ರತಿಷ್ಠಾಪಿತ ಮೂಕಾಂಬಿಕೆ. ಕಾಮಾಸುರನಿಗೆ ವರನೀಡುವ ಸಮಯದಲ್ಲಿ ಅವನ ನಾಲಿಗೆಯ ಮೇಲೆ ಕುಳಿತು ಮಾತೇ ಹೊರಡದಂತೆ ಮಾಡಿ ಕಾಮಾಸುರನನ್ನು ಮೂಕನನ್ನಾಗಿಸಿದಳು.

ಅಸುರರ ಗುರುಗಳಾದ ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಮತ್ತೆ ಕಾಮಾಸುರನಿಗೆ ಮಾತು ಬರುವಂತೆ ಮಾಡಿದರು. ಆದರೆ, ಒಮ್ಮೆ ಮೂಕನಾಗಿದ್ದ ಕಾಮಾಸುರ ಮೂಕಾಸುರ ಎಂದೇ ಖ್ಯಾತನಾದ. ಮತ್ತೆ ಬ್ರಹ್ಮನಿಂದ ವರಪಡೆದು, ಬಲಿಷ್ಠನಾಗಿ ದೇವನುದೇವತೆಗಳನ್ನೂ – ಋಷಿ-ಮುನಿಗಳನ್ನೂ ನರರನ್ನೂ ಕಾಡತೊಡಗಿದೆ. ಈತನ ಪಾಪದ ಕೊಡ ತುಂಬಿದಾಗ ದೇವಿಯು ಸಿಂಹವಾಹಿನಿಯಾಗಿ ಆ ದೈತ್ಯನ ಸಂಹರಿಸಿದಳು. ಮೂಕಾಸುರನ ಕೊಂದ ದೇವಿ ಮೂಕಾಂಬಿಕೆ ಎಂದೇ ಹೆಸರಾದಳು.

ಹಬ್ಬ ಉತ್ಸವ : ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ಕೊಲ್ಲೂರಿನಲ್ಲಿ ರಥೋತ್ಸವ ಜರುಗುತ್ತದೆ. ಉತ್ತರಾ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9ದಿನದ ಕಾರ್ಯಕ್ರಮಗಳು ಮೂಲಾನಕ್ಷತ್ರದವರೆಗೆ ನಡೆಯುತ್ತವೆ. ಜ್ಯೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ ವಿಶೇಷ ಪೂಜೆಗಳು ಜರುಗುತ್ತವೆ.

%e0%b2%89%e0%b2%a4%e0%b3%8d%e0%b2%b8%e0%b2%b5

ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮಾ, ರಥೋತ್ಸವ, ಪುರ್ಣಕುಂಭಾ ಅಭಿಷೇಕ ಮೊದಲಾದವು ಜರುಗುತ್ತವೆ. ನವೆಂಬರ್ – ಡಿಸೆಂಬರ್ ತಿಂಗಳಿನಲ್ಲಿ ವನಭೋಜನ ಎಂಬ ವಿಶಿಷ್ಟ ಆಚರಣೆಯೂ ನಡೆಯುತ್ತದೆ. ಇದಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವೂ ನಡೆಯುತ್ತದೆ.

kollur-mukambika-%e0%b2%85%e0%b2%95%e0%b3%8d%e0%b2%b7%e0%b2%b0

ನವರಾತ್ರಿ ಉತ್ಸವದ ಕೊನೆಯ ದಿನದಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ, ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶವನ್ನು ನೀಡಲಾಗುತ್ತದೆ ಮತ್ತು ಇದು ವಿದ್ಯಾರಂಭದ ದ್ಯೋತಕವಾಗಿರುತ್ತದೆ. ಅದೇನೇ ಇದ್ದರೂ, ಈ ದೇವಸ್ಥಾನದಲ್ಲಿ ಯಾವುದೇ ಸೂಕ್ತವಾದ ದಿನದಂದು ವಿದ್ಯಾರಂಭದ ಕೈಂಕರ್ಯವನ್ನು ನಡೆಸಬಹುದಾಗಿದೆ. ಪ್ರತಿದಿನದ ಮಧ್ಯಾಹ್ನದ ಅವಧಿ ಮತ್ತು ಸಾಯಂಕಾಲಗಳಲ್ಲಿ ಇಲ್ಲಿ ಭಕ್ತರಿಗೆ ಅನ್ನದಾನವನ್ನು ಮಾಡಲಾಗುತ್ತದೆ.

