ಹೊಸದಿಲ್ಲಿ: ಕಪ್ಪುಹಣ, ಭ್ರಷ್ಟಾಚಾರ ಮತ್ತು ಉಗ್ರರ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಸದುದ್ದೇಶದಿಂದ ದಿಢೀರ್ 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ನಿರ್ಧಾರದಿಂದ ದೇಶದ ವಿವಿಧೆಡೆ ಬ್ಯಾಂಕ್‌ಗಳಲ್ಲಿ ಜನರು ತೀವ್ರ ಪರದಾಟ ಪಡುತ್ತಿರುವ ಬಗ್ಗೆ ವರದಿಯಾದ ಬಳಿಕ ಕೇಂದ್ರ ಸರಕಾರ ನೋಟು ನಿಷೇಧ ಕ್ರಮದಡಿ ತಮ್ಮ ಬ್ಯಾಂಕ್ ಖಾತೆಗೆ ಕಪ್ಪು ಹಣವನ್ನು ಜಮೆ ಮಾಡುವವರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.
ನೋಟು ನಿಷೇಧ ಕ್ರಮದಡಿ ಬರುವ ಯೋಜನೆಗಳ ಅಂಶ ಇಲ್ಲಿದೆ ಓದಿ….
- ಕಪ್ಪು ಹಣವನ್ನು ತಮ್ಮ ಖಾತೆಗೆ ಜಮೆ ಮಾಡುವವರಿಗೆ ಶೇ.50 ತೆರಿಗೆ ವಿಧಿಸಲಾಗುವುದು.
- ಅವರು ಜಮೆ ಮಾಡಿರುವ ಕಪ್ಪು ಹಣವನ್ನು ನಾಲ್ಕು ವರ್ಷಗಳ ಮಟ್ಟಿಗೆ ಉಪಯೋಗಿಸುವಂತಿಲ್ಲ .
- ಈ ಯೋಜನೆಯನ್ನು ಬಳಸಿಕೊಳ್ಳದವರು ನಂತರದ ದಿನಗಳಲ್ಲಿ ತೆರಿಗೆ ವಂಚಕರು ಸಿಕ್ಕಿಬಿದ್ದಲ್ಲಿ ಅವರಿಗೆ ಶೇ 90 ಮೀರಿದ ದಂಡವನ್ನು ಹೇರಲಾಗುವುದು.
ನವೆಂಬರ್ 8ರ ಬಳಿಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾದ 500 ರೂ. ಮತ್ತು 1,000 ರೂ. ನೋಟುಗಳ ಮೊತ್ತದ ಮೇಲಿನ ತೆರಿಗೆ ಹೊರೆಯ ಬಗ್ಗೆ ಸ್ಪಷ್ಟೀಕರಣ ನೀಡಲಾದ 1 ದಿನದ ನಂತರ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯ ಬಗ್ಗೆ ಸರಕಾರವು ಮುಂದಿನ ವಾರ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿಯನ್ನು ತರಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
