fbpx
Business

ಹೊಸ ನೋಟಿನ ಮುದ್ರಣಕ್ಕೆ ಕರ್ನಾಟಕದ ಮೈಸೂರನ್ನು ಆಯ್ಕೆ ಮಾಡಿದ್ದೇಕೆ…?

ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ 500 ಮತ್ತು 1000 ನೋಟುಗಳ ಚಲಾವಣೆಗೆ ನಿಷೇಧ ಹೇರಿರುವುದರಿಂದ ಸಾರ್ವಜನಿಕರಿಗೆ ಇನ್ನೆರಡು ಮೂರು ವಾರಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಆದ್ರೆ, ನಿಮಗೆ ಗೊತ್ತಿರಲಿ ನೋಟು ಮುದ್ರಿಸುವಂತಹ ಟಂಕಸಾಲೆಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಸಾಲದೆಂಬತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಸಹ ಹೆಚ್ಚಾಗಿವೆ. ಆದರೆ ಪ್ರಧಾನಿ ಮೋದಿ ಮಾತ್ರ ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡುವಂತೆ ಆರಿಸಿಕೊಂಡ ರಾಜ್ಯವಾದರೂ ಯಾವುದು ಗೊತ್ತಾ? ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ…!! ಆದರೆ ಈ ವಿಷಯ ಬಹಿರಂಗವಾಗದಂತೆ ಗೋಪ್ಯವಾಗಿ ಇಡಲಾಗಿತ್ತು.

ಪ್ರಧಾನಿ ಮೋದಿ ಇಡೀ ದೇಶಕ್ಕೆ ಶಾಕ್ ನೀಡಿದ್ದರು. ಯಾರಿಗೂ ಅನುಮಾನ ಬಾರದಂತೆ ಕಾಂಗ್ರೆಸ್ ಪಕ್ಷ ಆಡಳಿತವಿರುವ ಪ್ರಬಲ ರಾಜ್ಯ ಕರ್ನಾಟಕದಲ್ಲೇ ನೋಟು ಮುದ್ರಿಸಲಾಗಿದೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ. ಕಳೆದ 6 ತಿಂಗಳಿಂದ ಮಾಹಿತಿ ಸೋರಿಕೆಯಾಗದಂತೆ ಬಹಳ ಗೌಪ್ಯವಾಗಿ 2ಸಾವಿರ ಮತ್ತು 500ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿದೆ.

ಮೈಸೂರಿನ ಟಂಕಸಾಲೆಯಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್ ಗೆ 6 ತಿಂಗಳ ಹಿಂದೆಯೇ ಆದೇಶ ನೀಡಿತ್ತು. ಆದೇಶ ಸಿಗುತ್ತಿದ್ದಂತೆಯೇ ಹೊಸ ನೋಟುಗಳ ಮುದ್ರಣಕ್ಕೆ ಸಕಲ ಸಿದ್ದತೆಗಳನ್ನು ಮೈಸೂರಿನ ಮುದ್ರಣಾಲಯದಲ್ಲಿ ನಡೆಸಲಾಗಿದೆ.

ಆಯ್ಕೆ ಮಾಡಲು ಕಾರಣಗಳು :

  • ಮೈಸೂರಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಣ ಕೇಂದ್ರ ಹಲವು ವಿಶೇಷಗಳಿಂದ ಕೂಡಿದೆ.
  • ಮೈಸೂರಿನಲ್ಲಿರುವ ಮುದ್ರಣಾಲಯಕ್ಕೆ ಪ್ರತ್ಯೇಕವಾದ ರೈಲ್ವೇ ಮಾರ್ಗಗಳಿವೆ.
  • ಯಾವುದೇ ಆಯಾಸವಿಲ್ಲದೆ ಮೈಸೂರಿಗೆ ಹೈಟೆಕ್ನಾಲಜಿಯುಳ್ಳ ಪೇಪರ್ ಸರಬರಾಜು ಮಾಡಬಹುದು.
  • ಮುದ್ರಣಕ್ಕೆ ಹೆಚ್ಚು ನೀರು ಬೇಕಾಗುತ್ತದೆ ಮೈಸೂರಿನಲ್ಲಿರುವ ಮುದ್ರಣಾಲಯಕ್ಕೆ ವಿಶೇಷವಾಗಿ ವಾಟರ್ ಲೈನ್ ಸಂಪರ್ಕ ಕಲ್ಪಿಸಲಾಗಿದೆ.
  • ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಹೆಚ್ಚು ಸುರಕ್ಷಿತವಾದ ನಾಡು, ಆದ್ದರಿಂದ ಮುದ್ರಣಕ್ಕೆ ತೊಂದರೆ ಆಗುವುದಿಲ್ಲ ಎನ್ನುವ ನಂಬಿಕೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top