Achivers

OBC ಹಾಸ್ಟೆಲ್ ನಲ್ಲಿ ಕನ್ನಡದ ಖಡಕ್ ಅಧಿಕಾರಿ ಮಣಿವಣ್ಣನ್. (IAS) ವಾಸ್ತವ್ಯ

ಬೆಳಗಾವಿ: ಗುರುವಾರ ಬೆಳಗ್ಗೆ 4.30ಕ್ಕೆ ಎದ್ದು ವಿದ್ಯಾರ್ಥಿಗಳೊಂದಿಗೆ ವ್ಯಾಯಾಮ ಮಾಡಿ, ಧ್ಯಾನ ಮತ್ತು ನೈತಿಕ ಪಾಠ ಮಾಡಿದ ಮಣಿವಣ್ಣನ್, 6 ಗಂಟೆಗೆ ತಮ್ಮ ವಾಹನವನ್ನು ಮರಳಿ ಕಳುಹಿಸಿದ್ದಾರೆ. ಕಾಲ್ನಡಿಗೆಯಲ್ಲೇ 15 ಕಿ.ಮೀ ಖಾನಾಪುರದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿ, ತಮ್ಮ ಮೊಬೈಲ್ ನಿಂದಲೇ ಪೋಷಕರಿಗೂ ಕರೆ ಮಾಡಿ ಹಾಸ್ಟೆಲ್ ವ್ಯವಸ್ಥೆ ಕುರಿತು ವಿಚಾರಿಸಿದ್ದಾರೆ.

capture

ನನಗೆ ಮಕ್ಕಳಿಗೆ ಕೊಡುವ ಊಟವನ್ನೇ ಕೊಡಬೇಕು. ಅವರು ಮಲಗುವ ಜಾಗದಲ್ಲೇ ನಾನು ಮಲಗಬೇಕು. ಮಕ್ಕಳು ಸ್ನಾನ ಮಾಡುವ ಸ್ಥಲದಲ್ಲೇ ಸ್ನಾನ ಮಾಡಬೇಕು. ಪ್ರತ್ಯೇಕ ವ್ಯವಸ್ಥೆ ಬೇಕಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ಬಳಿಕ ಮಣಿವಣ್ಣನ್ ಅವರು ಜಿಲ್ಲೆಯ ವಿದ್ಯಾರ್ಥಿಗಳ ವಸತಿ ನಿಲಯ ಯೋಜನೆಗಳ ಪ್ರಗತಿ ಪರಿಶೀಲನೆನಡೆಸಿ ಗಮನ ಸೆಳೆದಿದ್ದಾರೆ.

ಬುಧವಾರ ರಾತ್ರಿ ಯಾರಿಗೂ ಮುನ್ಸೂಚನೆ ನೀಡದೆ ಮಣಿವಣ್ಣನ್ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಗೆ ಭೇಟಿ ನೀಡಿದ್ದಾರೆ. ನೇರವಾಗಿ ವಿದ್ಯಾರ್ಥಿಗಳ ಜತೆ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಚಾಪೆ ಮೇಲೇ ಕುಳಿತು, ಅವರ ಪುಸ್ತಕ ಹಿಡಿದು ಪಾಠ ಆರಂಭಿಸಿದ್ದಾರೆ.

bb2af8f6-b11d-4292-9121-2faee0f3c426

ಮಣಿವಣ್ಣನ್ ಸಲುಗೆ ಕಂಡು ಹಿರಿಯ ಅಧಿಕಾರಿ ಎಂಬ ಅಂಜಿಕೆ ಬಿಟ್ಟು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸಿದ ಮಣಿವಣ್ಣನ್, ವೈಯಕ್ತಿಕ ಸಮಸ್ಯೆಗಳ ಕುರಿತೂ ಮಾತನಾಡಿ, ಅವರಲ್ಲಿ ಪ್ರೋತ್ಸಾಹ ತುಂಬಿದ್ದಾರೆ. ಅವರೊಟ್ಟಿಗೆ ಕುಳಿತು ಊಟ ಮಾಡಿ, ವಿದ್ಯಾರ್ಥಿಗಳ ಕೊಠಡಿಯಲ್ಲೇ ಮಲಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ಸಂಚಲನ ಮೂಡಿಸಿದ್ದಾರೆ. ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಣಿವಣ್ಣನ್, ಮತ್ತಷ್ಟು ಸೌಲಭ್ಯ ನೀಡಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top