fbpx
Editor's Pick

ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ …

50- 60 ಅಡಿ ಅಷ್ಟೇ ಎಂದು ಹೇಳಿ ಇಲ್ಲಿ ಬಂದು 100 ಅಡಿ ಎಂದ್ರು: ಉದಯ್

ಎಂತ ದುರಂತ ನೋಡಿ ಒಬ್ಬ ನಾಯಕನಿಗೆ ಎಲ್ಲ ಸುರಕ್ಷತೆ ಆದರೆ ಬೇರೆಯವರ ಜೀವಕ್ಕೆ ಬೆಲೆನೇ ಇಲ್ಲ

14993404_1464339663594772_8140565414140011841_n

ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಸಾಹಸ ಮಾಡುವಾಗ ಖಳನಟರಾದ ಅನಿಲ್ ಮತ್ತು ಉದಯ್ ದುರಂತ ಅಂತ್ಯ ಕಂಡಿದ್ದಾರೆ. ಹೆಲಿಕಾಪ್ಟರ್‍ನಿಂದ 100 ಅಡಿ ಮೇಲಿನಿಂದ ದುನಿಯಾ ವಿಜಯ್ ಹಾಗೂ ಖಳನಟರಾದ ಅನಿಲ್ ಹಾಗೂ ಉದಯ್ ಜಿಗಿಯಬೇಕಿತ್ತು. ಇದಕ್ಕೂ ಮುಂಚೆ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಅನಿಲ್ ಹಾಗೂ ಉದಯ್ ಮಾತನಾಡಿದ್ರು. ಏನ್ ಉದಯ್ ಅವರೇ ನಿಮಗೆ ಈಜು ಬರುತ್ತಾ? ಯಾವ ರೀತಿ ತಯಾರಿ ನಡೆಸಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಈಜು ಬರುತ್ತೆ. ಬಿದ್ದು ಎದ್ದು ಬರ್ತೀನಿ. ಇದಕ್ಕಾಗಿ ಯಾವುದೇ ತಯಾರಿ ನಡೆಸಿಲ್ಲ ಅಂದಿದ್ರು.

ಜಿಗಿಯಲಾ ಅಥವಾ ನಿರ್ದೇಶಕರಿಗೆ ಕೈ ಕೊಟ್ಟು ಓಡಿಹೋಗ್ಲಾ ಅಂತ ಯೋಚಿಸ್ತಿದ್ದೀರಾ ಅಂತ ವರದಿಗಾರರು ಕೇಳಿದ ಪ್ರಶ್ನೆಗೆ ಉದಯ್ ನಗುತ್ತಲೇ ಉತ್ತರಿಸಿದ್ರು. ಬಂದು ಸಿಕ್ಹಾಕೊಂಡು ಆಗಿದೆ. ಎಲ್ಲಿ ಓಡಿಹೋಗೋದು. ಹೋದ್ರೂ ಹಿಡ್ಕೊಂಡು ಬರ್ತಾರೆ ಎಂದು ಮಾತು ಆರಂಭಿಸಿದ ಉದಯ್, ತುಂಬಾ ಒಳ್ಳೇ ಅನುಭವ ಇದು. ಜೀವನದಲ್ಲಿ ಮೊದಲ ಬಾರಿಗೆ ಈ ರೀತಿಯ ಸಾಹಸ ಮಡುತ್ತಿದ್ದೇನೆ ಅಂದ್ರು.

ಈ ಸಾಹಸದ ಬಗ್ಗೆ ನಿನ್ನೆ ಹೇಳಿದಾಗ ನನಗೆ ಜ್ವರ ಇದೆ ಎಂದು ಹೇಳಿದ್ದೆ. ಏನಾದ್ರೂ ಬದಲಾವಣೆ ಮಾಡ್ತಾರೇನೋ ಅಂತ. ಪರವಾಗಿಲ್ಲ 50- 60 ಅಡಿ ಅಷ್ಟೆ ಎಂದು ಹೇಳಿ ಇಲ್ಲಿ ಬಂದು 100 ಅಡಿ ಅಂತ ಹೇಳ್ತಿದ್ದಾರೆ. ಏನೂ ಮಾಡೋಕೆ ಆಗಲ್ಲ. ಭಗವಂತನ ಮೇಲೆ ಭಾರ ಹಾಕಿ, ತಂದೆ ತಾಯಿ ಪ್ರೀತಿ ವಿಶ್ವಾಸ ಎಷ್ಟಿದೆ ಅಂತ ಇದ್ರಲ್ಲಿ ನೋಡ್ಬೇಕು ಅಷ್ಟೆ ಅಂತ ಹೇಳಿದ್ರು. ಆದ್ರೆ ಈ ರೀತಿ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಉದಯ್ ಮತ್ತು ಅನಿಲ್ ದುರಂತ ಅಂತ್ಯ ಕಂಡಿದ್ದಾರೆ.

actors-stunt-2_647_110716110213

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top