fbpx
Karnataka

ಇಂದು ನಮ್ಮ ಶಂಕರ್ ನಾಗ್ ಹುಟ್ಟುಹಬ್ಬ

ಇಂದು ನಮ್ಮ ಶಂಕರ್ ನಾಗ್  ಹುಟ್ಟುಹಬ್ಬ:ಭಾರತೀಯ ಚಿತ್ರರಂಗದಲ್ಲಿ ಎಂದೆಂದೂ ಅಳಿಯದ ಸಾಧನೆಗಳ ಸರದಾರ.. ಕನ್ನಡ ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನಗಳನ್ನು ತಂದ ನಿರ್ದೇಶಕ!! ಕನ್ನಡ ಸಿನಿರಸಿಕರು ಬಹಳಾ ಇಷ್ಟಪಡುವ ನಟ !! ಎಲ್ಲ ಆಟೋ ಡ್ರೈವರ್ ಗಳ ರೋಲ್ ಮಾಡೆಲ್, ಮಾಲ್ಗುಡಿ ಡೇಸ್ ಮುಕಾಂತರ ಕನ್ನಡ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ .. ಸೂಪರ್ ಸ್ಟಾರ್, ಕರಾಟೆ ಕಿಂಗ್ .. ‘ಶಂಕರ್ ನಾಗ್’ ಜನ್ಮದಿನ.

ಭಾರತೀಯ ಚಿತ್ರರಂಗಕ್ಕೆ ಅದರಲ್ಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಶಂಕರಣ್ಣ ಕೊಟ್ಟ ಕೊಡುಗೆಗಳನ್ನ ಯಾವ ಕನ್ನಡಿಗನೂ ಮರೆಯಲಾರ..

ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. (ಇಂದು ಶಂಕರ್ ನಾಗ್ 61ನೇ ಹುಟ್ಟುಹಬ್ಬ) ನಕ್ಷತ್ರ ನಾಮ’ಅವಿನಾಶ’. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿದರು . ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಶಿತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ “22 ಜೂನ್ 1897′ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.

ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು . ಶಂಕರ್ ನಾಗ್ ಪತ್ನಿ ಹಾಗೂ ಓರ್ವ ಮಗಳಾದ ಕಾವ್ಯ ಅವರನ್ನು ಅಗಲಿದರು ಶಂಕರ್ ನಾಗ್, ತಮ್ಮ ಪರಿವಾರವನ್ನಷ್ಟೇ ಅಲ್ಲ ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋಧ್ಯಮ ಅನಾಥ ವಾಯಿತೆಂದರೆ ತಪ್ಪಾಗಲಾರದು.

ಶಂಕ್ರಣ್ಣನಿಗೆ ಬಂದ ಪ್ರಶಸ್ತಿ, ಗೌರವ

*ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಕ್ಕಾಗಿ ಎರಡು ಬಾರಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.

*’ಆಕ್ಸಿಡೆಂಟ್’ ೧೯೮೮-೮೯ ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.

*ಕನ್ನಡ ಚಿತ್ರೋಧ್ಯಮಕ್ಕೆ ಕಂಪೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಜಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.

*ಸುಮಾರು ೯೦ ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್, ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅವರ ಚಿತ್ರಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರೂ ಮೆಚ್ಚಿಕೊಂಡದ್ದು ಶಂಕರರ ಹೆಗ್ಗಳಿಕೆ.

*ನಿಗೂಢ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.

ಶಂಕರ್‍ನಾಗ್ ಅಭಿನಯಿಸಿರುವ ಇತರ ಚಿತ್ರಗಳು

1)ಒಂದಾನೊಂದು ಕಾಲದಲ್ಲಿ – ೧೯೭೮. 2)ಸೀತಾ ರಾಮು – ೧೯೭೯. 3)ಐ ಲವ್ ಯು – ೧೯೭೯, 4)ಪ್ರೀತಿ ಮಾಡು ತಮಾಷೆ ನೋಡು – ೧೯೭೯, 5)ಮಧುಚಂದ್ರ – ೧೯೭೯,6)ಮಿಂಚಿನ ಓಟ – ೧೯೮೦,7)ಆಟೋರಾಜ – ೧೯೮೦, 8)ಮೂಗನ ಸೇಡು – ೧೯೮೦, 9)ಹದ್ದಿನ ಕಣ್ಣು – ೧೯೮೦, 10)ಒಂದು ಹೆಣ್ಣು ಆರು ಕಣ್ಣು – ೧೯೮೦, 11)ಆರದ ಗಾಯ – ೧೯೮೦,12)ರುಸ್ತುಮ್ ಜೋಡಿ – ೧೯೮೦, 13)ಜನ್ಮ ಜನ್ಮದ ಅನುಬಂಧ – ೧೯೮೦, 14)ಕುಲಪುತ್ರ – ೧೯೮೧,15)ಹಣಬಲವೋ ಜನಬಲವೋ – ೧೯೮೧,16)ಗೀತಾ – ೧೯೮೧,17)ದೇವರ ಆಟ – ೧೯೮೧ 18)ಭಾರಿ ಭರ್ಜರಿ ಬೇಟೆ – ೧೯೮೧ 19)ಮುನಿಯನ ಮಾದರಿ – ೧೯೮೧ 20)ಜೀವಕ್ಕೆ ಜೀವ – ೧೯೮೧ 21)ಅರ್ಚನ – ೧೯೮೨ 22)ಬೆಂಕಿ ಚೆಂಡು – ೧೯೮೨ 23)ಕಾರ್ಮಿಕ ಕಳ್ಳನಲ್ಲ – ೧೯೮೨ 24)ನ್ಯಾಯ ಎಲ್ಲಿದೆ? – ೧೯೮೨ 25)ಧರ್ಮ ದಾರಿ ತಪ್ಪಿತು – ೧೯೮೨  26)ಗೆದ್ದಮಗ – ೧೯೮೩  27)ನ್ಯಾಯ ಗೆದ್ದಿತು – ೧೯೮೩ 28)ಚಂಡಿ ಚಾಮುಂಡಿ – ೧೯೮೩  29)ಕೆರಳಿದ ಹೆಣ್ಣು – ೧೯೮೩  30)ಸ್ವರ್ಗದಲ್ಲಿ ಮದುವೆ – ೧೯೮೩  31)ಆಕ್ರೋಶ – ೧೯೮೩  32)ನೋಡಿ ಸ್ವಾಮಿ ನಾವಿರೋದು ಹೀಗೆ – ೧೯೮೩ 33)ನಗಬೇಕಮ್ಮ ನಗಬೇಕು – ೧೯೮೪  34)ರಕ್ತ ತಿಲಕ – ೧೯೮೪   35)ತಾಳಿಯ ಭಾಗ್ಯ – ೧೯೮೪    36)ಬೆಂಕಿ ಬಿರುಗಾಳಿ – ೧೯೮೪   37)ಕಾಳಿಂಗ ಸರ್ಪ – ೧೯೮೪ 38)ಇಂದಿನ ಭಾರತ – ೧೯೮೪39)ಬೆದರು ಬೊಂಬೆ – ೧೯೮೪ 40)ಶಪಥ – ೧೯೮೪ 41)ಪವಿತ್ರ ಪ್ರೇಮ – ೧೯೮೪42)ಆಕ್ಸಿಡೆಂಟ್ – ೧೯೮೪43)ಆಶಾಕಿರಣ – ೧೯೮೪44)ಮಕ್ಕಳಿರಲವ್ವ ಮನೆತುಂಬ – ೧೯೮೪ 45)ಅಪೂರ್ವ ಸಂಗಮ – ೧೯೮೪  46)ತಾಯಿ ಕನಸು – ೧೯೮೫    47)ಮಾನವ ದಾನವ – ೧೯೮೫  48)ಕಿಲಾಡಿ ಅಳಿಯ – ೧೯೮೫  49)ವಜ್ರಮುಷ್ಟಿ – ೧೯೮೫  50)ಕರಿನಾಗ – ೧೯೮೫  51)ತಾಯಿಯೆ ನನ್ನ ದೇವರು – ೧೯೮೬  52)ನಾ ನಿನ್ನ ಪ್ರೀತಿಸುವೆ – ೧೯೮೬   53)ಅಗ್ನಿ ಪರೀಕ್ಷೆ – ೧೯೮೬   54)ರಸ್ತೆ ರಾಜ – ೧೯೮೬   55)ಸಂಸಾರದ ಗುಟ್ಟು – ೧೯೮೬  56)ತಾಯಿ – ೧೯೮೭  57)ಈ ಬಂಧ ಅನುಬಂಧ – ೧೯೮೭  58)ಹುಲಿ ಹೆಬ್ಬುಲಿ – ೧೯೮೭  59)ಲಾರಿ ಡ್ರೈವರ್ – ೧೯೮೭ 60)ಅಂತಿಮ ಘಟ್ಟ – ೧೯೮೭ 61)ಶಕ್ತಿ – ೧೯೮೮ 62)ಸಾಂಗ್ಲಿಯಾನ – ೧೯೮೮ 63)ಧರ್ಮಾತ್ಮ – ೧೯೮೮ 64)ತರ್ಕ – ೧೯೮೯ 65)ಮಹಾಯುದ್ಧ – ೧೯೮೯  66)ಅಂತಿಂಥ ಗಂಡು ನಾನಲ್ಲ – ೧೯೮೯  67)ಸಿ.ಬಿ.ಐ ಶಂಕರ್ – ೧೯೮೯  68)ಇದು ಸಾಧ್ಯ – ೧೯೮೯  69)ರಾಜ ಸಿಂಹ – ೧೯೮೯  70)ಜಯಭೇರಿ – ೧೯೮೯  71)ನರಸಿಂಹ – ೧೯೮೯ 72)ಎಸ್.ಪಿ.ಸಾಂಗ್ಲಿಯಾನ-೨ – ೧೯೯೦ 73)ರಾಮರಾಜ್ಯದಲ್ಲಿ ರಾಕ್ಷಸರು – ೧೯೯೦ 74)ಮಹೇಶ್ವರ – ೧೯೯೦ 75)ತ್ರೀನೇತ್ರ – ೧೯೯೦ 76)ಆವೇಶ – ೧೯೯೦  77)ಹೊಸ ಜೀವನ – ೧೯೯೦  78)ಹಳ್ಳಿಯ ಸುರಾಸುರರು – ೧೯೯೦  79)ಭಲೇ ಚತುರ – ೧೯೯೦  80)ಆಟ ಬೊಂಬಾಟ – ೧೯೯೦  81)ನಿಗೂಡ ರಹಸ್ಯ – ೧೯೯೦  82)ನಕ್ಕಳಾ ರಾಜಕುಮಾರಿ – ೧೯೯೧ 83)ಪುಂಡಪ್ರಚಂಡ – ೧೯೯೧ 84)ಸುಂದರಕಾಂಡ – ೧೯೯೧  85)ನಾಗಿಣಿ – ೧೯೯೧  86)ಪ್ರಾಣ ಸ್ನೇಹಿತ – ೧೯೯೩

ನಿರ್ದೇಶಕರಾಗಿ

ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.

ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್ ನಾಗ್.ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top