fbpx
Awareness

ಹೊಸದಾಗಿ ಮುದ್ರಿತವಾದ ನೋಟುಗಳು ೧೯೬೦ರ ರಾಷ್ಟ್ರಪತಿ ಆದೇಶಕ್ಕೆ ವಿರುದ್ಧವಾಗಿದೆ

‘ಆರ್ಥಿಕ ಮಹಾಕ್ರಾಂತಿ’ ಎಂದೇ ಹೇಳಲಾಗುತ್ತಿರುವ ೫೦೦ ಮತ್ತು ೧೦೦೦ ನೋಟಿನ ರದ್ದಾದ ಬೆನ್ನಲ್ಲೇ; ಈಗ ಹೊಸ ನೋಟುಗಳಿಗೆ ‘ಹಿಂದಿ ನಾಮಕರಣ’ ಮಾಡುವ ಪ್ರಹಸನ ನಡೆದಿದೆ.

ಹೊಸ ನೋಟುಗಳ ಮೇಲೆ ದೇವನಗಿರಿ ಅಂಕಿಗಳ ಬಳಕೆಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದೆ. ಅಚ್ಚರಿಯ ವಿಷಯವೇನೆಂದರೆ ಈ ಹೊಸ ನೋಟುಗಳ ಮೇಲೆ ದೇವನಗಿರಿ ಅಂಕಿಗಳನ್ನು ಮುದ್ರಿಸಿರುವುದು ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯ (೧೯೫೭) ಶಿಫಾರಸು ಮತ್ತು ೧೯೬೦ರ ರಾಷ್ಟ್ರಪತಿ ಆದೇಶಕ್ಕೆ ವಿರುದ್ಧವಾಗಿದೆ.

india-new-2000-rupee-note-photo

೧೯೫೫ ರಲ್ಲಿ ರಚನೆಯಾದ ಬಿ.ಜಿ.ಕೇಹರ್ ಆಯೋಗವು ಸರ್ಕಾರಿ ಪ್ರಕಟಣೆಗಳಲ್ಲಿ ಅಂಕಿಗಳ ಬಳಕೆಗೆ ಯಾವುದೇ ಯಾದ ಪ್ರತ್ಯೇಕವಾದ ಶಿಫಾರಸನ್ನು ಮಾಡಿಲ್ಲ.

ಇದಾದಮೇಲೆ, ಕೇಹರ್ ಆಯೋಗದ ಶಿಫಾರಸ್ಸುಗಳನ್ನು ಪರಮಾರ್ಶಿಸಿ, ಹೆಚ್ಚುವರಿ ಶಿಫಾರಸ್ಸುಗಳನ್ನು ಸಲ್ಲಿಸಲು ೧೯೫೭ ರಲ್ಲಿ ಜಿ.ಬಿ.ಪಂಥ್ ಅಧ್ಯಕ್ಷತೆಯ ‘ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯನ್ನು’ ರಚಿಸಲಾಯಿತು.

ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ೧೯೬೦, ಏಪ್ರಿಲ್ ೨೭ರೆಂದು ರಾಷ್ಟ್ರಪತಿಯವರು ಹಿಂದಿ ಹಾಗೂ ಪ್ರಾದೇಶಿಕ ಭಾಷೆಯಾಳ ಕುರಿತಾಗಿ ಆದೇಶವೊಂದನ್ನು ಹೊರಡಿಸಿದ್ದರು.

ಈ ಆದೇಶವು ಕೇಂದ್ರ ಸರ್ಕಾರದ ಇಲಾಖೆಗಳ ಪ್ರಕಟಣಾ ವಿಷಯಕ್ಕೆ ಸಂಬಂದಿಸಿದ್ದು ದೇವನಗಿರಿ ಮತ್ತು ಅಂತಾರಾಷ್ಟ್ರೀಯ ಭಾಷೆಯ ಅಂಕಿಗಳನ್ನು ಬಳಸಬಹುದೆಂದು ಶಿಫಾರಸು ಮಾಡಲಾಗಿತ್ತು. ಆದರೆ, ಆದೇಶವು ‘ವಿಜ್ಞಾನ, ತಂತ್ರಜ್ಞಾನ ಮತ್ತು ಅಂಕಿಸಂಖ್ಯೆಯ ಎಲ್ಲ ಪ್ರಕಟಣೆಗಳಲ್ಲಿ ಅಂತಾರಾಷ್ಟ್ರೀಯ ಅಂಕಿಗಳನ್ನೇ ಬಳಸಬೇಕೆಂದು ಹೇಳಿತ್ತು’.

ಸ್ಥಳೀಯ ಭಾಷೆಗಳನ್ನು ಹತ್ತಿಕ್ಕುವ ಬರದಲ್ಲಿ, ಕೇಂದ್ರ ಸರ್ಕಾರವು ಹೊಸ ನೋಟಿನ ಮುದ್ರಣದ ಸಂದರ್ಭದಲ್ಲಿ ಈ ಯಾವುದೇ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು; ದೇವನಗಿರಿ ಮತ್ತು ಹಿಂದಿ ಭಾಷೆಗಳ ಹೇರಿಕೆ ಮಾಡುತ್ತಿರುವುದು ‘ಒಕ್ಕೂಟ ವ್ಯವಸ್ಥೆ’ ಗೆ ಧಕ್ಕೆ ತರುವ ಸೂಚನೆಗಳು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸಕ್ತ ಸರ್ಕಾರದ ‘ಹಿಂದಿ ಹೇರಿಕೆ’ ಎಷ್ಟರ ಮಟ್ಟಿಗೆ ಏರಿದೆ ಎಂದರೆ ಹಳೆಯ ನೋಟುಗಳಲ್ಲಿ ಹಿಂದಿ ಭಾಷೆಯ ಅಕ್ಷರಗಳು ಅಂಕಿನ ಕೆಳಭಾಗದಲ್ಲಿದ್ದರೆ ಹೊಸದಾಗಿ ಮುದ್ರಿಸಲ್ಪಟ್ಟ ನೋಟುಗಳಲ್ಲಿ ಮೇಲ್ಭಾಗದಲ್ಲೇ ಹಿಂದಿ ಅಕ್ಷರಗಳಿವೆ. ಹಿಂದಿ ಭಾಷೆಗೆ ಮಾತ್ರ ‘ರಾಜಯೋಗ’ ನೀಡಿ ಇತರ ಭಾಷೆಗಳಿಗೆ ‘ಮಲತಾಯಿ’ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹಲವಾರು ದೂರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top