ಭಾರತೀಯ ತೈಲ ನಿಗಮ ನಿಯಮಿತದ ಪಾಣಿಪತ್ ಘಟಕದಲ್ಲಿ ಜೂನಿಯರ್ ಎಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
ವಿವಿಧ ವಿಭಾಗಗಳಲ್ಲಿ ಎಂಜಿನಿಯರಿಂಗ್ ಅಸಿಸ್ಟೆಂಟ್‌ಗಳ ನೇಮಕ ನಡೆಯಲಿದೆ. ಪ್ರೊಡಕ್ಷನ್ ವಿಭಾಗದಲ್ಲಿ 35 ಹುದ್ದೆಗಳು, ಪವರ್ ಆ್ಯಂಡ್ ಯುಟಿಲಿಟೀಸ್ ವಿಭಾಗದಲ್ಲಿ 11 ಹುದ್ದೆಗಳು, ಮೆಕ್ಯಾನಿಕಲ್-ಫಿಟ್ಟರ್ ವಿಭಾಗದಲ್ಲಿ 13 ಹುದ್ದೆಗಳು ಮತ್ತು ಒಂದು ಜೂನಿಯರ್ ಕ್ವಾಲಿಟಿ ಕಂಟ್ರೋಲ್ ಅಸಿಸ್ಟೆಂಟ್ ಹುದ್ದೆ ಸೇರಿ ಒಟ್ಟು 60 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಅರ್ಹತೆ: ಮೂರು ವರ್ಷದ ಡಿಪ್ಲೊಮಾ ಅಥವಾ ಬಿಎಸ್ಸಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಗದಿತ ವಿದ್ಯಾರ್ಹತೆಯಲ್ಲಿ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಶೇಕಡಾ 50 ಅಂಕಗಳೊಂದಿಗೆ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡಾ 45 ಅಂಕಗಳೊಂದಿಗೆ ತೇರ್ಗಡೆಯಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18ಕ್ಕಿಂತ ಕಡಿಮೆ ಇರಬಾರದು. 26 ವರ್ಷ ಮೀರಿರಬಾರದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ ಮೂರು ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂಪಾಯಿ ಮತ್ತು ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಉಳಿದೆಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇರುತ್ತದೆ. ಡಿಡಿ ಪಡೆದು ಶುಲ್ಕವನ್ನು ಪಾವತಿಸಲು ಸೂಚಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿರುವ ಅರ್ಜಿಗಳನ್ನು ಡಿಸೆಂಬರ್ 5ರೊಳಗೆ ಈ ವಿಳಾಸಕ್ಕೆ ಕಳುಹಿಸಿ: Chief Human Resources Manager, HR Department, Panipat Refinery & Petrochemical Complex, Panipat, Haryana-132140
ಐಒಸಿಎಲ್‌ನ ‘ಇಂಡಿಯನ್ ಆಯಿಲ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್’ ವಿಭಾಗದಲ್ಲಿ ಎಂಟು ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕಲ್ ಮತ್ತು ಕೆಮಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳು ಮತ್ತು ಡೆಪ್ಯುಟಿ ಮ್ಯಾನೇಜರ್ ರಿಸರ್ಚ್ ಹುದ್ದೆ ಗಳು ಖಾಲಿ ಇವೆ. ಎಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಡಿಸೆಂಬರ್ 12ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
