ದೇಶಪರ ಮತ್ತು ದೇಶ ವಿರೋಧಿ ಎಂಬ ವಿಷಯ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ ಸಾಮಾಜಿಕ ನ್ಯಾಯ ಹಾಗೂ ಅಸಮಾನತೆ ಹೋಗುವವರೆಗೂ ನಾವೆಲ್ಲರೂ ಒಂದು ರೀತಿಯಲ್ಲಿ ದೇಶವಿರೋಧಿಗಳೇ ಎಂದು ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂಧೆ ಅಭಿಪ್ರಾಯಪಟ್ಟಿದ್ದಾರೆ.
ಪತ್ರಕರ್ತರಾದ ಎ.ಆರ್.ಮಣಿಕಾಂತ್ ಮತ್ತು ಹ.ಚ.ನಟೇಶ್‌ಬಾಬು ಜಂಟಿಯಾಗಿ ಇಂಗ್ಲೀಷ್‌ನಿಂದ ಭಾಷಾಂತರಿಸಿದ ವಿಕಲಚೇತನ ಅಥ್ಲೀಟ್‌ಗಳ ಸ್ಫೂರ್ತಿದಾಯಕ ಕಥೆಗಳ ಸಂಕಲನ ‘ಗಿಫ್ಟೆಡ್’ ಕೃತಿ ಬೆಂಗಳೂರಿನಲ್ಲಿ ಗುರುವಾರ ನಡೆಯಿತು. ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ವಿಕಲಚೇತನ ಎಂಬುದು ದೇಹಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಮಾನಸಿಕ ಅಸ್ವಸ್ಥತೆ ಸೇರಿದಂತೆ ಹಲವು ರೀತಿಯಲ್ಲಿವೆ. ವಿಕಲಚೇತರಿಗೆ ಯಾವಾಗ ಎಲ್ಲರಂತೆ ಸಮಾನ ಗೌರವ ದೊರೆಯುವುದಿಲ್ಲವೊ ಅಲ್ಲಿಯವರೆಗೆ ದೇಶದಲ್ಲಿ ಸಮಾನತೆ ತರಲು ಸಾಧ್ಯವಿಲ್ಲ ಎಂದರು.
ಅಂತಾರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಮಾಲತಿ ಹೊಳ್ಳ ಮಾತನಾಡಿ, ನಮ್ಮ ಅಂಗವೈಕಲ್ಯ ಅನ್ನುವುದು ಪೋಸ್ಟರ್‌ನಂತೆ ಕಾಣುತ್ತದೆ. ಆದರೆ ಕೀಳರಿಮೆ, ಮಾನಸಿಕ ಅಸ್ವಸ್ಥತೆ, ಸೋಮಾರಿತನ, ಮುಂತಾದ ವೈಕಲ್ಯದಿಂದ ನರಳುವವರಿಗೆ ನಾವು ಸ್ಫೂರ್ತಿಯಾಗಿರಲು ಹೆಮ್ಮೆ ಎನಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಚ್.ಎಸ್. ವೆಂಕಟೇಶ್‌ಮೂರ್ತಿ, ಆಂಗ್ಲಕೃತಿ ಲೇಖಕರಾದ ಸುಧಾ ಮೆನನ್, ವಿ.ಆರ್. ಫಿರೋಜ್ ಮುಂತಾದವರು ಉಪಸ್ಥಿತರಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
