fbpx
god

ನಾವು ದೇವರಿಗೆ ದೀಪವನ್ನು ಹಚ್ಚುವುದರ ಹಿಂದಿನ ವೈಜ್ಞಾನಿಕ ಕಾರಣ

ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ದೀಪವನ್ನು ಬೆಳಗುವುದು ಒಂದು. ಭಗವಂತನು ಜ್ಯೋತಿಸ್ವರೂಪ ನಾಗಿದ್ದಾನೆ. ನಾವು ಬೆಳಗುವ ದೀಪಗಳು ಪರಮಾತ್ಮನಿಗಲ್ಲ. ಆತನಿಂದ ಜ್ಞಾನವೆಂಬ ಬೆಳಕು ಅಂಧಕಾರವೆಂಬ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟುಕೊಂಡು ದೀಪವನ್ನು ಬೆಳಗುತ್ತೇವೆ.

ನಾವು ದೇವರಿಗೆ ದೀಪವನ್ನು ಹಚ್ಚುವುದರ ಹಿಂದಿನ ವೈಜ್ಞಾನಿಕ ಕಾರಣ

ಹಿ೦ದೂ ಧರ್ಮದಲ್ಲಿ ಆಚರಿಸಲ್ಪಡುವ ಹಲವಾರು ಪೂಜಾ ವಿಧಿ ವಿಧಾನಗಳ ಪೈಕಿ ದೀಪವನ್ನು ಹಚ್ಚುವುದು ಒ೦ದು ಅವಿಭಾಜ್ಯ ಅ೦ಗವಾಗಿದೆ. ದಿನನಿತ್ಯ ನಾವು ದೀಪಗಳನ್ನು ತುಪ್ಪ ಅಥವ ಎಣ್ಣೆ ಮತ್ತು ಬತ್ತಿಗಳಿಂದ ಹಚ್ಚುತ್ತೇವೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ವಿದ್ಯುದ್ದೀಪದ ಬೆಳಕು ದೃಷ್ಠಿಯನ್ನು ಮಂದವಾಗಿಸುತ್ತದೆ. (ಎಣ್ಣೆಯ ದೀಪಕ್ಕಿಂತ ತುಪ್ಪದ ದೀಪವು ಶ್ರೇಷ್ಠವೆಂದಿದ್ದಾರೆ). ಅಂತೆಯೇ ನಂದಾದೀಪವನ್ನು ಹಚ್ಚುವುದೇಕೆಂದರೆ, ಹಿಂದಿನಕಾಲದಲ್ಲಿ ಅಂದರೆ ರಂಜಕದಿಂದ ಬೆಂಕಿಯ ಉಪಯೋಗವು ತಿಳಿಯುವುದಕ್ಕೆ ಮುಂಚೆ ಎರಡು ಬೆಣಚುಕಲ್ಲುಗಳ ಸಂಘರ್ಷಣೆಯಿಂದ ಅಥವ ಅರುಣಿಗಳಿಂದ ಬೆಂಕಿಯನ್ನು ಉತ್ಪಾದಿಸುತ್ತಿದ್ದರು. ಇವುಗಳಿಂದ ಬೆಂಕಿಯನ್ನು ಉತ್ಪಾದಿಸುವುದು ಬಹಳ ಕಷ್ಠಕರವಾದ ಮತ್ತು ರೇಜಿಗೆಯ ಕೆಲಸವಾಗಿತ್ತು. ಒಮ್ಮೆ ಹೊತ್ತಿಸಿದ ಬೆಂಕಿಯನ್ನು ಧೀರ್ಘಕಾಲದವರೆಗೆ ಉಪಯೋಗಿಸುವ ಉದ್ದೇಶ ವಿಟ್ಟುಕೊಂಡು ನಂದಾದೀಪವನ್ನು ಹಚ್ಚುವ ಪರಿಪಾಠವನ್ನು ರೂಢಿಸಿಕೊಂಡಿರಬೇಕು.

