‘ಆರ್ಥಿಕ ಮಹಾಕ್ರಾಂತಿ’ ಎಂದೇ ಹೇಳಲಾಗುತ್ತಿರುವ ೫೦೦ ಮತ್ತು ೧೦೦೦ ನೋಟಿನ ರದ್ದು ಆಗಿದ್ದು ಎಲ್ಲರಿಗೂ ತಿಳಿದ ವಿಚಾರ ಆದ್ರೆ, ಯಾರಿಗೂ ತಿಳಿಯದಂತೆ ಅಖಂಡ ಭಾರತಕ್ಕೆ ನೋಟುಗಳನ್ನು ಮುದ್ರಿಸಿ ಹಂಚಲು ಮೋದಿ ಸರ್ಕಾರ ತೆಗೆದುಕೊಂಡ ಕಾಳಜಿ ಮೆಚ್ಚುವಂತದ್ದು. ಕಪ್ಪು ಹಣ ತಡೆ ಮತ್ತು ವಿಸ್ತ್ರತವಾಗಿ ಹರಡಿಕೊಂಡಿದ್ದ ನಕಲಿ ನೋಟು ಜಾಲವನ್ನು ಕಟ್ಟಿಹಾಕಲು ಹಳೆಯ 500ರೂ. ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಇದ್ದಕ್ಕಿದ್ದಂತೆ ಆದೇಶ ಹೊರಡಿಸಿದ ಪ್ರಧಾನಿ ಮೋದಿ ಇಡೀ ದೇಶಕ್ಕೆ ಶಾಕ್ ನೀಡಿದ್ದರು.
ಜಿಲ್ಲೆಯ ಶಾಸಕರಿಗೂ ಗೊತ್ತಿರಲಿಲ್ಲ ಮಾಹಿತಿ :
ಜಿಲ್ಲೆಯ ಶಾಸಕರಿಗೂ ತಿಳಿಯದಂತೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಮುದ್ರಣ ಕಾರ್ಯ ಆರಂಭಿಸಿತ್ತು ಓದುಗರೇ, ಯಾರಿಗೂ ಅನುಮಾನ ಬಾರದಂತೆ ರಾಜ್ಯ ಕರ್ನಾಟಕದಲ್ಲೇ ನೋಟು ಮುದ್ರಿಸಲಾಗಿದೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಮೈಸೂರಿನ ಟಂಕಸಾಲೆಯಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಗೆ 6ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಕಳೆದ 6 ತಿಂಗಳಿಂದ ಮಾಹಿತಿ ಸೋರಿಕೆಯಾಗದಂತೆ ಬಹಳ ಗೌಪ್ಯವಾಗಿ 2ಸಾವಿರ ಮತ್ತು 500ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿದೆ. ಆದೇಶ ಸಿಗುತ್ತಿದ್ದಂತೆಯೇ ಹೊಸ ನೋಟುಗಳ ಮುದ್ರಣಕ್ಕೆ ಸಕಲ ಸಿದ್ದತೆಗಳನ್ನು ಮೈಸೂರಿನ ಮುದ್ರಣಾಲಯದಲ್ಲಿ ನಡೆಸಲಾಗಿದೆ.
ಹೊಸ ನೋಟುಗಳನ್ನು ಹೀಗೆ ಸಾಗಿಸಲಾಯಿತು…?
ಮೈಸೂರಿನ ದಕ್ಷಿಣ ಭಾಗಕ್ಕೆ 10ಕೀ.ಮೀ ದೂರದಲ್ಲಿರುವ ಮಂದಕಹಳ್ಳಿಯಲ್ಲಿ ಒಂದು ಸಣ್ಣ ವಿಮಾನ ನಿಲ್ದಾಣವಿದೆ. ಆದರೆ ಹಲವು ದಿನಗಳ ಮುಂಚೆಯೇ ಇಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ಒಂದೇ ಒಂದು ರನ್ ವೇ ಇದೆ.
ಇದ್ದಕ್ಕಿದಂತೆ ನಿಷ್ಕ್ರಿಯಗೊಂಡಿದ್ದ ವಿಮಾನ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ವಿಮಾನಗಳು ದಿನ ನಿತ್ಯ ಬಿಡುವಿಲ್ಲದಂತೆ ಹಾರಾಟ ಮಾಡಿವೆ. ಈ ರೀತಿಯಲ್ಲಿ ವಿಮಾನ ಹಾರಾಟ ಏಕೆ ನಡೆಯುತ್ತಿದೆ ಎಂಬ ಅನುಮಾನವೂ ಸಹ ಜನರಿಗೆ ಮೂಡಿದೆ. ಆದರೆ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಕೊಂಡೊಯ್ಯಲಾಗುತ್ತಿದೆ ಎಂಬ ಅನುಮಾನ ಮಾತ್ರ ಬಂದಿಲ್ಲ.ಮೈಸೂರಿನಿಂದ ವಿಶೇಷ ವಿಮಾನಗಳಲ್ಲಿ 2 ಸಾವಿರ ರೂ. ಹಾಗೂ 500 ರೂ. ನೋಟುಗಳನ್ನು ದೆಹಲಿಗೆ ರವಾನಿಸಲಾಗಿದೆ. ಅಲ್ಲಿಂದ ರಿಸರ್ವ್ ಬ್ಯಾಂಕ್ ಮುಖಾಂತರ ವಿವಿಧ ಬ್ಯಾಂಕ್ ಗಳಿಗೆ ರವಾನಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
