fbpx
cinema

ರೋಬೊ ಚಿತ್ರದ ಎರಡನೇ ಅವತರಣಿಕೆ 2.0 ಚಿತ್ರದ ಫಸ್ಟ್ ಲುಕ್ ನಲ್ಲಿ ರಜನಿ-ಅಕ್ಷಯ್ ಮಿಂಚು

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿದ್ದಾರೆ ಅಂದರೆ ಆ ಚಿತ್ರ ಬಿಡುಗಡೆ ಮಾತಿರಲಿ, ಚಿತ್ರೀಕರಣದ ಪ್ರತಿಯೊಂದು ಸುದ್ದಿಯೂ ಅಭಿಮಾನಿಗಳ ಪಾಲಿಗೆ ಕುತೂಹಲ. ಅದರಲ್ಲೂ ಶಂಕರ್- ಎ.ಆರ್. ರೆಹಮಾನ್ ಮತ್ತು ರಜನಿಕಾಂತ್ ಕಾಂಬಿನೇಷನ್ ಅಂದರೆ ಕೇಳಬೇಕಾ? ಅಭಿಮಾನಿಗಳ ಮೈಯೆಲ್ಲಾ ಕಿವಿಯಾಗಿರುತ್ತದೆ.

ಅಭಿಮಾನಿಗಳ ಮನ ಸ್ವಲ್ಪಮಟ್ಟಿಗೆ ತಣಿಸುವ ಉದ್ದೇಶದಿಂದಲೋ ಏನೋ ಈ ತ್ರಿವಳಿಗಳ ಜೊತೆ ಮತ್ತೊಬ್ಬ ಸೂಪರ್ ಸ್ಟಾರ್ ಅಕ್ಷಯ್‌ಕುಮಾರ್ ನಟಿಸಿರುವ ರೋಬೊ ಚಿತ್ರದ ಎರಡನೇ ಅವತರಣಿಕೆ 2.0 ಚಿತ್ರದ ಫಸ್ಟ್ ಲುಕ್ ಭಾನುವಾರ ಬಿಡುಗಡೆ ಮಾಡಲಾಯಿತು.

capture

ಮುಂಬೈನಲ್ಲಿ ಭಾನುವಾರ ಸಂಜೆ ನಡೆದ ಫಸ್ಟ್‌ಲುಕ್ ಬಿಡುಗಡೆ ಕಾರ್ಯಕ್ರಮಕ್ಕೆ ಸಲ್ಮಾನ್‌ಖಾನ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಕರಣ್ ಜೋಹರ್ ಜೊತೆ ಆಗಮಿಸಿದ್ದೂ ಅಲ್ಲದೇ ಹಾಡಿ ನಲಿದು ಗಮನ ಸೆಳೆದರು.

350 ಕೋಟಿ ಬಜೆಟ್

ಸುಮಾರು 350 ಕೋಟಿ ರೂ. ಈ ಚಿತ್ರಕ್ಕೆ ಬಂಡವಾಳ ಹೂಡಲಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಬಜೆಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರದ ಸೆಟ್‌ಗಾಗಿಯೇ 50 ಕೋಟಿ ರೂ. ಮೊತ್ತದ ಸೆಟ್ಟಿಂಗ್ ಹಾಕಲಾಗಿದ್ದು, ಬಾಹುಬಲಿ ಚಿತ್ರಕ್ಕಿಂತ ದೊಡ್ಡ ಮೊತ್ತ ಎಂದು ಹೇಳಲಾಗುತ್ತಿದೆ.

3 ಪಾತ್ರದಲ್ಲಿ ರಜನಿ?

ರಜನಿಕಾಂತ್ ಈ ಚಿತ್ರದಲ್ಲಿ ಮೂರು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಎಂಧಿರನ್ ಚಿತ್ರದ ವಿಜ್ಞಾನಿ ‘ವಸಿಗರನ್’ ಪಾತ್ರ, ರೊಬೊ ‘ಚೆಟ್ಟಿ’ ಹಾಗೂ ಖಳಛಾಯೆ ಇರುವ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಖಳನಾಗಿ ಅಕ್ಷಯ್ ಮಿಂಚು

akshay-11

ವಿಜ್ಞಾನಿ ಸುಧಾಂಶು ಅವರ ಸಹಾಯಕ ವಿಜ್ಞಾನಿಯಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಪ್ರಯೋಗ ಮಾಡು ವಾಗ ಆಗುವ ಪ್ರಮಾದದಿಂದ ಅಕ್ಷಯ್ ಕಣ್ಣು ಹಾಗೂ ಮುಖ ಸುಟ್ಟು ಹೋಗುತ್ತದೆ. ಆದರೆ ವಿಶೇಷ ಶಕ್ತಿ ಬರುತ್ತದೆ ಎಂದು ಪಾತ್ರದ ಸುಳಿವು ಬಿಟ್ಟುಕೊಡಲಾಗಿದೆ.

ಡ್ಯಾನಿ ಮಗನ ಪಾತ್ರದಲ್ಲಿ ಸುಧಾಂಶು

ಸುಧಾಂಶು ಈ ಚಿತ್ರದಲ್ಲಿ ವಿಜ್ಞಾನಿ ಪಾತ್ರ ನಿರ್ವಹಿಸಲಿದ್ದಾರೆ. ಎಂಧಿರನ್ ಚಿತ್ರದಲ್ಲಿ ಖಳನಾಗಿ ಕಾಣಿಸಿಕೊಂಡಿದ್ದ ಡ್ಯಾನಿ ಪುತ್ರನಾಗಿ ಸುಧಾಂಶು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆಯ ಪ್ರಯೋಗ ಮುಂದುವರಿಸುವ ಸುಧಾಂಶು ಅವರ ಪ್ರಯೋಗದಲ್ಲಿ ಆದ ಪ್ರಮಾದದಿಂದ ಅಕ್ಷಯ್‌ಕುಮಾರ್ ಕಾಗೆಯಾಗಿ ಬದಲಾಗುತ್ತಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top