fbpx
Karnataka

ಜನಾರ್ದನ ರೆಡ್ಡಿ ಮಗಳ ಮದುವೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ 8 ವಿಚಾರಗಳು…

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆಗೆ ಅರಮನೆ ಮೈದಾನ ಸಜ್ಜಾಗುತ್ತಿದೆ. ಬಳ್ಳಾರಿಯಲ್ಲಿ ಕಲ್ಯಾಣ ಮಹೋತ್ಸವದ ಕಾರ್ಯಕ್ರಮಗಳು ಈಗಾಗಲೆ ಆರಂಭಗೊಂಡಿದೆ. ಕೆಳಗಿನ ಎಂಟು ವಿಚಾರಗಳು ನೀವೂ ತಿಳಿದುಕೊಳ್ಳಿ :

ಒಂದು ಮದುವೆಯ ಕರೆಯೋಲೆಗೆ 6000 ರೂ :

ಒಂದು ಕಾರ್ಡ್ ಮದುವೆ ಕರೆಯೋಲೆಗೆ ಸುಮಾರು 6 ಸಾವಿರ ಖರ್ಚು ಮಾಡಿದ್ದ ಗಾಲಿ ರೆಡ್ಡಿ. LCD ಸ್ಕ್ರೀನ್ ನಲ್ಲಿ ವೀಡಿಯೊ ಇದ್ದು, ಪೇಪರ್ ನಲ್ಲಿ ಕೂಡ ಆಮಂತ್ರಣ ಪತ್ರ ಇದೆ. ಡಬ್ಬ ತೆಗೆದ ತಕ್ಷಣ ವಿಡಿಯೋ autoplay ಆಗುತ್ತೆ.

ಹೊಸ ನೋಟು ಬಿಟ್ರು no worry…

ಹೊಸ ನೋಟಿನ ಬಗ್ಗೆ ಬ್ರಹ್ಮಿಣಿ ಮದುವೆಯ ಆಹ್ವಾನ ಪತ್ರಿಕೆಯನ್ನು ವಿಡಿಯೋ ಜತೆಗೆ ಎಲ್ಲರಿಗೂ ತಲುಪಿಸಿದ ಕಾಲಕ್ಕೆ ಗಾಲಿ ರೆಡ್ಡಿಗೆ ಈ ಆದೇಶದ ಮುನ್ಸೂಚನೆ ಸಿಕ್ಕಿತ್ತು ಎನ್ನಲಾಗಿದೆ. ಪ್ರಧಾನಿ ಮೋದಿ ಅವರ ಮಹತ್ವದ ಆದೇಶ ಗಾಲಿ ರೆಡ್ಡಿ ಮನೆ ಮದುವೆಯ ಸಂಭ್ರಮವನ್ನು ತಗ್ಗಿಸಿಲ್ಲ.

ಶಾರುಖ್ ಖಾನ್ ಬರ್ತಾರೆ :

ಹೌದು, ಎಲ್ಲರನ್ನು ರಂಜಿಸಲು ಶಾರುಖ್ ಖಾನ್, ಕತ್ರೀನಾ ಕೈಫ್, ಪ್ರಭುದೇವ ಹಾಗೂ ತಮನ್ನಾ ಬರುವುದು ಪಕ್ಕಾ ಆಗಿದೆ.

ವಿಜಯನಗರ ಸಾಮ್ರಾಜ್ಯ ಮರು ನಿರ್ಮಾಣ :

ವಿಜಯನಗರ ಸಾಮ್ರಾಜ್ಯದ ಪ್ರಮುಖ ಕಟ್ಟಡಗಳನ್ನು ಅರಮನೆ ಮೈದಾನದಲ್ಲಿ ಮರುಸೃಷ್ಟಿಸಿದ್ದಾರೆ. ಈ ಹಿಂದೆ ಕೃಷ್ಣದೇವರಾಯ ಜಯಂತಿ ಸಂದರ್ಭದಲ್ಲಿ ತಮ್ಮನ್ನು ತಾವು ಅಭಿನವ ಶ್ರೀಕೃಷ್ಣದೇವರಾಯ ಎಂದು ಕರೆದುಕೊಂಡಿದ್ದ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮ ಮಗಳ ಮದುವೆಗೆ ಹಂಪಿಯ ಐತಿಹಾಸಿಕ ವಿಜಯ ವಿಠಲನ ನಕಲಿ ಮಂಟಪವೇ ನಾಚುವಂತೆ ಸೃಷ್ಟಿ ಮಾಡಲಾಗಿದೆ.

