ಆ ಸಾಧಕ ಇವತ್ತು ದುಷ್ಟರ ಪಾಲಿಗೆ ಸಿಂಹಸ್ವಪ್ನ, ಆತ ಎದುರು ನಿಂತ ಅಂದ್ರೆ ಒಂದಷ್ಟು ಜನ ಗಡಗಡ ನಡಗ್ತಾರೆ. ಸಜ್ಜನರು, ನೀನು ನೂರುಕಾಲ ಚೆನ್ನಾಗಿ ಬಾಳಪ್ಪ ಅಂತ ಮನತುಂಬಿ ಹರಸುತ್ತಾರೆ. ರವಿ ಚನ್ನಣ್ಣನವರ್ ಖಡಕ್ ಆಫೀಸರ್ ಒಬ್ಬರು ಎಲ್ಲದರಲ್ಲೂ ವಿಶೇಷತೆ ಕಾಯ್ದುಕೊಂಡು ಬಂದಂತಹ ವೆಕ್ತಿತ್ವ.
ಇವರು ಶಿವಮೊಗ್ಗಕ್ಕೆ ಬರುವಾಗ ಶಿವಮೊಗ್ಗ ಕೋಮುದಳ್ಳುರಿಯಲ್ಲಿ ಬೇಯುತ್ತಿತ್ತು, ಶಿವಮೊಗ್ಗಾದಲ್ಲಿ ಪುಡಿರೌಡಿಗಳು, ಮೀಟರ್ ಬಡ್ಡಿದಂಧೇಕೋರರಿಂದಾಗಿ ಶಿವಮೊಗ್ಗದ ಜನರ ನಿದ್ರೆಗೆಟ್ಟಿತ್ತು. ಯಾವಾಗ ಏನ್ ಆಗುತ್ತದೋ ಎಂಬ ಭಯದಲ್ಲೇ ಶಿವಮೊಗ್ಗದ ಜನ ದಿನ ದಬ್ಬುತ್ತಿದ್ದರು. ಅದು ಫೆಬ್ರವರಿ 19, 2015 ಶಿವಮೊಗ್ಗದ ಶಾಂತಿ ಕದಡಿ ಹೋಗಿದ್ದ ದಿನ, ಅದಾದ ಹದಿನೈದು ದಿನದೊಳಗೆ ಅಂದ್ರೆ ಮಾರ್ಚ್ 03ರಂದು ಶಿವಮೊಗ್ಗ ಎಸ್ಪಿ ಆಗಿ ಇವರು ಬಂದರು ಇವರು ಶಿವಮೊಗ್ಗಕ್ಕೆ ಎಂಟ್ರೀ ಕೊಟ್ಟಿದ್ದೇ ತಡ, ಶಿವಮೊಗ್ಗದಲ್ಲಿ ಬಾಲಬಿಚ್ಚಿದ ಪುಡಾರಿ, ಪಂಟ್ರು, ರೌಡಿಗಳೆಲ್ಲಾ ಬಾಲ ಮುದುರಿಕೊಂಡರು. ಇಂದು ಶಿವಮೊಗ್ಗದಲ್ಲಿ ಶಾಂತಿ ಮನೆ ಮಾಡಿದೆ.
ಅದೇ ರೀತಿ ಈಗ ಮೈಸೂರಿಗೆ ವರ್ಗಾವಣೆಗೊಂಡಿರುವ ಈ ಅಧಿಕಾರಿ ಅಲ್ಲಿಯೂ ಕೂಡ ತಮ್ಮ ನಡೆಯಿಂದ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಕೂಡ, ಹಾಗೆಯೇ ಮೊನ್ನೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಭಾನುವಾರ ಮಿನಿ ಗ್ರಂಥಾಲಯ ಉದ್ಘಾಟನೆ ಮಾಡಲಾಯಿತು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ತಮ್ಮ ಬದಲಾಗಿ ಠಾಣೆಯ ಕೆಳ ಹಂತದ ಮಹಿಳಾ ಪೊಲೀಸ್ ಸಿಬ್ಬಂದಿಯಿಂದಲೇ ಗ್ರಂಥಾಲಯವನ್ನು ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು.ನ್ನು ಕಂಡು ನಿಜ ವಿಷಯವನ್ನು ಅರಿತುಕೊಳ್ಳುವ ಸಹನೆ, ತಾಳ್ಮೆ , ಸಹೃದಯತೆಯನ್ನು ಸಿನ್ಹಾ ತೋರಿದರು. ಈ ವಿನೀಯತೆಯನ್ನು ಎಲ್ಲ ಅಧಿಕಾರಿಗಳು ಪಾಲಿಸಿದ್ದಲ್ಲಿ ಕೆಳ ಹಂತದ ಪೊಲೀಸರಲ್ಲಿ ಸಂತೋಷ ಮನೆ ಮಾಡುವುದಂತೂ ಖಂಡಿತ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
