fbpx
Awareness

ಭಾರತವಾಗುವುದೇ ಮಧುಮೇಹಿಗಳ ರಾಜಧಾನಿ!!

ಪ್ರತಿವರ್ಷ ನವಂಬರ್ 14 ವಿಶ್ವಮಧುಮೇಹ ದಿನವನ್ನಾಗಿ ಆಚರಿಸುತ್ತಾರೆ, ವಿಶ್ವ ಆರೋಗ್ಯ ಸಂಸ್ಥೆಯ ಇತ್ತಿಚಿನ ವರದಿಗಳ ಪ್ರಕಾರ ಮುಂಬರುವ ವರ್ಷಗಳಲ್ಲಿ ಭಾರತ ಮಧುಮೇಹಿಗಳ ರಾಜಧಾನಿಯಾಗಲಿದೆ.

ಪ್ರಪಂಚದಲ್ಲಿರುವ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಶೇಕಡ 40 ರಷ್ಟು ಭಾರತದಲ್ಲೇ ಇದ್ದಾರೆ. ಏರಡು ದಶಕಗಳ ಹಿಂದೆ ನಲವತ್ತು ವಯಸ್ಸಾದವರಲ್ಲಿ ಈ ಖಾಯಿಲೆ ಹೆಚ್ಚಾಗಿ ಕಂಡುಬರುತ್ತಿತ್ತು, ಆದರೆ ಇತ್ತೀಚಿನ ಜೀವನ ಶ್ಯೆಲಿ, ಆಹಾರ ಕ್ರಮ ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದಾಗಿ ಹದಿಹರೆಯದವರಲ್ಲೂ ಈ ಖಾಯಿಲೆಗೆ ತುತ್ತಾಗುತ್ತಿರುವುದು ಅತಂಕಕಾರಿ ವಿಷಯ.

ಮಧುಮೇಹ ಗುಣಪಡಿಸಲಾಗದ ಒಂದು ರೋಗ, ಅದರೆ ಮುಂಚಿತವಾಗಿ ರೋಗ ಇರುವುದು ಗೊತ್ತಾದರೆ ಇದನ್ನು ಹತೋಟಿಯಲ್ಲಿಡಲು ಸಾಧ್ಯ, ನಿರ್ಲಕ್ಷ್ಯ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ, ಹತೋಟಿಯಲ್ಲಿಟ್ಟುಕೊಂಡು ಪುರ್ಣಾಯುಷ್ಯ ಕಳೆದವರು ಬಹಳ ಮಂದಿ ಇದ್ದಾರೆ, ನಮ್ಮ ದೇಹದ ಮೇದೋಜಿರಕ ಗ್ರಂಥಿಯಲ್ಲಿರುವ ಲ್ಯಾಂಗರ್ ಹಾನ್ಸ ಕಣಗಳು ಇನ್ಸುಲಿನ್ ಎಂಬ ಹಾರ್ಮೊನನ್ನು ಉತ್ಪತ್ತಿ ಮಾಡುತ್ತದೆ, ಈ ಗ್ರಂಥಿಗಳು ನಮ್ಮ ದೇಹಕ್ಕೆ ಅಗತ್ಯವಾದಷ್ಟು ಇನ್ಸುಲಿನ್ ಉತ್ಪಾದಿಸದೆ ಇದ್ದಾಗ ನಮ್ಮದೇಹದಲ್ಲಿ ಉತ್ಪತ್ತಿಯಾದ ಗ್ಲೂಕೋಸ್ ದೇಹದ ಜೀವಕೋಶಗಳಿಗೆ ಗ್ಲುಕೋಸ್ ಸರಬರಾಜು ಅಗುವುದ್ದಿಲ್ಲಾ, ಹೀಗಾದಾಗ ರಕ್ತದಲ್ಲಿಸಕ್ಕರೆಯ ಅಂಶ ಹೆಚ್ಚಾಗುತ್ತಾ ಹೊಗುತ್ತದೆ, ಹಾಗು ಹೆಚ್ಚಾದ ಸಕ್ಕರೆಯ ಅಂಶ ಮೂತ್ರದಲ್ಲಿ ವಿಸರ್ಜನೆಯಾಗಲು ಪ್ರಾರಂಭಿಸುತ್ತದೆ, ಇದನ್ನು “ಹ್ಯೆಪರ್ ಗ್ಲ್ಯೆಸೀಮೀಯಾ” ಎನ್ನುತ್ತಾರೆ, ಇದು ಅತಿಯಾದರೆ ಕಣ್ಣು ಮೂತ್ರಕೋಶ, ನರಮಂಡಲ, ಹೃದಯ ರಕ್ತನಾಳಗಳಿಗೆ ಪೆಟ್ಟು ಬಿಳುವುದು ಗ್ಯಾರಂಟಿ.

