ಕರ್ನಾಟಕ ಏಕೀಕರಣಗೊಂಡ 60ನೇ ವರ್ಷಾಚರಣೆ ಸಂಭ್ರಮದಲ್ಲಿರುವಾಗಲೇ, ಮತ್ತೊಂದು ಸಂತಸದ ಸುದ್ದಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಈಗಿರುವ ಕನ್ನಡ ಧ್ವಜ, ರಾಜ್ಯಧ್ವಜವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಘೋಷಿಸಿದರು. ಈ ಸಂಬಂಧ, ಸದ್ಯದಲ್ಲೇ ಆದೇಶ ಹೊರಬೀಳಲಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.
ಕನ್ನಡ ಧ್ವಜ ರಾಜ್ಯ ಧ್ವಜವಾಗಬೇಕೆಂಬುದು ಹಲವಾರು ದಶಕಗಳ ಆಗ್ರಹವಾಗಿದೆ. ಸುಮಂಗಲಿಯರ ಪಾವಿತ್ರ್ಯದ ಸಂಕೇತವಾಗಿರುವ ಅರಿಷಿಣ ಮತ್ತು ಕುಂಕುಮ ಬಣ್ಣವನ್ನು ಧ್ವಜದಲ್ಲಿ ಮೇಲೆ ಮತ್ತು ಕೆಳಗೆ ಧರಿಸಿರುವ ಕನ್ನಡ ಧ್ವಜ ಕರ್ನಾಟಕ ರಾಜ್ಯದ ಸಮೃದ್ಧಿಯ ಸಂಕೇತವೂ ಆಗಿದೆ.
Kannada Flag will be the official Karnataka Flag. The official announcement regarding this will be made soon: CM Siddaramaiah #Kannada pic.twitter.com/qSxdPXhspS
— Karnataka Varthe (@KarnatakaVarthe) November 8, 2016
ಹುಟ್ಟಿತು ಕನ್ನಡದ ಬಾವುಟ !!
ಅಂದಿನ ಕಾಲಕ್ಕೆ ತಮಿಳರು ಕೆಂಪು ಹಾಗೂ ಕಪ್ಪು ಮಿಶ್ರಿತ ಬಾವುಟವನ್ನು ತಮಿಳರ ಸಂಕೇತವಾಗಿ ಬಳಸುತ್ತಿದ್ದರು
ಕನ್ನಡ ಚಳುವಳಿಗಳ ರೂಪುರೇಷೆ ಸಿದ್ದಗೊಳ್ಳುತ್ತಿದ್ದಹಾಗೆ
ವಿಜಯನಗರದ ಸ್ಥಾಪಕರು ಹಕ್ಕಬುಕ್ಕರು ಇವರ ಆಸ್ಥಾನ ಬಾವುಟ ವಾರಾಹಿ ,ನಾಡ ದೇವತೆ ಚಾಮುಂಡೇಶ್ವರಿ ಇರುವ ಹಾಗೆ ಕನ್ನಡ ರಾಜ್ಯಕ್ಕೂ ಇದರ ಅವಶ್ಯಕತೆ ಮನಗೊಂಡು ಒಂದು ಹಳದಿ ಬಣ್ಣದ ಬಾವುಟ ಕರ್ನಾಟಕದ ನಕ್ಷೆ ಮದ್ಯದಲ್ಲಿ ಹಾಗೂ 7 ಭತ್ತದ ತೆನೆಗಳನ್ನು ಒಳಗೊಂಡಿರುತ್ತದೆ ಈ ಭತ್ತದ ತೆನೆಗಳು ಕನ್ನಡಿಗರು ಆಳಿದ ಸಪ್ತ ಸಾಮ್ರಾಜ್ಯದ ಪ್ರತೀಕ .
ನಂತರದ ದಿನಗಳಲ್ಲಿ ಬಾವುಟವು ಪೇಪರ್ನದಾದ್ದರಿಂದ ಬರೆಯಲು ಸ್ವಲ್ಪ ಕಷ್ಟವಾಗುತ್ತಿತ್ತು ಇದನ್ನು ಮನಗೊಂಡ ರಾಮಮೂರ್ತಿಗಳು ಇನ್ನೊಂದು ಬಾವುಟವನ್ನು ವಿನ್ಯಾಸಗೊಳಿಸುತ್ತಾರೆ ಅದುವೇ ಕೆಂಪು ಹಾಗೂ ಹಳದಿ ಬಾವುಟ .
ಈ ಬಾವುಟ ಇಂದಿಗೂ ಪ್ರಸ್ತುತ ಕನ್ನಡಿಗರ ಪ್ರೀತಿ ಇದು !!
ಈ ಬಾವುಟ ಕೆಲ ಮಾಧ್ಯಮಗಳು ಚಿತ್ರಿಸುವಹಾಗೆ
ಕೇವಲ 10 ರೂ ಒಳಗೆ ಸಿಗುವಂತದಲ್ಲ ,ಇನ್ಶೂರೆನ್ಸ್ ಕವರ್ ಮೊದಲೇ ಅಲ್ಲ , ಪ್ರತಿಭಟನಾಕಾರರ ಆಯುಧವಲ್ಲ ಬದಲಾಗಿ ಕನ್ನಡಿಗರ ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕ .
