ತೆರಿಗೆದಾರನ ದುಡ್ಡಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಅಲ್ಪಸಂಖ್ಯಾತ, ವಕ್ಫ್ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ತಂವೀರ್ ಸೈತ್ ಸೆಕ್ಸ್ ಪಿಕ್ಚರ್ ವೀಕ್ಷಣೆ..ಸಚಿವರ ‘ಸೆಕ್ಸ್ ಪಿಕ್ಚರ್’ ಗಳನ್ನು ಸವಿದ ರಾಯಚೂರು ನಾಯಕ ಬಿ.ವಿ.ನಾಯಕ್. ಅತ್ತ ಟಿಪ್ಪು ಸುಲ್ತಾನನನ ಬಗ್ಗೆ ಉಪನ್ಯಾಸ ನಡೆಯುತ್ತಿದ್ದರೆ, ರಾಯಚೂರು ಜಿಲ್ಲೆಯ ಸಚಿವರಾದ ಸನ್ಮಾನ್ಯ ಸೈತ್ ರವರು ತಮ್ಮ ಮೊಬೈಲಿನಲ್ಲಿ ‘ಅರೆನಗ್ನ’ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು. ಹಲವು ವಿವಾದ ಮತ್ತು ಪ್ರತಿಭಟನೆಗಳು ನಡೆದರೂ ಜಗ್ಗದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಎಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟಿಪ್ಪು ಜಯಂತಿ ಆಚಿರಿಸುತ್ತಿರುವಾಗ ಸಿದ್ದರಾಮಣ್ಣನ ಸಂಪುಟದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೊಬ್ಬರು ತಮ್ಮ ‘ಕಾಮತೃಷೆ’ ತೀರಿಸಿಕೊಳ್ಳಲು ಸೆಕ್ಸ್ ಪಿಕ್ಚರ್ ನೋಡುತ್ತಾ ಬ್ಯುಸಿ ಆಗಿದ್ರು.
ಸಚಿವರು ತಮ್ಮ ಮೊಬೈಲ್ನಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರಿಗೆ ಕ್ಯಾಮೆರಾ ಕಣ್ಣು ಇವರ ಮೇಲೆ ಬಿದ್ದಿದೆ ಅನ್ನೋದೇ ಗೊತ್ತಿರಲಿಲ್ಲ. ಟಿ.ವಿ. 9 ಕ್ಯಾಮರಾಮನ್ ಅದನ್ನು ಫೋಕಸ್ ಮಾಡಿ, zoom ಮಾಡ್ತಾ ಇದ್ರೆ, ಸಚಿವರಿಗೆ ಇದರ ಅರಿವೇ ಇರಲಿಲ್ಲ. ಅವರು ತಮ್ಮದೇ ಆದ ‘ಕಾಮ’ ಲೋಕದಲ್ಲಿ ತೇಲಾಡುತ್ತಾ, ತಮ್ಮ ಸ್ಮಾರ್ಟ್ಫೋನ್ ನಲ್ಲಿ ಪೋಲಿಯಾಟ ಮುಂದುವರಿಸುತ್ತಿದರು. ಇತಿಹಾಸದ ಪುಟಗಳು ಹೇಳುವಂತೆ ಕಾಮಾಂಧನಾಗಿದ್ದ ಟಿಪ್ಪು ಸುಲ್ತಾನನ ರೀತಿಯಲ್ಲೇ ಸಚಿವ ಸೈತ್ ಕೂಡ ವರ್ತಿಸಿದ್ದಾರೆ. ಅದರಲ್ಲೂ, ಮಾನ್ಯ ಸಚಿವರು ಶಿಕ್ಷಣ ಸಚಿವರು. ಇನ್ನು, ಯಾವ ರೀತಿ ಶಿಕ್ಷಣ ಕೊಡ್ತಾರೆ ಅನ್ನುವುದನ್ನು ಮತ್ತು ರಾಜ್ಯದ ಶಿಕ್ಷಣ ಸಚಿವರ ಬೌದ್ಧಿಕ ಬೆಳವಣಿಗೆ ಹೇಗಿದೆ ಎಂದು ನೀವೇ ಊಹಿಸಿ ! ಈ ಕಥೆ ಇಷ್ಟಕ್ಕೆ ಮುಗಿಯದೆ, ತನ್ವೀರ್ ಸೈತ್ ರವರ ಪಕ್ಕದಲ್ಲಿ ಕುಳಿತಿದ್ದ ಬಿ.ವಿ.ನಾಯಕರು (ರಾಯಚೂರು ಸಂಸದರು) ಸಾಹೇಬ್ರು ನಮಗೆ ಟಿಪ್ಪು ಜಯಂತಿ ಫೋಟೋ ತೋರಿಸ್ತಿದ್ರಪ್ಪ, ಅದು ಸೆಕ್ಸ್ ಫೋಟೋ ಅಲ್ಲ ರೀ ಅಂತ ಹೇಳಿದ್ದಾರೆ. ಇಡೀ ಕರ್ನಾಟಕದ ಜನತೆ ಲೈವ್ ನಲ್ಲಿ ನೋಡ್ತಿದ್ದ ದೃಶ್ಯಾವಳಿಗಳನ್ನು ಅಲ್ಲಗಳಿಯುತ್ತಿರುವುದು ಹಾಸ್ಯಾಸ್ಪದವಾಗಿದೆ.
ಈ ಹಿಂದೆ ಬಿ.ಜೆ.ಪಿ ಶಾಸಕರಾದ ಲಕ್ಶ್ಮಣ ಸವದಿ ಮತ್ತು ಸಿ.ಸಿ.ಪಾಟೀಲರು ಸದನ ನಡೆಯುತ್ತಿರುವಾಗಲೇ ಸೆಕ್ಸ್ ಪಿಕ್ಚರ್ ನೋಡುತ್ತಿದ್ದು ಮಾಧ್ಯಮಗಳ ಕ್ಯಾಮೆರಾಗಳಿಗೆ ಬಿದ್ದಿತ್ತು.. ಇದಾದ ನಂತರ, ಇಬ್ಬರ ಸಚಿವರ ತಲೆದಂಡವಾಗಿತ್ತು. ಇತ್ತೀಚೆಗೆ, ಕಾವೇರಿ ವಿಷಯದ ಕುರಿತು ಗಂಭೀರ ಚರ್ಚೆಯಾಗುತ್ತಿದ್ದಾಗ ಸಚಿವೆ ಉಮಾಶ್ರೀ ಯವರು ತಮ್ಮ ರಂಗೋಲಿ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಉಮಾಶ್ರೀ, ಚುಕ್ಕೆ ಇಡುವ ಮೂಲಕ ರಂಗೋಲಿ ಬಿಡಿಸುತ್ತಿದ್ದು ಕ್ಯಾಮೆರಾ ಕಣ್ಣಿಗೆ ಬಿದ್ದು; ಗಂಭೀರ ಚರ್ಚೆ ನಡೆಯುವಾಗ ಸಚಿವರೊಬ್ಬರ ಬೇಜವಾಬ್ದಾರಿತನ ಬಹಿರಂಗವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.. ಸೈತ್ ಸಾಹೇಬರ ವರ್ತನೆಗೆ ಮುಖ್ಯ ಮಂತ್ರಿಗಳ ಪ್ರತಿಕ್ರಿಯೆ ಏನೆಂದು ಕಾದುನೋಡಬೇಕಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
