fbpx
News

ಮುಸುಕಿನೊಳಗೆ ಮನ್ವಂತರ-ಸಿಗುವುದೇ ತಲಾಕ್ ಪದ್ದತಿಗೆ ತಲಾಕ್!

ದಕ್ಷಿಣ ಕನ್ನಡತಾಲೂ ಜಿಲ್ಲೆ ಪುತ್ತೂರು ತಾಲುಕು ಬಡಗನ್ನೂರಿನ ಫಾತಿಮತ್ ರಾಹಿಲಾ ಭಾರತ ಸಂಸ್ಕೃತಿ ಪ್ರತಿಷ್ಟಾನ ಪ್ರತಿವರ್ಷ್ ಏರ್ಪಡಿಸುವ ಬಾಲ ರಾಮಾಯಣ ಹಾಗೂ ಕಿಶೋರ ಮಹಾಭಾರತ ಪರೀಕ್ಷೆಯಲ್ಲಿ ಪುತ್ತೂರು ಕಿಗೆ ಪ್ರಥಮಸ್ಥಾನ ಪಡೆದರೆ, ಮೇರಠ್‌ನ ಏಳುವರ್ಷದ ಅಂಧ ಮುಸ್ಲಿಂ ಬಾಲೆ ರಿದಾ ಜೆಹ್ರಾನ್‌ಗೆ ಭಗವದ್ಗೀತೆ ಸಲೀಸು, ಕಣ್ಣಿಲ್ಲದಿದ್ದರೂ ಭಗವದ್ಗೀತೆಯನ್ನು ಕೇಳಿ ಕಂಠಪಾಠ ಮಾಡಿಕೊಂಡು ಕಲಿತಿದ್ದಾಳೆ, ಇದಲ್ಲದೇ ಕಳೆದವರ್ಷದ ಕೊನೆಯಲ್ಲಿ ಸೌದಿ ಅರೇಬಿಯಾದಲ್ಲಿ ನೆಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಮಾಡಿಕೊಟ್ಟದ್ದು ಸಂಪ್ರಾದಾಯದ ಸಂಕೋಲೆಯಲ್ಲಿ ಮಹಿಳೆಯರನ್ನು ಕಟ್ಟಿಹಾಕಿದ್ದ ಸೌದಿಯಲ್ಲಿ ಇದೊಂದು ಉತ್ತಮಬೆಳವಣಿಗೆಯಾದರೆ, ಭಯೋತ್ಪಾದಕರ ನೆರಳಲ್ಲೆ ಬದುಕುತ್ತಿರುವ, ಎಲ್ಲಿ ಯಾವಾಗ ಬಾಂಬ್ ಸ್ಪೋಟಿಸುತ್ತದೋ ಎಂದು ಜೀವ ಕ್ಯೆಯಲ್ಲಿ ಹಿದಿದುಕೊಂಡು ಬದುಕುತ್ತಿರುವ ಇರಾನ್ ನಲ್ಲಿ ಮಹಿಳಯರಿಗಾಗಿ 43 ವರ್ಷಗಳ ನಂತರ ಸೌಂದರ್ಯ ಸ್ಪರ್ಧೆ ನೆಡೆದದ್ದು ಅಚ್ಚರಿಯೆಂದರೆ ತಪ್ಪಾಗಲಾರದು.

