fbpx
god

ಬ್ರಹ್ಮಚಾರಿಗಳು ಮತ್ತು ಗಂಡಸರು ಹನುಮಂತನನ್ನು ಹೆಚ್ಚು ಪೂಜಿಸಲು ಕಾರಣವೇನು…?

ನಮ್ಮ ದೇಶದಲ್ಲಿ ಹೆಚ್ಚು ಕಡಿಮೆ ಗಲ್ಲಿ ಗಲ್ಲಿಯಲ್ಲೂ ದೇವಸ್ಥಾನಗಳು ಕಾಣಸಿಗುತ್ತವೆ, ಅದರಲೂ ಹನುಮಂತನೆಂದರೆ ಎಲ್ಲರಿಗೂ ಅಚ್ಚು ಮಚ್ಚು… ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದಾರೆ ಎನ್ನುತ್ತವೆ ಪುರಾಣಗಳು. ಅದೇ ರೀತಿ ಅವರವರ ಇಷ್ಟಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುತ್ತಾರೆ. ಅಂತಹ ದೇವರಲ್ಲಿ ವಾಯುಪುತ್ರ ಆಜಂನೇಯ. ಹನುಮಂತನನ್ನು ವಿಶ್ವದೆಲ್ಲೆಡೆಯಲ್ಲಿ ಪೂಜಿಸಲಾಗುತ್ತದೆ.

ಇನ್ನು ಕೆಲವು ದೇವರು ಆಯಾಯ ಜಾತಿಗೆ ಅನುಗುಣವಾಗಿ ಪೂಜಿಸಲ್ಪಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಶಿವ ಹಾಗೂ ದೇವಿಯ ಭಕ್ತರಿದ್ದರೆ ಉತ್ತರ ಭಾರತದಲ್ಲಿ ವಿಷ್ಣುವಿನ ಭಕ್ತರಿದ್ದಾರೆ. ಮಹಿಳೆಯರು ಹನುಮಂತ ದೇವರನ್ನು ಪೂಜಿಸಬಹುದಲ್ಲವೇ ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಹಿಳೆಯರು ಅದರಲ್ಲೂ ಮದುವೆಯಾಗದೆ ಇರುವ ಮಹಿಳೆಯರು ಹನುಮಂತನನ್ನು ಪೂಜಿಸುವುದು ಮತ್ತು ಹನುಮಾನ್ ಚಾಲೀಸ್ ಪಠಣ ಮಾಡುವುದು ನಿಷಿದ್ಧ. ಇನ್ನು ಕೆಲವು ದೇವರನ್ನು ಬ್ರಹ್ಮಚಾರಿಗಳು ಮತ್ತು ಗಂಡಸರು ಮಾತ್ರ ಪೂಜಿಸಬಹುದು ಎನ್ನುವ ನಿಯಮಿದೆ.

ಮದುವೆಯಾಗದೆ ಇರುವ ಮಹಿಳೆಯರು ಹನುಮಂತ ದೇವಾಲಯಕ್ಕೆ ಭೇಟಿ ನೀಡಬಹುದು. ಇದೇ ಕಾರಣದಿಂದಾಗಿ ಮದುವೆಯಾಗದೆ ಇರುವ ಹುಡುಗಿಯರು ಇಂದಿನ ದಿನಗಳಲ್ಲಿ ಆಂಜನೇಯ ದೇವಾಲಯಗಳಿಗೆ ಹೋಗಿ ಅಲ್ಲಿ ಪಾರ್ಥಿಸುವುದನ್ನು ಕಾಣಬಹುದು. ಹನುಮಂತನನ್ನು ಪೂಜಿಸುವ ಕೆಲವೊಂದು ಸತ್ಯಗಳ ಬಗ್ಗೆ ನಾವಿಲ್ಲಿ ತಿಳಿಸಿಕೊಡಲಿದ್ದೇವೆ. ತುಂಬಾ ಶಕ್ತಿಶಾಲಿ ಹಾಗೂ ಪ್ರಭಾವಶಾಲಿಯೆಂದು ಪರಿಗಣಿಸಲಾಗಿರುವ ಹನುಮಾನ್ ಚಾಲೀಸವನ್ನು ಪಠಣ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕೇ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ನಿಯಮಗಳು ಏನೇ ಇದ್ದರೂ ಇಂದಿನ ಆಧುನಿಕ ಯುಗದಲ್ಲಿ ಅದನ್ನು ಪಾಲಿಸುವವರು ತುಂಬಾ ಕಡಿಮೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top