fbpx
god

ಶ್ರೀ ಶೈಲ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗದ ಪುರಾಣದ ಕಥೆ

ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಆಂಧ್ರ ಪ್ರದೇಶದ ಶ್ರೀ ಶೈಲದಲ್ಲಿದೆ. ಇದು ಜ್ಯೋತಿರ್ಲಿಂಗ ವಲ್ಲದೆ ಮಹಾ ಶಕ್ತಿ ಪೀಠವೆಂದೂ ಹೆಸರಾಗಿದೆ. ಇದು ಕರ್ನೂಲು ಜಿಲ್ಲೆಯ ನಲ್ಲಮಲ ಅಥವಾ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿದೆ. ಕೃಷ್ಣಾನದಿ ಪಕ್ಕದಲ್ಲೇ ಆಳವಾದ ಕಣಿವೆಯಲ್ಲಿ ಹರಿಯುವುದು. ಇದು ಶೈವರಿಗೂ ಕನ್ನಡನಾಡಿನ ವೀರಶೈವರಿಗೂ ಮುಖ್ಯ ಯಾತ್ರಾ ಸ್ಥಳವಾಗಿದೆ.

mallikarjuna3-1

ಕನ್ನಡನಾಡಿನ ಶಿವ ಭಕ್ತೆಯೂ ಶರಣಳೂ , ವಚನಕಾರ್ತಿಯೂ ಆದ ಉಡುತಡಿಯ ಅಕ್ಕ ಮಹಾದೇವಿ ಸರ್ವಸಂಗ ಪರಿತ್ಯಾಗಿಯಾಗಿ ಚನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಅವನನ್ನು ಅರಸುತ್ತಾ ಶ್ರೀಶೈಲಕ್ಕೆ ಬಂದು ಅಲ್ಲಿನ ಕದಳೀವನದಲ್ಲಿ ಶಿವನಲ್ಲಿ ಐಕ್ಯವಾದಳು ಎಂದು ಇತಿಹಾಸ ಹೇಳುತ್ತದೆ. ಸ್ವಲ್ಪ ದೂರದಲ್ಲಿ ಅಕ್ಕಮಹಾದೇವಿಯ ಗುಹೆಯೂ ಇದೆ. ಅಲ್ಲಿಗೆ ಹೋಗಲು ಸರ್ಕಾರದವರು (ಪ್ರವಾಸ ಇಲಾಖೆಯವರು) ಬೋಟಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಶರಣ ಶ್ರೇಷ್ಠರಾದ ಅಲ್ಲಮ ಪ್ರಭುಗಳು ಶ್ರೀಶೈಲದಲಿ ಇದ್ದರು ಎಂದು ಹೇಳುತ್ತಾರೆ. (ಹರಿಹರ ಕವಿಯ ಅಕ್ಕಮಹಾದೇವಿ ಚರಿತ್ರೆ)

%e0%b2%85%e0%b2%95%e0%b3%8d%e0%b2%95%e0%b2%ae%e0%b2%b9%e0%b2%be-%e0%b2%a6%e0%b3%87%e0%b2%b5%e0%b2%bf

ಶಿವ ಪುರಾಣದ ಕಥೆ

ಇತರೆ ಜ್ಯೋತಿರ್ಲಿಂಗದ ಕಥೆಯಂತೆಯೇ ಇಲ್ಲಿಯ ಕಥೆಯೂ ಇದೆ. ಬ್ರಹ್ಮ ಮತ್ತು ವಿಷ್ಣು ಇವರಲ್ಲಿ ಯಾರು ಮೇಲೆಂದು ಚರ್ಚೆಯಾದಾಗ, ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ (ಬೆಳಕಿನ) ಆದಿ ಅಂತ್ಯ ವಿಲ್ಲದ ಮೂರು ಕಂಬಗಳನ್ನು (ಅವು ಬ್ರಹ್ಮ , ವಿಷ್ಣು ಮಧ್ಯ ಮಹೇಶ್ವರ) ಸೃಷ್ಠಿಸಿದನು (ಜ್ಯೋತಿರ್ಲಿಲಿಂಗ). ವಿಷ್ಣು ಮತ್ತು ಬ್ರಹ್ಮ ರಿಗೆ ಅದರ (ಮಧ್ಯದಲಿಂಗ) ಮತ್ತು ಮೇಲಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ ಕೆಳಗಿನ ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮ ನು (ಮೇಲಿನ) ತಾನು ನೋಡಿರುವದಾಗಿ ಹೇಳಿದನು. ಈಶ್ವರನು .ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ.