ಮೇಲಿನ ಉದಾಹರೆಣೆಗಳನ್ನು ಹೇಳಲು ಕಾರಣ ಹಲವು ಕಟ್ಟುಪಾಡುಗಳನ್ನು ಮಹಿಳೆಯರಿಗೆ ವಿಧಿಸಿರುವ ಮುಸ್ಲಿಂ ರಾಷ್ಟ್ರಗಳು ನಿಧಾನವಾಗಿ ಬದಲಾಗುತ್ತಿದೆ, ಸಂಸ್ಕೃತಿ ಧರ್ಮದ ಹೆಸರಲ್ಲಿ ಮಹಿಳೆಯರನ್ನು ಹೆಣ್ಣುಮಕ್ಕಳನ್ನು ನಾಲ್ಕುಗೋಡೆಯ ಮಧ್ಯೇ ಕಟ್ಟಿಹಾಕಿದ್ದ ದೇಶಗಳು ನಿಧಾನವಾಗಿ ಮಹಿಳೆಯರ ಮೇಲಿನ ಕಟ್ಟುಪಾಡುಗಳನ್ನು ಸಡಿಲಗೋಳಿಸುತ್ತಿದೆ, ಅದರೆ ಪ್ರಜಾಪ್ರಭುತ್ವ ಸ್ವತಂತ್ರ ರಾಷ್ಟ್ರವಾದ ಭಾರತದಲ್ಲಿ ಮಾತ್ರ ಇನ್ನೂ ಮುಸ್ಲಿಂ ಅಂಧ ಕಟ್ಟುಪಾಡುಗಳ ಚೌಕಟ್ಟಿನಿಂದ ಹೊರಗೆ ಬಂದಿಲ್ಲಾ!ಅದರೂ ಕೆಲವೊಂದು ಅಮಾನವೀಯ ಮಹಿಳಾ ಶೋಷಣೆಯ ವಿರುದ್ದ ನಿಧಾನವಾಗಿ ಧ್ವನಿ ಏಳುತ್ತಿದೆ, ಇಂತಹ ಕಟ್ಟರ್ ಸಂಪ್ರದಾಯವಾದಿ ರಾಷ್ಟ್ರಗಳೆ ಬದಲಾಗುತ್ತಿರುವಾಗ ಭಾರತದಲ್ಲೂ ಮುಸ್ಲಿಂ ತಲಾಕ್ ಪದ್ದತಿಯ ವಿರುದ್ದ ನಿಧಾನವಾಗಿ ದ್ವನಿಯೆದ್ದಿದೆ. ಶೋಷಿತ ಮುಸ್ಲಿಂ ಮಹಿಳೆಯರ ವ್ಯಥೆಯ ಕಥೆ ನೆನ್ನೆ ಮೊನ್ನೆಯದಲ್ಲ, ಶತಮಾನಗಳಿಂದಲೂ ಅವರ ಶೋಷಣೆ ನೆಡೆಯುತ್ತಲೇ ಇದೆ, ಮೂಡ ನಂಬಿಕೆಗಳಿಲ್ಲಿ ಮುಳುಗಿರುವ ಸಂಪ್ರದಾಯವಾದಿಗಳ ಹಿಡಿತದಲ್ಲಿ ಸಿಕ್ಕು ನಲುಗುತ್ತಿದ್ದಾರೆ, ವಿಶೇಷವಾಗಿ ಅಮಾನುಷವಾದ ತಲಾಕ್ ಪದ್ದತಿ ಅವರಲ್ಲಿ ಬಹಳಷ್ಟು ಮಹಿಳೆಯರ ಜೀವನವನ್ನು ನರಕವನ್ನಾಗಿ ಮಾಡಿದೆ.

ವ್ಯೇದ್ಯಕೀಯ ಚಿಕೆತ್ಸೆಗೆಂದು ಉತ್ತರಾಖಂಡ್‌ನ ತನ್ನ ಹೆತ್ತವರ ಮನೆಗೆ ಹೋದ ಶಾಯಿರಾಬಾನುಗೆ ಅತನ ಗಂಡ ಪತ್ರಬರೆಯುವ ಮೂಲಕ ವಿಚ್ಚೆಧನ ನೀಡಿದ್ದ, ಅತನನ್ನು ಸಂಪರ್ಕಿಸಲು ಹದಿನ್ಯೆದು ವರ್ಷಗಳಿಂದ ಪ್ರಯತ್ನಿಸಿದ ಶಾಯಿರಾಬಾನುಗೆ ಸಿಕ್ಕಿದು ಬರಿ ನಿರಾಸೆ, ,ಈಕೆ ತನ್ನ ಮಕ್ಕಳನ್ನು ಬೆಳೆಸಲು ಪಟ್ಟ ಕಷ್ಟ ಅಷ್ಟೀಷ್ಟಲ್ಲಾ, ಕೊನೆಗೆ ಈಕೆ ಕಳೆದ ಅಕ್ಟೋಬರ್‌ನಲ್ಲಿ ಈ ತ್ರಿವಳಿ ತಲಾಕ್ ಪದ್ದತ್ತಿಯನ್ನೇ ನೀಷೇಧಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾಳೆ, ಇದು ಬರಿ ಶಾಯಿರಾಭಾನುವಿನ ಕಥೆಯಲ್ಲ, ಪ್ರತಿವರ್ಷ ಇಂತಹ ಸಾವಿರಾರು ಕೇಸುಗಳು ಮುಂಬ್ಯೆನ ಭಾರತೀಯ ಮಹಿಳಾ ಮುಸ್ಲಿಂ ಅಂಧೋಲನ ಕಛೇರಿಗೆ ಬರುತ್ತದೆ,ಈ ತ್ರಿವಳಿ ತಲಾಕ್ ಪದ್ದತಿಯನ್ನು ನೀಷೇದಿಸಬೇಕೆಂದು ಹೋರಾಡುತ್ತಿರುವ ಈ (BMMA) ಮಹಿಳಾ ಸಂಘಟನೆ ಭಾರತದಾದ್ಯಂತ ಅಮಾನವೀಯ ತ್ರಿವಳಿ ತಲಾಕ್‌ನಿಂದ, ಪತ್ರಗಳ, ಎಸ್ ಎಂ ಎಸ್ ಮೂಲಕ ತಲಾಕ್ ಪಡೆದು ನೊಂದ ಸಾವಿರಾರು ಮಹಿಳೆಯರ ಬಗ್ಗೆ ಮಾಹಿತಿ ಕಲೆಹಾಕಿ ಅದನ್ನು ಕೊರ್ಟ್‌ಗೆ ಸಲ್ಲಿಸಿದೆ,ನ್ಯಾಯಾಲಯ ಈ ಧಾಖಲೆಗಳನ್ನು ಪರಿಶೀಲಿಸಿ ನೊಂದವರಿಗೆ ನ್ಯಾಯ ಕೊಡಿಸುತ್ತದೆ ಎಂಬ ಭರವಸೆ ಇದೆ ಎಂದು BMMA ನೂರ್ ಜಹಾನ್ ಹೇಳುತ್ತಾರೆ, ಈ ತ್ರಿವಳಿ ತಲಾಕ್ ಅಮಾನವೀಯ ಹಾಗೂ ಇಸ್ಲಾಂಧರ್ಮಕ್ಕೆ ವಿರೋದವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ,

ಮೌಕಿಕವಾಗಿ ಮೂರುಬಾರಿ ತಲಾಕ್ ಹೇಳಿ ವ್ಯೆವಾಹಿಕ ಜೀವನದಿಂದ ಹೆಂಡತಿಯನ್ನು ಹೊರದೂಡುವ ಕ್ರಮದ ವಿರುದ್ದ ಈಗ ಮುಸ್ಲಿಂ ಮಹಿಳೆಯರು ದ್ವನಿ‌ಎತ್ತಿದ್ದಾರೆ, ಮೌಕಿಕವಾಗಿ ತಲಾಕ್ ಹೇಳಿ ವಿಚ್ಚೇಧನ ಪಡೆಯುವ ಕ್ರಮವನ್ನು ನೀಷೆಧಿಸಬೇಕೆಂದು ದ್ವನಿ ಎತ್ತಿದ್ದಾರೆ, ಈ ಮೌಕಿಕ ತಲಾಕ್ ನಿಂದ ಅಮಾಯಕ ಹೆಣ್ಣುಮಕ್ಕಳ ಬದುಕು ಬರಡಾಗುತ್ತಿದೆ, ಇದೊಂದು ಸಾಮಾಜಿಕ ಪಿಡುಗಾಗಿದ್ದು ಮುಸ್ಲಿಂ ಪುರುಷರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ಈ ಪದ್ದತ್ತಿಯನ್ನು ನೀಷೇಧಿಸಬೇಕೆಂದು ಕಳೆದ ವರ್ಷ ಮುಂಭಾಯಿಯಲ್ಲಿ ಮುಸ್ಲಿಂ ಮಹಿಳೆಯರು ದೊಡ್ಡ ಜಾಥವನ್ನು ಅಯೋಜಿಸಿದ್ದರು, ಸಣ್ಣದಾಗಿ ಪ್ರಾರಂಭವಾದ ಈ ಅಂದೋಲನ ಈಗ ದೊಡ್ದ ಪ್ರಮಾಣದಲ್ಲಿ ನೆಡೆಯುತ್ತಿದೆ, ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ ಸಂಘಟನೆ ತಲಾಕ್ ಪದ್ದತಿಯಿಂದ ಮುಸ್ಲಿಂ ಮಹಿಳೆಯರ ಬದುಕು ಹದಗೆಟ್ಟಿದ್ದು ಈ ಪದ್ದತಿಯನ್ನು ನಿಷೇಧಿಸುವಂತೆ ಅಗ್ರಹಿಸಿ ಇತ್ತಿಚೆಗೆ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಿದೆ, BMMA ಸಹ ಸಂಸ್ಥಾಪಕಿ ಜಾಕಿಯಾ ಸೋಮನ್ ಈ ಅಭಿಯನಕ್ಕೆ ಬೆಂಬಲ ಕೋರುವಂತೆ ಅಗ್ರಹಿಸಿದ್ದಾರಲ್ಲದೆ ಈ ವಿಷಯವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಂಗಳಕ್ಕೆ ಕೊಂಡೊಯ್ದಿದ್ದು ಮಹಿಳಾ ಆಯೋಗ ಸಹ ತಮ್ಮ ಅಭಿಯಾನಕ್ಕೆ ಬೆಂಬಲ ಸೂಚಿಸಬೇಕೆಂದು ಜಾಕಿಯ ಕೇಳಿಕೊಂಡಿದ್ದಾರೆ,ಈ ಅಭಿಯಾನವನ್ನು ಬೆಂಬಲಿಸಿ ಇದುವರೆಗೂ ಐವತ್ತು ಸಾವಿರಕ್ಕೂ ಅಧಿಕ ಮಂದಿ ಸಹಿಹಾಕಿ ಅಭಿಯಾನವನ್ನು ಬೆಂಬಲಿಸಿದ್ದಾರೆ,

ಮೂರುಬಾರಿ ತಲಾಕ್ ಹೇಳುವ ನಡುವೆ ಒಂದು ತಿಂಗಳ ಅಂತರವಿರಬೇಕು, ಅಂದರೆ ಮೊದಲ ಬಾರಿ ತಲಾಕ್ ಹೇಳಿದ ಒಂದು ತಿಂಗಳ ಬಳಿಕ ಎರಡನೆ ಬಾರಿ ಮತ್ತೆ ಒಂದು ತಿಂಗಳ ಬಳಿಕ ಮೂರನೆಯ ಬಾರಿ ತಲಾಕ್ ಹೇಳಬೆಕು, ಅಂದರೆ ಮೂರು ತಿಂಗಳ ಅಂತರದಲ್ಲಿ ಒಮ್ಮೊಮ್ಮೆ ತಲಾಕ್ ಎಂದು ಹೇಳಬೇಕು, ಈ ಅಂತರದಲ್ಲಿ ಪುರುಷರಿಗೆ ಯೋಚಿಸಲು ಹಾಗು ಸೂಕ್ತ ನಿರ್ಧಾರ ತೆಗೆದು ಕೊಳ್ಳಲು ಸಮಯವಿರುತ್ತದೆ, ಮೂರನೆಯ ಬಾರಿ ತಲಾಕ್ ಹೇಳಿದರೆ ಅದನ್ನು ಮಾನ್ಯಮಾಡಬೇಕೆಂದು “ಷರಿಯತ್ ನಿಯಮ” ಹೇಳುತ್ತದೆ, ಅದರೆ ಇತ್ತೀಚಿನ ದಿನಗಳಲ್ಲಿ ಎಸ್‌ಎಂಎಸ್, ಇ-ಮೈಲ್,ಸ್ಪೀಡ್ ಪೋಸ್ಟ್, ಮೊಬ್ಯೆಲ್ ಫ಼ೋನ್ ಹಾಗೂ ವಾಟ್ಸಪ್ ಮೂಲಕವೂ ತಲಾಕ್ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ತಲಾಕ್ ನೀಡಲು ಬಳಸುತ್ತಿರುವ ವಿಧಾನಗಳ ಬಗ್ಗೆಯೂ BMMA ಅಕ್ಷೇಪ ವ್ಯಕ್ತಪಡಿಸಿದೆ, ಕಳೆದ ವರ್ಷ ಈ BMMA ಮುಂಬಾಯಿಯ ಅಜಾದ್ ಮ್ಯೆದಾನದಲ್ಲಿ ಈ ತ್ರಿವಳಿ ತಲಾಖ್ ಪದ್ದತಿಯನ್ನು ವಿರೋದಿಸಿ ದೊಡ್ಡ ಜಾಥವನ್ನೇ ನೆಡೆಸಿತ್ತು.ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಇಂಥಹ ತಲಾಕ್ ಕೊಡುವ ಅಮಾನವೀಯ ಪದ್ದತಿ ಇದ್ದು ಇದನ್ನು ಈ ತ್ರಿವಳಿ ತಲಾಕ್ ಪದ್ದತಿಯ ಬಗ್ಗೆ ಪುನರ್ ಪರಿಶೀಲಿಸಿ ಬದಲಾವಣೆ ತರಬೇಕೆಂದು BMMA ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ,

ಕಟ್ಟಾ ಮುಸ್ಲಿಂ ಸಂಪ್ರದಾಯಸ್ತ ದೇಶಗಳಾದ ಜೊರ್ಡಾನ್, ಮೊರಾಕ್ಕೋ, ಇರಾನ್ ಇಜಿಪ್ಟ್, ಯೆಮನ್ ಅಷ್ಟೆ ಅಲ್ಲಾ ನಮ್ಮ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶ ಸೇರಿದಂತೆ ಹಲವಾರು ಮುಸ್ಲಿಂ ರಾಷ್ಟ್ರಗಳು ಈ ” ತ್ರಿವಳಿ ತಲಾಕ್” ಪದ್ದತಿಗೆ ತಲಾಕ್ ಕೊಟ್ಟಿದೆ, ಕೆಲ ಮುಸ್ಲಿಂ ಧರ್ಮಗುರುಗಳು BMMA ನೆಡೆಸುತಿರುವ ತಲಾಕ್ ಪದ್ದತಿಯ ನೀಷೇದದ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಕೆಲ ಮುಸ್ಲಿಂ ಧರ್ಮಗುರುಗಳು ಮಹಿಳೆಯ ಪರವಾಗಿ ನಿಂತಿರುವುದು ಸ್ವಾಗತಾರ್ಹ ವಿಚಾರ!ಭಾರತದಲ್ಲಿದ್ದ ಮೇಲೆ ಇಲ್ಲಿನ ವಿಚ್ಚೇಧನ ಕಾನೂನಿಗೆ ಗೌರವ ಕೊಡಬೇಕು, ಒಂದು ದೇಶ ಒಂದೇ ಕಾನೂನು ಹಾಗೂ ಅದನ್ನು ಪಾಲಿಸಬೇಕೆ ಹೊರತು ದರ್ಮದತ್ತವಾಗಿ ಬಂದ ಸಂಪ್ರದಾಯದ ತ್ರಿವಳಿ ತಲಾಕ್ ಪದ್ದತಿ ಭಾರತದ ಕಾನೂನಿಗೆ ವಿರುದ್ದವಾಗಿದೆಯೆಂದರೆ ತಪ್ಪೇನಿಲ್ಲಾ! BMMA ಹೋರಾಟಕ್ಕೆ ಜಯಸಿಕ್ಕು ಮುಸ್ಲಿಂ ಮಹಿಳೆಯರ ಶೋಷಣೆಗೆ ವಿರಾಮ ಬಿಳಬಹುದೇ?ತಲಾಕ್ ಪದ್ದತಿಗೆ ತಲಾಕ್ ಸಿಗಬಹುದೇ, ಯಾವುದಕ್ಕೂ ಕಾಲವೇ ಉತ್ತರಿಸಬೇಕು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top