fbpx
Entertainment

‘ಬಿಗ್ ಬಾಸ್’: ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ

‘ಬಿಗ್ ಬಾಸ್’ ಮಂಗಳವಾರದ ಸಂಚಿಕೆಯಲ್ಲಿ ಹುಚ್ಚ ವೆಂಕಟ್ ಅಬ್ಬರ ಜೋರಾಗಿತ್ತು. ಮನೆಯ ಸದಸ್ಯರಿಗೆ ನೋಡಿದರೂ ನೋಡದಂತೆ ವರ್ತಿಸುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅನ್ನು ಸದಸ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಪ್ರಥಮ್’ಗೆ ಹೊಡೆಯಬೇಕೆಂದು ಮುಂಚೆಯೆ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದೆ. ಈ ವಿಷಯವನ್ನು ಬಿಗ್’ಬಾಸ್ ಮೇಲ್ವಿಚಾರಕರಿಗೆ ತಿಳಿಸಿರಲಿಲ್ಲ ಎಂದು ಹುಚ್ಚ ವೆಂಕಟ್ ಸುವರ್ಣ ನ್ಯೂಸ್’ ಸಂದರ್ಶದಲ್ಲಿ ತಿಳಿಸಿದ್ದಾರೆ. ಈ ಮೊದಲು ಹುಚ್ಚ ವೆಂಕಟ್ ಅವರು ಸೀಸನ್ 3ರಲ್ಲೂ ರವಿ ಮೂರೂರು ಅವರ ಮೇಲೂ ಕೈ ಮಾಡಿದ್ದರು. ಸೀಸನ್ 4ರಲ್ಲೂ ಹುಚ್ಚ ವೆಂಕಟ್ ಅವರನ್ನು ಅತಿಥಿಯಾಗಿ ಕಳುಹಿಸಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಗೆ ಹುಚ್ಚವೆಂಕಟ್ ಹಲ್ಲೆ ಮಾಡಿದ ಘಟನೆಮೇಲೆ Thenewsism ವೊಟಿಂಗ್ ಮಾಡಲಾಗಿದೆ ನೀವು ಸಹ ನಿಮ್ಮ ಭಿಪ್ರಾಯ ತಿಳಿಸಿ

ನೋಡಿದರೂ ನೋಡದಂತೆ ಇರುವ ಟಾಸ್ಕ್ ನಲ್ಲಿ ಸದಸ್ಯರು ತಲ್ಲೀನರಾಗಿದ್ದಾಗ ‘ಬಂಗಾರಿ’ ಧಾರಾವಾಹಿ ತಂಡ ಎಂಟ್ರಿ ಕೊಟ್ಟಿದೆ. ಮನೆಯ ಸದಸ್ಯರೊಂದಿಗೆ ಧಾರಾವಾಹಿಯ ಕಲಾವಿದರು ಎಷ್ಟೆಲ್ಲಾ ಮಾತಾಡಲು ಪ್ರಯತ್ನಿಸಿದರೂ, ಫಲಿಸಲಿಲ್ಲ. ಬಳಿಕ ಬಂದ ಜೋಕರ್ ಕೂಡ ಸದಸ್ಯರ ಟಾಸ್ಕ್ ಗೆ ಭಂಗ ಉಂಟು ಮಾಡಲು ಮುಂದಾದರೂ ಯಶಸ್ವಿಯಾಗಲಿಲ್ಲ.

ಬಳಿಕ ಎಂಟ್ರಿ ಕೊಟ್ಟಿದ್ದೇ ಹುಚ್ಚ ವೆಂಕಟ್, ಭದ್ರತಾ ಸಿಬ್ಬಂದಿ ಜೊತೆಗೇ ಮನೆಗೆ ಬಂದ ವೆಂಕಟ್, ಸಿಸ್ಟರ್ ಏನ್ ಮಾಡ್ತಿದಿರಾ ಎಂದೆಲ್ಲಾ ಕೇಳಿದರಲ್ಲದೇ. ನಿರಂಜನ್ ಸೇರಿದಂತೆ ಕೆಲವರಿಗೆ ಕಿಚಾಯಿಸಿದ್ದಾರೆ. ಭುವನ್ ಬಳಿ ಲವ್ ಸ್ಟೋರಿ ಕೇಳಿದ್ದಲ್ಲದೇ, ಕೀರ್ತಿ ಚೆನ್ನಾಗಿ ಆಡ್ತೀಯಾ 50 ಲಕ್ಷ ರೂ ಬಂದ್ರೆ ನನಗೂ ಕೊಡು ಎಂದೆಲ್ಲಾ ಹೇಳಿದ್ದಾರೆ. ಅಲ್ಲದೇ, ಸಂಜನಾ ಬಟ್ಟೆ ಚೇಂಜ್ ಮಾಡಿ ಎಂದಿದ್ದು, ಶೀತಲ್ ಶೆಟ್ಟಿ ಡೆವಿಲ್ ಈಸ್ ಬ್ಯಾಕ್ ಎಂದಿದ್ದು ನಿಜ ಅನಿಸುತ್ತೆ ಎಂದೆಲ್ಲಾ ಹೇಳಿ ಸದಸ್ಯರನ್ನು ಪ್ರವೋಕ್ ಮಾಡಿದ್ದಾರೆ.