ಶಾಂತಿ ಹಾಗೂ ಕ್ರಾಂತಿಯ ರೂಪ .
ಕನ್ನಡದ ದೊರೆಗಳು ಕದಂಬರು ಕಟ್ಟಿದ ಭುವನೇಶ್ವರಿ ತಾಯಿ ಕನ್ನಡದ ಅಧಿ ದೇವತೆಯಾಗುತ್ತಾಳೆ.
ಕುವೆಂಪುರವರ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಘೋಷವಾಕ್ಯವಾಗುತ್ತದೆ
ಮ ರಾಮಮೂರ್ತಿಗಳು ಯಾರು ?
ಮ ರಾಮಮೂರ್ತಿಗಳು ಕರ್ನಾಟಕ ಕಂಡ ಶ್ರೇಷ್ಠ ಕನ್ನಡ ಪರ ಹೋರಾಟಗಾರರು , ತಮ್ಮ ತಂದೆ ವೀರ ಕೇಸರಿ ಸೀತಾರಾಮ ಶಾಸ್ತ್ರಿ ಗಳು ಪೌರಾಣಿಕ ಕಥೆಗಳನ್ನು ಬರೆಯುತ್ತಿದ್ದರು ಆದ ಕಾರಣ ರಾಮಮೂರ್ತಿಗಳು ಮನೆಯಲ್ಲಿ ಕನ್ನಡ ರಾಜರ ಕಥೆಗಳನ್ನು ಕೇಳಿ ಬೆಳಿದಿದ್ದ್ರು ಇದೆ ಮುಂದೆ ರಾಮಮೂರ್ತಿಗಳ ಕನ್ನಡ ಪರ ಅಪಾರ ಪ್ರೀತಿಗೆ ನಾಂದಿ ಆಯಿತು . ಇದಕ್ಕೆ ಮತ್ತಷ್ಟು ಇಂಬು ಕೊಟ್ಟದ್ದು ಅ.ನ ಕೃಷ್ಣರಾಯರ ಒಡನಾಟ
ಕಾಲಿಗೆ ಚಪ್ಪಲಿ ಹಾಗೂ ಹಾಕಿಕೊಳ್ಳಲು ಬಟ್ಟೆ ಇಲ್ಲದ ಕನ್ನಡ ಹೋರಾಟಗಾರರು !
ಪ್ರತಿಭಟನೆ ಹೊಟ್ಟೆ ತುಂಬಿಸಿತೇ ? ಖಂಡಿತ ಇಲ್ಲ
ರಾಮ ಮೂರ್ತಿಗಳು ತಮ್ಮ ಕೈಲಿದ್ದ ಹಣವನ್ನೆಲ್ಲ ಕೂಡಿಸಿ ಕನಕಪುರ ಬಳಿ ಸ್ವಲ್ಪ ಜಾಗವನ್ನು ಕೊಂಡು ಕೊಂಡು ತೋಟವನ್ನು ಮಾಡುವ ಉದ್ದೇಶ ಹೊಂದಿದ್ದರು ನೀರಾವರಿಗಾಗಿ ಏತದ ಬಾವಿಯನ್ನು ತೊಡಿಸುತ್ತಿದ್ದ ಸಮಯದಲ್ಲಿ ಬಾವಿಯಲ್ಲಿ ನೀರು ಜಿನುಗಿತ್ತು . ಕೆಲಸಗಾರನು ಈ ವಿಷಯವನ್ನು ರಾಮಮೂರ್ತಿಗಳಿಗೆ ಮುಟ್ಟಿಸಿದ್ದನು ಕೂಡಲೇ ವಿಶ್ವೇಶ್ವರ ಪುರದಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ಹೊರಟು ಬಂದ ಮೂರ್ತಿಗಳು ನೀರು ಜಿನುಗನ್ನು ನೋಡಲು ಬಾವಿಯಲ್ಲಿ ಇಳಿಯುತ್ತಾರೆ ಮೇಲೆ ಸಡಿಲವಾಗಿದ್ದ ಮಣ್ಣು ಕುಸಿದು ರಾಮ ಮೂರ್ತಿಗಳು ಹಾಗೂ ಅವರ ಇಬ್ಬರು ಗಂಡು ಮಕ್ಕಳು ಹಸುನೀಗುತ್ತಾರೆ .
ಮಾ. ರಾಮಮೂರ್ತಿ ಮಕ್ಕಳು
ಹಿಂದೆ ಆಲೂರು ವೆಂಕಟರಾಯರು , ಅ .ನ ಕೃಷ್ಣ ರಾಯರು ,ರಾಮ ಮೂರ್ತಿಗಳು ಇವರ ತಂಡ ನಡೆಸಿದ ಕನ್ನಡ ಚಳುವಳಿಗಳು ತರಾಸು ಹಾಗೂ ವಾಟಾಳ್ ನಾಗರಾಜರಿಂದ ಮುಂದುವರೆದು
ಇಂದು ಅನೇಕ ಕನ್ನಡ ಪರ ಸಂಘಟನೆಗಳು ಹುಟ್ಟಿಕೊಂಡಿವೆ ಕನ್ನಡ ಕಟ್ಟುವ ಕೆಲಸದಲ್ಲಿ ಮುಂದುವರಿಯುತ್ತಿವೆ
ಕನ್ನಡಕ್ಕೆ ಜಯವಾಗಲಿ !!.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