ಸೌಪರ್ಣಿಕಾ ನದಿ

ಮೂಕಾಂಬಿಕಾ ದೇವಿಯ ಪವಿತ್ರಸ್ಥಳದಲ್ಲಿ ಹರಿಯುವ ಎರಡು ನದಿಗಳಾದ ಅಗ್ನಿತೀರ್ಥ ಮತ್ತು ಸೌಪರ್ಣಿಕಾ ಕೊಡಚಾದ್ರಿ ಬೆಟ್ಟಗಳಿಂದ ಉದ್ಭವವಾಗುತ್ತವೆ. ತಂಪಾದ ನೀರಿನ ಪುಟ್ಟ ಚಿಲುಮೆಯು ಕಾಲಭೈರವ ಮತ್ತು ಉಮಾಮಹೇಶ್ವರ ದೇವಸ್ಥಾನಗಳ ನಡುವೆ ನೆಲೆಗೊಂಡಿದ್ದು, ಇದೇ ಸೌಪರ್ಣಿಕಾ ನದಿಯ ಉಗಮಸ್ಥಾನವಾಗಿದೆ. ಇಲ್ಲಿನ ಐತಿಹ್ಯವು ಹೇಳುವ ಪ್ರಕಾರ, ಸುಪರ್ಣನು (ಗರುಡ) ತನ್ನ ತಾಯಿ ವಿನುತಾಳ ಅಳಲುಗಳನ್ನು ಉಪಶಮನಗೊಳಿಸಬೇಕೆಂದು ದೇವತೆಗೆ ಮೊರೆಯಿಡುತ್ತಾ ಈ ನದಿಯ ದಂಡೆಗಳ ಮೇಲೆ ಕುಳಿತು ಒಂದು ತಪಸ್ಸು ಮಾಡಿದ. ದೇವತೆಯು ಅವನ ಮುಂದೆ ಪ್ರತ್ಯಕ್ಷಳಾದಾಗ, ಈ ನದಿಯನ್ನು ಇನ್ನು ಮುಂದೆ ತನ್ನ ಹೆಸರಿನಿಂದ ಅದರೆ ಸುಪರ್ಣ ಎಂಬ ಹೆಸರನ್ನೊಳಗೊಂಡಂತಿರುವ ಹೆಸರಿನಿಂದ ಕರೆಯಬೇಕು ಎಂಬುದಾಗಿ ಅವನು ಪ್ರಾರ್ಥಿಸಿದ. ಆದ್ದರಿಂದ ಈ ನದಿಯನ್ನು ಸೌಪರ್ಣಿಕಾ ಎಂಬುದಾಗಿ ಕರೆಯಲಾಗುತ್ತದೆ. ಆತ ತಪಸ್ಸಿಗೆ ಕುಳಿತುಕೊಂಡಿದ್ದ ಎಂದು ಹೇಳಲಾಗುವ ತಾಣದಲ್ಲಿ ಈಗಲೂ ಒಂದು ಪುಟ್ಟ ಗವಿಯಿದ್ದು, ಅದನ್ನು “ಗರುಡನ ಗವಿ” ಎಂದೇ ಕರೆಯಲಾಗುತ್ತದೆ.