ದೇವರ ಮುಂದೆ ದೀಪ ಹಚ್ಚುವುದು ಇನ್ನೊಂದು ಕಾರಣವೇನೆಂದರೆ, ಹಲವಾರು ಶತಮಾನಗಳ ಹಿ೦ದೆ, ದೇವಾಲಯಗಳ ಗರ್ಭಗುಡಿಯ ಅತ್ಯ೦ತ ಒಳಭಾಗದಲ್ಲಿ ದೇವರ ಪ್ರತಿಮೆಗಳನ್ನು ಪ್ರತಿಪ್ಟಾಪಿಸಲಾಗಿರುತ್ತಿದ್ದ ಕಾಲದಲ್ಲಿ, ಗರ್ಭಗುಡಿಯ ಕತ್ತಲನ್ನು ಹೋಗಲಾಡಿಸುವುದಕ್ಕೋಸ್ಕರವಾಗಿ ಎಣ್ಣೆಯ ದೀಪವನ್ನು ಉರಿಸಲಾಗುತ್ತಿತ್ತು ಎ೦ಬ ಮತ್ತೊ೦ದು ಅಭಿಪ್ರಾಯವಿದೆ. ಭಕ್ತರು ದೇವಾಲಯವನ್ನು ಪ್ರವೇಶಿಸಿದಾಗ, ದೇವರ ಪ್ರತಿಮೆಯು ಭಕ್ತರಿಗೆ ಸ್ಪಷ್ಟವಾಗಿ ಕಾಣುವ೦ತೆ ಮಾಡುವುದಕ್ಕೋಸ್ಕರ ಅರ್ಚಕರು ಎಣ್ಣೆಯ ದೀಪವನ್ನು ದೇವರ ಪ್ರತಿಮೆಯ ಮುಂದೆ ಹಚ್ಚುತ್ತಿದ್ದರು. ಕಾಲಕ್ರಮೇಣ, ಈ ಒ೦ದು ಸರಳವಾದ ಕ್ರಮವು ಒ೦ದು ಸ೦ಪ್ರದಾಯ ಅಥವಾ ವಿಧಿಯಾಗಿ ಬೆಳವಣಿಗೆ ಹೊ೦ದಿತು ಎ೦ಬ ಅಭಿಪ್ರಾಯವೂ ಇದೆ.

ಎಣ್ಣೆಯ ದೀಪ ಮತ್ತು ತುಪ್ಪದ ದೀಪದ ಮಹತ್ವ

ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಅದ್ದಿರುವ ಬತ್ತಿಗಳನ್ನು ದೇವರ ಮು೦ದೆ ದೀನತೆ ಮತ್ತು ಕೃತಜ್ಞತೆಯ ಭಾವವನ್ನು ವ್ಯಕ್ತಪಡಿಸುತ್ತಾ ಈ ಸ೦ದರ್ಭದಲ್ಲಿ ಭಗವಧ್ಭಕ್ತರು ದೇವರ ದೈವಿಕ ರೂಪದಲ್ಲಿ ಲೀನವಾಗುವುದಕ್ಕೆ ಒ೦ದು ಮಾರ್ಗೋಪಾಯನ್ನು ಕಲ್ಪಿಸಿಕೊಡುವದು ಎಂಬ ಪ್ರತೀತವಿದೆ.

ದೀಪವನ್ನು ಬೆಳಗುವ ಹಿಂದೆ ಒಂದು ಆಳವಾದ ತತ್ವವು ಅಡಗಿರುವುದರಿಂದ. ನಾವು ನಮ್ಮ ದುಃಖವನ್ನು ಹೋಗಲಾಡಿಸಿ, ಸಂತೋಷವನ್ನು ತೆರೆದ ಬಾಹುಗಳಿಂದ ಬರಮಾಡಿಕೊಳ್ಳಲು ದೀಪವನ್ನು ಹಚ್ಚುತ್ತೇವೆ. ನಮಗೆ ಜ್ಞಾನದ ಬೆಳಕನ್ನು ನೀಡಿ, ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ದೇವರಿಗೆ ದೀಪವನ್ನು ಹಚ್ಚಿ ಪ್ರಾರ್ಥಿಸುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top