fbpx
Kannada Bit News

ಅಪಪ್ರಚಾರಕ್ಕೆ ಈ ಹಳೆ ಫೋಟೋ ಬಳಕೆಗೆ ಕೋಲಾರದ ಬ್ಯಾಂಕ್ ಅಧ್ಯಕ್ಷ ಆಕ್ರೋಶ

ಕೋಲಾರ: ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ನಿಂದ  ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮವೊಂದರಲ್ಲಿ  ರಾಜಕಾರಣಿಗಳು ಅಲ್ಲಿರುವ ಜನಗಳಿಗೆ ಒಬ್ಬರಿಗೆ 3ಲಕ್ಷ ಸಾಲ ಕೊಡುತ್ತಿರುವ ದೃಶ್ಯ ಎಂದು ಎಲ್ಲಾ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿತ್ತು. ಆದರೆ ಇದು ಹಳೆಯ  ಫೋಟೋ. ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ,  ಸ್ವಸಹಾಯ ಸಂಘಗಳಿಗೆ ಈ ರೀತಿ ಸಾಲ ವಿತರಿಸುವ ಕಾರ್ಯಕ್ರಮ ವಿತರಿದ ಹಣವೆಂದು ಮಾದ್ಯಮಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಆಕ್ರೋಶಗೊಂಡಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಯಾರೋ ಬೇಕಂತಲೇ ಈ ರೀತಿ ಮಾಡಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದೇನೆ ಎಂದು ಮಾದ್ಯಮಗಳಿಗೆ ತಿಳಿಸಿದರು.

ಇಡೀ ಸುದ್ದಿಯನ್ನು ನೋಟು ರದ್ದು ಮಾಡಿದ ಹಿನ್ನೆಲೆಯ ಸಂದರ್ಭದಲ್ಲೇ ಹರಿಬಿಟ್ಟಿದ್ದು, ಈ ಬಗ್ಗೆ ಆಕ್ರೋಶಗೊಂಡಿರುವ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೋಲಾರ ಎಸ್ ಪಿ ದಿವ್ಯಾ ಗೋಪಿನಾಥನ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಸಾಲ ವಿತರಿಸುವುದು ಹೀಗೇನೆ. ನಗದನ್ನೇ ವಿತರಿಸಲಾಗುತ್ತದೆ. ಗೋವಿಂದಗೌಡ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ನಂತರ ಸ್ವಸಹಾಯ ಸಂಘಗಳಿಗೆ ಈ ರೀತಿ ಸಾಲ ವಿತರಿಸುವ ಕಾರ್ಯಕ್ರಮ ಸಾಕಷ್ಟು ನಡೆದಿದೆ. ಅದರ ಫೋಟೋಗಳು ಹಲವಾರು ಪತ್ರಿಕೆಗಳಲ್ಲೂ ಪ್ರಕಟವಾಗಿವೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಬಂದಿವೆ.

500 ಮತ್ತು 1000 ರೂ. ನೋಟು ನಿಷೇದದ ವಿಚಾರ ತಿಳಿಯುತ್ತಿದ್ದಂತೆ ಈ ಫೋಟೋ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ನಲ್ಲಿ ಹರಿದುಬಿಟ್ಟಿದ್ದಾರೆ. ಈ ಫೋಟೋವನ್ನು ಬಳಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top