ಹಳ್ಳಿ ನಿರ್ಮಾಣ :

ವರ ರಾಜೀವ್ ರೆಡ್ಡಿ ಹಾಗೂ ಕುಟುಂಬಕ್ಕೆ ಅರಮನೆ ವೈಭೋಗದ ಜತೆಗೆ ಹಳ್ಳಿ ನಿರ್ಮಾಣ ಮಾಡಲಾಗಿದ್ದು ಹಾಗು ವಧು ಹಾಗೂ ಕುಟುಂಬದ ಸದಸ್ಯರ ವಿಶ್ರಾಂತಿಗಾಗಿ ಮೀಸಲಾಗಿದೆ. ಹಳಿಯಲ್ಲಿ ಇರುವ ಒಂದೊಂದು ಮನೆಗೆ ಸುಮಾರು 60 ಲಕ್ಷ ಖರ್ಚು ಮಾಡಲಾಗಿದೆಯಂತೆ! ಇಡೀ ಮದುವೆ ಮನೆ ತಲುಪುವ ಹಾದಿಯುದ್ದಕ್ಕೂ ಪಕ್ಕಾ ಹಳ್ಳಿ ಸೊಗಡಿನ ಟಚ್ ಸಿಕ್ಕಿದೆ.

ಕಲಾ ವಿನ್ಯಾಸಕ್ಕೆ ಕೋಟಿ ಕೋಟಿ :

ನಾಡಿನ ಹೆಮ್ಮೆಯ ಮತ್ತು ಹೆಸರಾಂತ ಕಲಾವಿದ ಶಶಿಧರ್ ಅಡಪ ಹಾಗೂ ಅವರ ತಂಡ ಕಲಾ ವಿನ್ಯಾಸ ಜವಾಬ್ದಾರಿ ವಹಿಸಿಕೊಂಡಿದೆ. ಶಶಿಧರ ಅಡಪ ಅಲ್ಲದೆ ಬಾಲಿವುಡ್ ನ ಶ್ರೀರಾಮ್ ಅಯ್ಯಂಗಾರ್, ಸುರ್ಜಿತ್ ಸಾವಂತ್ ಅವರು ಹಂಪಿಯ ಗತ ವೈಭವ ಸೆಟ್ ನಿರ್ಮಿಸಿದ್ದಾರೆ.

ಬಳ್ಳಾರಿ ನಗರದ ಬಜೆಟ್ ಮೀರಿಸಿದ ಮದುವೆ ಖರ್ಚು :

ಬಳ್ಳಾರಿಯ ಏಳು ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ, ಬಳ್ಳಾರಿ ನಗರದ ಬಜೆಟ್ 200 ಕೋಟಿ ರು ಒಳಗಿದೆ. ರೆಡ್ಡಿ ಮಗಳ ಮದುವೆ ಬಜೆಟ್ ಮೀರಿ ಸಾಗಿದೆ.50-60 ಕೋಟಿ ರು ವೆಚ್ಚದಲ್ಲಿ ಹಾವಂಭಾವಿಯಲ್ಲಿ ಶ್ರೀರಾಮುಲು ಅವರು ನಿರ್ಮಿಸಿರುವ ಮನೆಯ ಗೃಹಪ್ರವೇಶ ಮುಗಿಸಿಕೊಂಡು ಮದುವೆ ಕಾರ್ಯದಲ್ಲಿ ಗಾಲಿ ರೆಡ್ಡಿ ನಿರತರಾಗಿದ್ದಾರೆ.

ಭದ್ರತೆ ಬಗ್ಗೆ ಬಾರಿ ವೆಚ್ಚ :

ಹೌದು, ಪ್ರಧಾನ ಮಂತ್ರಿಯವರು ಕೂಡ ಅಷ್ಟು ಭದ್ರತೆ ಬಗ್ಗೆ ಕಾಳಜಿ ವಹಿಸುವುದಿಲ್ಲ ಎನ್ನಬಹುದು, ಸುಮಾರು 250 ಸೆಕ್ಯುರಿಟಿ ಗಾರ್ಡ್ ಗಳ ನಡುವೆ ಎರಡು ಎಂಟ್ರಿ ಹಾಗೂ ಮೂರು ಎಕ್ಸಿಟ್ ದ್ವಾರಗಳ ಮೂಲಕ ಮದುವೆ ಮನೆಗೆ ಪ್ರವೇಶ ಸಿಗಲಿದೆ. ಆಹ್ವಾನ ಪತ್ರಿಕೆ ಇದ್ದರೆ ಮಾತ್ರ ಪ್ರವೇಶ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top