shiva

ಶ್ರೀ ಶೈಲದ ಹೆಸರಿನ ಕಥೆ.

ಶಿವ ಪಾರ್ವತಿಯರು ತಮ್ಮ ಮಕ್ಕಳಾದ ಗಣೇಶ ಕಾರ್ತಿಕೇಯರಿಗೆ ವಿವಾಹಮಾಡಲು ನಿಶ್ಚಯಿಸಿ ವಧುಗಳಾದ ಸಿದ್ಧಿ ಮತ್ತು ಬುದ್ಧಿಯರನ್ನು ವಿವಾಹಮಾಡಲು ನಿಶ್ಚಯಿಸಿದರು. ಅವನ್ನು ಯಾರಿಗೆ ವಿವಾಹಮಾಡಬೇಕೆಂದು ಪರೀಕ್ಷಿಸಲು ಒಂದು ಪಣವನ್ನು ಇಟ್ಟರು. ಈ ಜಗತ್ತನ್ನು ಮೊದಲು ಯಾರು ಸುತ್ತು ಹಾಕಿ ಬರುವರೋ ಅವರಿಗೆ ವಿವಾಹ ಮಾಡುವುದೆಂದು ನಿರ್ಧರಿಸಿದರು. ಕಾರ್ತಿಕೇಯನು ಅವನ ವಾಹನ ನವಿಲಿನ ಮೇಲೆ ಜಗತ್ತನ್ನು ಸುತ್ತಿ ಬರಲು ಹೊರಟನು. ಗಣೇಶನು ಶಿವ ಪಾರ್ವತಿಯರೇ ಜಗತ್ತಿನ ಸ್ವರೂಪರೆಂದು ಹೇಳಿ ಅವರನ್ನೇ ಒಂದು ಸುತ್ತು ಬಂದು ಕುಳಿತನು. ಅದನ್ನು ಒಪ್ಪಿ ಶಿವ ಪಾರ್ವತಿಯರು ಗಣೇಶನಿಗೆ ಸಿದ್ಧಿ ಮತ್ತು ಬುದ್ಧಿಯರನ್ನು ಕೊಟ್ಟು ವಿವಾಹ ಮಾಡಿದರು. ಕಾರ್ತಿಕೇಯನು ಜಗವನ್ನು ಪ್ರದಕ್ಷಿಣೆಮಾಡಿ ಬಂದು ಇದನ್ನು ನೋಡಿ ಸಿಟ್ಟಾಗಿ ಕೈಲಾಸವನ್ನು ಬಿಟ್ಟು ಬಂದು ಕೃವಂಗ (ಶ್ರೀಶೈಲ) ಪರ್ವತಕ್ಕೆ ಬಂದು ನೆಲಸಿದನು .