nadi

ಈ ನದಿಯು ಹರಿಯುತ್ತಾ ಹೋಗುವಾಗ ೬೪ ವಿಭಿನ್ನ ಔಷಧೀಯ ಸಸ್ಯಗಳು ಹಾಗೂ ಬೇರುಗಳ ಅಂಶ-ಧಾತುಗಳನ್ನು ಹೀರಿಕೊಳ್ಳುವುದರಿಂದ, ಈ ನದಿಯಲ್ಲಿ ಸ್ನಾನಮಾಡುವವರ ಎಲ್ಲಾ ಕಾಯಿಲೆಗಳನ್ನೂ ಇದು ವಾಸಿಮಾಡುತ್ತದೆ ಎಂಬ ನಂಬಿಕೆಯು ಇಲ್ಲಿ ಮನೆಮಾಡಿದೆ. ಆದ್ದರಿಂದ, ಈ ನದಿಯಲ್ಲಿನ ಒಂದು ಸ್ನಾನವು ಪ್ರಾಮುಖ್ಯತೆಯನ್ನು ಪಡೆದಿದೆ ಮತ್ತು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.

ಪ್ರಯಾಣ : ಜಗನ್ಮಾತೃಕೆಯಾದ ಮೂಕಾಂಬಿಕೆಯು ನೆಲೆಸಿಹ ಈ ಪುಣ್ಯಭೂಮಿ ಮಂಗಳೂರಿನಿಂದ ಕೇವಲ 14೦ ಕಿ.ಮೀಟರ್ ದೂರದಲ್ಲಿದೆ. ಮಂಗಳೂರಿನಿಂದಿಲ್ಲಿಗೆ ಉಡುಪಿ, ಕುಂದಾಪುರ ಮಾರ್ಗದಲ್ಲಿ ಮೂರೂವರೆ ಗಂಟೆಗಳ ಪ್ರಯಾಣ. ಬೆಂಗಳೂರಿನಿಂದ ಕೊಲ್ಲೂರಿಗೆ ನೇರ ಬಸ್ ಸೌಕರ್ಯವೂ ಇದೆ. ಮಂಗಳೂರಿನವರೆಗೆ ವಿಮಾನ ಹಾಗೂ ರೈಲು ಸೌಕರ್ಯವೂ ಇದೆ.

ವಸತಿ ಸೌಕರ್ಯ : ದೇವಿಯ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಅತಿಥಿಗೃಹ ನಿರ್ಮಿಸಿದೆ, ಸೌಪರ್ಣಿಕಾ ಅತಿಥಿಗೃಹ ಸಂಕೀರ್ಣ, ಗೊಯಂಕಾ ಅತಿಥಿಗೃಹ, ಶೃಂಗೇರಿಯ ಶಂಕರಕೃಪಾ ಅತಿಥಿಗೃಹ,  ಶ್ರೀರಾಮಕೃಷ್ಣಾಶ್ರಮದ ಅತಿಥಿಗೃಹ, ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಬಂಗಲೆ ಹಾಗೂ ಹಲವಾರು ವಸತಿಗೃಹಗಳೂ ಇಲ್ಲಿವೆ.

ಇಲ್ಲಿಂದ ಕುಂದಾಪರ ಬಳಿಯ ಆನೇಗುಡ್ಡೆ ಗಣೇಶನ ದರ್ಶನ ಮಾಡಿ, ಅಲ್ಲಿಂದ ಕೋಟೇಶ್ವರದಲ್ಲಿ ಶಿವನನ್ನು ಕಂಡು, ಶ್ರೀಕೃಷ್ಣನ ಆಡುಂಬೋಲ ಉಡುಪಿಯಲ್ಲಿ ಕಡಗೋಲು ಕೃಷ್ಣನ ಕಂಡು ಮಲ್ಪೆ, ಸೇಂಟ್‌ಮೇರಿ ದ್ವೀಪಗಳಿಗೂ ಹೋಗಿಬರಬಹುದು.

ಕೊಲ್ಲೂರಿನ ಬಗ್ಗೆ ಹೆಚ್ಚಿನ ವಿವರಗಳಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು, ಕರ್ನಾಟಕ – 576220 ಇವರನ್ನು ಸಂಪರ್ಕಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top