ಇಂದಿನಿಂದ ಇಂದು ಬೆಳಗ್ಗೆ 10 ಗಂಟೆ ನಂತರ ಬೆಳಗಾವಿ ಜಿಲ್ಲೆಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ.
ಯಾವ ವಿಚಾರಗಳ ಬಗ್ಗೆ ಚರ್ಚೆ :
- ಜೆಡಿಎಸ್ ಈ ಬಾರಿ ಉತ್ತರ ಕರ್ನಾಟಕದ ವಿಚಾರಗಳಿಗೆ ಹೆಚ್ಚು ಆದ್ಯತೆ ಕೊಡಲು ತೀರ್ಮಾನಿಸಿದೆ.
- ಅರೆ ನಗ್ನ ಫೋಟೋ ವೀಕ್ಷಣೆ ಸಂಬಂಧ ಸಚಿವ ತನ್ವೀರ್ ಸೇಠ್ ತಲೆದಂಡಕ್ಕೆ ಬಿಜೆಪಿ ಆಗ್ರಹಿಸುವ ಸಾಧ್ಯತೆ.
- ಮೊದಲ ದಿನವೇ ಕ್ಷಾಮದ ಬಗ್ಗೆ ಚರ್ಚಿಸಲು ಕೋರಿ ನಿಲುವಳಿ ಮಂಡನೆ ಮಾಡಲು ವಿಪಕ್ಷ ಬಿಜೆಪಿ ಸಿದ್ಧತೆ ಮಾಡ್ಕೊಂಡಿದೆ.
- ರೈತರ ಸಾಲ ಮನ್ನಾ.
- ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ.
- ಹೊಸ ನೋಟಿನಿಂದ ಆಗುತ್ತಿರುವ ಲಾಭ ನಷ್ಟಗಳ ಬಗ್ಗೆ.
ಅಧಿವೇಶನ ಸುಗಮವಾಗಿ ನೆಡೆಸಲು ಸ್ಪೀಕರ್ ತಯಾರಿ :
- ಗದ್ದಲ ಗಲಾಟೆಗಳಿಗೆ ಸದನ ಬಲಿ ಆಗೋದನ್ನ ತಡೆಯಲು ವಿಧಾನಸಭೆ ನಿಯಮಾವಳಿಗಳನ್ನ ತಿದ್ದುಪಡಿ ಮಾಡಿಕೊಂಡೇ ಕಲಾಪ ಆರಂಭಿಸಲು ಸ್ಪೀಕರ್ ಕೋಳಿವಾಡ ಮುಂದಾಗಿದ್ದು, ವಿಧಾನಸಭೆ ಸಭೆ ನಿಯಮಗಳಿಗೆ ತಿದ್ದುಪಡಿ ಕರಡು ರೆಡಿ ಮಾಡಿದ್ದಾರೆ.
- ಈ ಬಾರಿ ಅಧಿವೇಶನಕ್ಕೆ ಶಾಸಕರು ಆಪ್ತರನ್ನ ಕರೆತರುವ ಹಾಗಿಲ್ಲ ಮತ್ತು ಆಪ್ತರಿಗೆಲ್ಲ ವಸತಿ ಕಲ್ಪಿಸಲು ಸಾಧ್ಯವಿಲ್ಲ ಅಂತಾ ಸ್ಪೀಕರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.
- ಎಲ್ಲಾ ಶಾಸಕರಿಗೂ ಬೆಳಗಾವಿಯಲ್ಲೇ ವಸತಿ ವ್ಯವಸ್ಥೆ ಸಾಧ್ಯವಿಲ್ಲ. ಕೆಲವರಿಗೆ ಹುಬ್ಬಳ್ಳಿಯಲ್ಲಿ ಕಲ್ಪಿಸಲಾಗಿದೆ. ಇದೇ ಕಾರಣ ನೀಡಿ ಸಭೆಗೆ ಗೈರಾಗಬೇಡಿ ಅಂತಾ ಸ್ಪೀಕರ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
- ಬೆಳಗಿನ ಕಲಾಪಗಳಲ್ಲಿ ನಿಲುವಳಿ ಸೂಚನೆ ಮೇಲಿನ ಚರ್ಚೆಗೆ ಅವಕಾಶವಿಲ್ಲ. ಕಲಾಪ ಆರಂಭದ 3 ಗಂಟೆಗಳ ಕಾಲ ಪ್ರಶ್ನೋತ್ತರ. ಶೂನ್ಯ ವೇಳೆ ಯಾವುದೇ ಅಡೆತಡೆ ಇಲ್ಲದೆ ನಡೆಯಬೇಕು
ಕಟ್ಟೆಚ್ಚರ :
- ಈ ಬಾರಿಯೂ ಅಧಿವೇಶನಕ್ಕೆ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಾವ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನೀಡಿಲ್ಲ
- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ. ಸಾವಿರಾರು ರೈತರು ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ರೆ ಪ್ರತಿಭಟನೆ ಹತ್ತಿಕ್ಕಲು ನಿರ್ಧರಿಸಿರುವ ಸರ್ಕಾರ, ರೈತರನ್ನು ಭಾನುವಾರ ರಾತ್ರಿಯಿಂದಲೇ ಬಂಧಿಸುತ್ತಿದೆ.
- ಮುಧೋಳದಲ್ಲಿ 10 ರೈತರನ್ನ ಅರೆಸ್ಟ್ ಮಾಡಲಾಗಿದೆ. ಆಯಾ ಜಿಲ್ಲೆಗಳಲ್ಲೇ ಅನ್ನದಾತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.
- ಮುಂಜಾಗ್ರತಾ ಕ್ರಮವಾಗಿ ಸುವರ್ಣಸೌಧದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
- ಈ ಬಾರಿ ಶಾಂತಿಯುತ ಪ್ರತಿಭಟನೆ ಮಾಡಲು ಜಿಲ್ಲಾಡಳಿತವೇ ಸ್ಥಳ ನಿಗದಿಪಡಿಸಿ ಟೆಂಟ್ ಕೂಡ ನಿರ್ಮಿಸಿಕೊಟ್ಟಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