ಶಾಲಿನಿಗೆ ಟೀ ಮಾಡಿಕೊಡಿ ಎಂದು ಗಂಟುಬಿದ್ದರಾದರೂ ಯಾರೂ ಕ್ಯಾರೇ ಎನ್ನಲಿಲ್ಲ. ಪ್ರಥಮ್ ಅಡುಗೆ ತಯಾರಿಗೆ ಬೇಕಾದ ಪದಾರ್ಥವನ್ನು ಕುಟ್ಟುವಾಗ ಅಲ್ಲಿಗೆ ಬಂದ ವೆಂಕಟ್ ಏನೇನೋ ಹೇಳಿದರಾದರೂ ಪ್ರಥಮ್ ತಾಳ್ಮೆಯಿಂದಲೇ ಇದ್ದರು. ನೋಡಿದರೂ ನೋಡದಂತೆ, ಕೇಳಿದರೂ ಕೇಳದಂತೆ ತಮ್ಮ ಪಾಡಿಗೆ ತಾವು ಹಾಡು ಹೇಳಿಕೊಳ್ಳುತ್ತಾ ಕೊಟ್ಟಿದ್ದ ಪದಾರ್ಥವನ್ನು ಕುಟ್ಟುತ್ತಿದ್ದರು.

ಅವರ ಕೈಯಲ್ಲಿದ್ದ ಪರಿಕರಗಳನ್ನು ಕಸಿದ ವೆಂಕಟ್ ಇನ್ನಷ್ಟು ಕಿಚಾಯಿಸಿದಾಗ, ಪ್ರಥಮ್ ಕುಟ್ಟುತ್ತೇನೆ ಎಂದು ಜೋರಾಗಿ ಕೈಯಲ್ಲಿ ಸನ್ನೆ ಮಾಡಿದ್ದು, ಪಕ್ಕದಲ್ಲೇ ನಿಂತಿದ್ದ ವೆಂಕಟ್, ಪ್ರಥಮ್ ಕುತ್ತಿಗೆ ಹಿಡಿದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಆಗ ಪಕ್ಕದಲ್ಲೇ ನಿಂತಿದ್ದ ಭದ್ರತಾ ಸಿಬ್ಬಂದಿ ಅವರನ್ನು ತಡೆದು ‘ಬಿಗ್ ಬಾಸ್’ ಸೂಚನೆಯಂತೆ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಕನ್ಫೆಕ್ಷನ್ ರೂಂಗೆ ಹೋದ ಪ್ರಥಮ್ ಗೆ ‘ಬಿಗ್ ಬಾಸ್’ ನಿಮಗೆ ವೈದ್ಯರ ಅವಶ್ಯಕತೆ ಇದೆಯೇ ಎಂದಾಗ ಅವರು ಬೇಡ ಎಂದು ನಿರಾಕರಿಸಿದ್ದಾರೆ. ಹುಚ್ಚ ವೆಂಕಟ್ ಬಂದು ಅವಾಂತರ ಮಾಡಿದ ಬಗ್ಗೆ ಸದಸ್ಯರ ನಡುವೆ ಬಿಸಿಬಿಸಿ ಚರ್ಚೆಯೇ ನಡೆದಿದೆ.

ಎಲ್ಲ ಸ್ಪರ್ಧಿಗಳೊಂದಿಗೂ ಕೆಲ ಹೊತ್ತು ಮಾತನಾಡಿದರು. ಆದರೆ ಮಾತನಾಡಬಾರದೆಂಬ ಟಾಸ್ಕ್ ನೀಡಿದ್ದ ಕಾರಣ ಸ್ಪರ್ಧಿಗಳ್ಯಾರು ವೆಂಕಟ್ ಜೊತೆ ಮಾತನಾಡಿರಲಿಲ್ಲ. ಕೊನೆಯದಾಗಿ ಸ್ಪರ್ಧಿ ಪ್ರಥಮ್ ಬಳಿ ಬಂದು ಮಾತನಾಡಿಸಿದ್ದಾರೆ. ಅವರು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಏಕಾಏಕಿ ಪ್ರಥಮ್’ಗೆ ಹೊಡೆದು ಎಳದಾಡಿದರು. ತಕ್ಷಣವೇ ಬೌನ್ಸರ್’ಗಳು ಅವರನ್ನು ಬಿಗ್’ಬಾಸ್ ಮನೆಯಿಂದ ಕರೆದುಕೊಂಡು ಹೋದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top