fbpx
Karnataka

ಭಾರತದ ಪಾರಂಪರಿಕ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ

ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒಂದು. ಭಾರತ ದೇಶದಲ್ಲಿ ಜನರ ಮನ್ನಣೆ ಗಳಿಸಿದ ಪ್ರಮುಖ ಕಲೆಯಾಗಿ ಭರತನಾಟ್ಯ ಕಲೆ ಬೆಳೆದು ದೇಶದ ಸಾಂಸ್ಕೃತಿಕ ಕಲೆಯಲ್ಲಿ ಈ ನಾಟ್ಯ ಒಂದಾಗಿ ಬೆಳೆದು ಬಂದಿದೆ.

ಭರತನಾಟ್ಯವು ದಕ್ಷಿಣ ಭಾರತದ ಒಂದು ಪಾರಂಪರಿಕ ನೃತ್ಯ ಕಲೆ. ಭರತಮುನಿಯಿಂದ ರಚಿಸಲ್ಪಟ್ಟ ನಾಟ್ಯ ಶಾಸ್ತ್ರ ಕೃತಿಯಲ್ಲಿ ಇದರ ಮೊದಲ ಉಲ್ಲೇಖವಿರುವುದರಿಂದ ಭರತನಾಟ್ಯ ಎಂದು ಕರೆಯಲ್ಪಟ್ಟಿದೆ. ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು. ಅದಕ್ಕೆ ಸಂಸ್ಕೃತ ಜ್ಞಾನ, ಗ್ರಾಮ್ಯ ಭಾಷೆಯ ಜ್ಞಾನ ಇರಬೇಕು. ಭರತ ಎನ್ನುವ ಪದಕ್ಕೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ಹೇಳುವುದು ಸರಿಯಲ್ಲ. ಪುರಂದರ ದಾಸವರೇಣ್ಯರು “ಆಡಿದನೋ ರಂಗ ” ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ.

19ನೇ ಶತಮಾನದವರೆಗೆ ದೇವಸ್ಥಾನಗಳಲ್ಲಿ ದೇವರ ಪ್ರೀತ್ಯರ್ಥವಾಗಿ, ರಾಜರ ಆಸ್ಥಾನಗಳಲ್ಲಿ ಮನರಂಜನೆಯ ಪ್ರಕಾರವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಭರತನಾಟ್ಯ 20ನೇ ಶತಮಾನದಲ್ಲಿ ಪರಿಪೂರ್ಣ ಪ್ರದರ್ಶಕ ಕಲೆಯಾಗಿ ರೂಪಗೊಂಡಿತು. ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳ ಆರಾಧಕರಾಗಿದ್ದ ಮೈಸೂರು ಒಡೆಯರು ಭರತನಾಟ್ಯಕ್ಕೆ ರಾಜಾಶ್ರಯ ನೀಡಿದರು. 20ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮೈಸೂರಿನಲ್ಲಿ ವಿಭಿನ್ನ ಶೈಲಿಯ ಗುರುಗಳ ವಿಭಿನ್ನ ಪರಂಪರೆಯ ಭರತನಾಟ್ಯ ಪ್ರಕಾರಗಳು ಬೆಳೆದವು. ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ, ಮುಗೂರು ಅಮೃತಪ್ಪ, ಮೂಗೂರು ಜೇಜಮ್ಮ, ಕೋಲಾರ ಸುಬ್ಬಣ್ಣ, ಯಜಮಾನ ಕಿಟ್ಟಣ್ಣ ಮತ್ತು ಪುಟ್ಟಪ್ಪ, ನಂಜನಗೂಡು ದಾಸಪ್ಪ  ಮತ್ತು ರಾಜಮ್ಮ ಮತ್ತಿತರ ನೃತ್ಯ ದಿಗ್ಗಜರು ತಮ್ಮದೇ ಪರಂಪರೆಯ ಶಿಷ್ಯರನ್ನು ಸೃಷ್ಟಿಸಿದ್ದರು.

ಭಾರತ ದೇಶದಲ್ಲಿ ಜನರ ಮನ್ನಣೆ ಗಳಿಸಿದ ಪ್ರಮುಖ ಕಲೆಯಾಗಿ ಭರತನಾಟ್ಯ ಕಲೆ ಬೆಳೆದು ದೇಶದ ಸಾಂಸ್ಕೃತಿಕ ಕಲೆಯಲ್ಲಿ ಈ ನಾಟ್ಯ ಒಂದಾಗಿ ಬೆಳೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಮಾಡುವ ಭರತನಾಟ್ಯವನ್ನು “ಭರತ ಡಿಸ್ಕೋ ನೃತ್ಯ” ವೆಂದೋ, ಮತ್ತೇನೋ ಕರೆಯದಂತೆ ಕಾಳಜಿ ವಹಿಸಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top