kartikeya-and-ganesha

ಶಿವ ಪಾರ್ವತಿಯರು ಅವನನ್ನು ಹಿಂಬಾಲಿಸಿ ಬಂದು ಅವನಿಗೆ ಸಮಾಧಾನ ಮಾಡಲು ನೋಡಿದರು ಆದರೆ ಅವನು ಒಪ್ಪದೆ ಬೇರೆ ಪರ್ವತಕ್ಕೆ ಹೋಗಲು ಹವಣಿಸಿದನು. ಆಗ ದೇವತೆಗಳು ಕುಮಾರನೂ ಶಿವ ಪಾರ್ವತಿಯರೂ ಅಲ್ಲಿಯೇ ನೆಲಸಬೇಕೆಂದು ಕೋರಿದರು. ಅಂತಯೇ ಮುರುಗನೂ (ಕಾರ್ತಿಕೇಯ : ಕುಮಾರ) ಶಿವ ಪಾರ್ವತಿಯರೂ ಅಲ್ಲಿಯೇ ನೆಲಸಿದರು. ಅದಕ್ಕೆ ಶ್ರೀ ಶೈಲ ವೆಂದು ಹೆಸರುಬಂದಿತು. ಆದರೆ ನಂತರ ಶಿವನು ಅಮಾವಾಸ್ಯೆಯಂದೂ , ಪಾರ್ವತಿಯು ಹುಣ್ಣಿಮೆಯಂದೂ ಕಾರ್ತಿಕೇಯನನ್ನು ನೋಡಲು ಅಲ್ಲಿಗೆ ಬರುವರೆಂಬ ನಂಬುಗೆ ಇದೆ

mallikarjuna_shivling

ಶಕ್ತಿ ಪೀಠದ ಪುರಾಣ ಕಥೆ

ದಕ್ಷ ಯಜ್ಞದ ಕಾಲದಲ್ಲಿ ಯಜ್ಞ ಕುಂಡಕ್ಕೆ ಅಹುತಿಯಾದ ಸತೀ ದೇವಿಯು ನಂತರ ಪಾರ್ವತಿಯಾಗಿ ಹುಟ್ಟಿ ಬಂದು ಶಿವನನ್ನು ವಿವಾಹವಾದ ಕಥೆ ಪ್ರಸಿದ್ಧವಾಗಿದೆ. ಆ ಸತಿ ದೇವಿಯ ಶಕ್ತಿ ಹದಿನೆಂಟು ಕಡೆ ನೆಲಸಿ ಆ ಪ್ರದೇಶಗಳು ಹದಿನೆಂಟು ಮಹಾಶಕ್ತಿ ಸ್ಥಳಗಳೆಂದು ಪ್ರಸಿದ್ಧವಾಗಿವೆ *ಆ ಹದಿನೆಂಟು ಮಹಾ ಶಕ್ತಿ ಸ್ಥಳಗಳಲ್ಲಿ ಶ್ರೀಶೈಲವೂ ಒಂದು . ಇದರ ಹಿಂದಿರುವ ಕಥೆ . ಸತೀದೇವಿಯು ಯಜ್ಞಕುಂಡವನ್ನು ಪ್ರವೇಶಿಸಿದ ನಂತರ ಶಿವನು ಅವಳ ದೇಹವನ್ನು ಹೊತ್ತು ಸಂಚರಿಸುವಾಗ ಅವಳದೇಹದ ಒಂದು ಭಾಗ (ತುಣುಕು – ತುಟಿ) ಶ್ರೀಶೈಲ ಪ್ರದೇಶಗಲ್ಲಿ ಬಿದ್ದಿತೆಂದೂ, ಆದ್ದರಿಂದ ಇದು ಮಹಾಶಕ್ತಿ ಸ್ಥಳವಾಗಿ ಪರಿಗಣಿಸಲ್ಪಟ್ಟಿರುವುದಂದೂ ಹೇಳವರು .

bhramaramba-devi-temple1

ಶ್ರೀಶೈಲಕ್ಕೆ ಮಾರ್ಗ.

ಹ್ಶೆದರಾಬಾದು ಇಲ್ಲಿಗೆ ೧೭೫ ಕಿ.ಮೀ. ಹತ್ತಿರದ ರೈಲ್ವೆ ನಿಲ್ದಾಣ ಮರ್ಕಾಪುರ ; ಓಂಗಲೆ ; ನಂದ್ಯಾಲ ; ಹ್ಶೆದರಾಬಾದು -ಮೆಹಬೂಬನಗರ ( ರಾ ಹೆ.೭) – ಶ್ರೀಶೈಲಮ್ /ಓಂಗಲೆ – ಗೂತಿ – ಅತಮ್‌ಕೂರು- ಶ್ರೀಶೈಲಮ್ ದೇವಾಲಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top