ಖಾಲಿ ಹುದ್ದೆಗಳ ಸಂಖ್ಯೆ: 500
ಅರ್ಜಿ ಸಲ್ಲಿಸಲು ಕೊನೆ ದಿನ : ನವೆಂಬರ್ 30, 2016
ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ : ಜನವರಿ 6, 2017
ರಾಜ್ಯದಲ್ಲಿನ ಪರೀಕ್ಷಾ ಕೇಂದ್ರ: ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ
ವಿವರಗಳಿಗೆ: www.idbi.com
ಅರ್ಹತೆಗಳೇನು?:
ಯಾವುದೇ ವಿಷಯದಲ್ಲಿ ಶೇಕಡಾ 60 ಅಂಕಗಳೊಂದಿಗೆ ಪದವಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್ಸಿ/ಎಸ್ಟಿ ಅಥವಾ ಅಂಗವಿಕಲ ಅಭ್ಯರ್ಥಿಗಳಿಗೆ ಶೇ.55 ಅಂಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ವಯೋಮಿತಿ 20ರಿಂದ 25 ವರ್ಷ. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಎಷ್ಟು :
ಸಾಮಾನ್ಯ ಅಭ್ಯರ್ಥಿಗಳಿಗೆ 700 ರೂ. ಮತ್ತು ಎಸ್ಸಿ/ಎಸ್ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 150 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆನ್ಲೈನ್ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಆನ್ಲೈನ್ನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇದಕ್ಕೆ ಎಸ್ಸಿ/ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತಯಾರಿ ತರಬೇತಿ ನೀಡಲಾಗುತ್ತದೆ.
ಪರೀಕ್ಷೆ ಹೇಗಿರುತ್ತದೆ?
ಅಬ್ಜೆಕ್ಟೀವ್ ಮಾದರಿಯಲ್ಲಿ ಆನ್ಲೈನ್ ಪರೀಕ್ಷೆ ನಡೆಯಲಿದ್ದು, 150 ಅಂಕಗಳ 150 ಪ್ರಶ್ನೆಗಳಿಗೆ ಅಭ್ಯರ್ಥಿಗಳು 90ನಿಮಿಷದಲ್ಲಿ ಉತ್ತರಿಸಬೇಕಿರುತ್ತದೆ. ರೀಸನಿಂಗ್, ವರ್ಕಿಂಗ್ ಇಂಗ್ಲಿಷ್ ಲಾಂಗ್ವೆಜ್ ಮತ್ತು ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ಗೆ ಸಂಬಂಧಿಸಿದಂತೆ ತಲಾ 50 ಪ್ರಶ್ನೆಗಳಿರಲಿವೆ. ಪ್ರತಿ ತಪ್ಪು ಉತ್ತರಗಳಿಗೆ 0.25 ಅಂಕ ಕಳೆಯಲಾಗುತ್ತದೆ. ಪ್ರವೇಶ ಪತ್ರವನ್ನು ಡಿಸೆಂಬರ್ 27ರ ನಂತರ ಅಭ್ಯರ್ಥಿಗಳು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳುವಂತೆ ಬ್ಯಾಂಕ್ ಸೂಚಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
