fbpx
cinema

ಮಾತಿಗೆ ಬದ್ಧ ಅಂತಾರೆ ಯಶ್: ಮಾಧ್ಯಮಗಳು ಏನೇನೋ ಅಂತಾರೆ!

ರೈತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕು. ಆ ನಿಟ್ಟಿನಲ್ಲಿ ತಮ್ಮ ಮಾತಿಗೆ ಬದ್ಧ ಎಂದು ನಟ ಯಶ್ ಪುನರುಚ್ಚರಿಸಿದ್ದಾರೆ. ಆದರೆ ಕೆಲವೊಂದು ಚಾನೆಲ್ ಗಳು ವೇದಿಕೆ ರೂಪಿಸುವ ಬದಲು ಯಶ್ ಕಾಲೆಳೆಯಲು ಹೋಗಿದ್ದು ವಿಪರ್ಯಾಸ.

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಯಶಸ್ಸಿನ ಕುರಿತ ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ಯಶ್, ಚಿತ್ರವನ್ನು ಯಶಸ್ಸುಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಚಿತ್ರದ ಬಗ್ಗೆ ಮಾತನಾಡುವುದಕ್ಕಿಂತ ನನ್ನ ವೈಯಕ್ತಿಕ ನಿರ್ಧಾರಗಳು ಪತ್ರಿಕಾಗೋಷ್ಟಿಗೆ ಅಡ್ಡವಾಗಬಾರದು ಎಂದು ಆರಂಭದಲ್ಲಿ ಹಿಂದೇಟು ಹಾಕಿದ್ಸೆ ಎಂದು ಒಪ್ಪಿಕೊಂಡರು.
ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಡಿನಲ್ಲಿ ಮಾಧ್ಯಗಳು ಕೇವಲ ಚರ್ಚೆ ನಡೆಸಿ ಕೈ ತೊಳೆದುಕೊಳ್ಳದೇ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೆಕು ಎಂಬುದು ನನ್ನ ನಿಲುವು ಎಂದರು.

ಯಾವುದೇ ಒಂದು ಟೀವಿಯಲ್ಲಿ ಕುಳಿತು ಚರ್ಚಿಸಲಾರೆ. ಎಲ್ಲರೂ ಒಂಸೆಡೆ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ನನ್ನ ಆಶಯ. ನೀವು ಕಾರ್ಯಕ್ರಮ ರೂಪಿಸಿದರೆ ಬರುತ್ತೇನರ. ಇಲ್ಲದಿದ್ದರೆ ನಾನೇ ಸಮಯ ನಿಗದಿ ಮಾಡಿ ಕರೆಯುತ್ತೇನೆ ಎಂದು ಯಶ್ ಹೇಳಿದ್ಸಾರೆ.

ಚರ್ಚೆಗೂ ಕಾರ್ಯಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಮಸ್ಯೆ ಬಗೆಹರಿಯುವುಸಾದರೆ ನಾನು ಈಗಲೇ ಬರಲು ಸಿದ್ಧ. ಪ್ರೈಮ್ ಟೈಮ್ ನಲ್ಲೇ ಇದು ಪ್ರಸಾರವಾಗಬೇಕು ಎಂದು ಯಶ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top