ಭಾರತದಲ್ಲಿ ಸೂಮಾರು 6.5 ಕೋಟಿಯಷ್ಟು ಮಧುಮೇಹಿಗಳಿದ್ದು 2030 ರಹೊತ್ತಿಗೆ ಇದು 10 ಕೋಟಿ ತಲುಪುವ ಸಾಧ್ಯತೆ ಇದೆ. ಚೀನಾದಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಧುಮೇಹಿಗಳಿದ್ದರೆ, ನಂತರದ ಸ್ಥಾನ ಭಾರತಕ್ಕೆ, ಇಷ್ಟೊಂದು ಅಧಿಕ ಮಟ್ಟದಲ್ಲಿ ಈ ರೋಗಕ್ಕೆ ತುತ್ತಾಗಲು ಕಾರಣವೇನೆಂದು ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಮೊದಲನೆಯದು ಬದಲಾದ ಜೀವನ ಶ್ಯೆಲಿ, ಹೌದು ಈಗ ನಾವು ಅನುಸರಿಸುತ್ತಿರುವ ಆಹಾರ ಪದ್ದತಿ, ದೇಹಕ್ಕೆ ಬೇಕಾಗಿರುವವುದಕ್ಕಿಂತಲೂ ಹೆಚ್ಚಾಗೆ ಸೇವಿಸುತ್ತಿರುವ ಸಂಸ್ಕರಿಸಿದ ಹೆಚ್ಚಾದ ಕ್ಯಾಲೋರಿಯುಕ್ತ ಆಹಾರ ಸೇವನೆ, ಹೆಚ್ಚಾಗೇ ಕುಳಿತು ಕೆಲಸ ಮಾಡುವ ಅಭ್ಯಾಸ, ಕಡಿಮೆಯಾಗಿರುವ ಶಾರೀರಿಕ ಚಟುವಟಿಕೆ, ಹದಿಹರೆಯದವರಲ್ಲೆ ಹೆಚ್ಚಾಗುತ್ತಿರುವ ಬೊಜ್ಜು, ಒಂದು ಕಾರಣವಾದರೆ ಏರಡನೆಯದಾಗಿ ಅನುವಂಶಿಕವಾಗಿ ಹೆಚ್ಚಾದ ಬೊಜ್ಜು ಹಾಗು ಮನುಷ್ಯರ ವಂಶವಾಹಿಗಳಲ್ಲಿ ಅಗುತ್ತಿರುವ ಬದಲಾವಣೆ, ಹೌದು ಒಂದು ಅಧ್ಯಯನಗಳ ಪ್ರಕಾರ ಕಳೆದ ದಶಕಗಳಲ್ಲಿ ಏಷ್ಯಾ ಖಂಡದಲ್ಲೆ ಅತಿಹೆಚ್ಚು ವಂಶವಾಹಿನಿಗಳಲ್ಲಿ ಮಾರ್ಪಾಡಾಗುತ್ತಿದೆ.

ಮಧುಮೇಹ ಬರದಂತೆ ತಡೆಯುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಮಧುಮೇಹ ಬರದಂತೆ ತೆಗೆದುಕೊಳ್ಳಬೇಕಾದ ಕ್ರಮವೆಂದರೆ ಆರೋಗ್ಯಯುತ ಜೀವನ ಶ್ಯೆಲಿಯನ್ನು ಅನುಸರಿಸುವುದು,, ಹೌದು ಜಂಕ್ ಫುಡ್ ಅಹಾರವನ್ನು ಕಡಿಮೆಮಾಡುವುದು, ಅತಿ ಕ್ಯಾಲೋರಿಯುಕ್ತ ಆಹಾರಸೇವನೆಯನ್ನು ಕಡಿಮೆಮಾಡುವುದು, ಬೊಜ್ಜು ಬರದಂತೆ ಪ್ರತಿನಿತ್ಯ ಸುಮಾರು 45 ನಿಮಿಷಗಳ ಕಾಲವಾದರೂ ವ್ಯಾಯಮ ಮಾಡಬೇಕು,ಪುರುಷರ ಸೊಂಟದ ಸುತ್ತಳತೆ 90 ಸೆಂ.ಮಿ ಹಾಗು ಮಹಿಳೆಯರಲ್ಲಿ 80 ಸೆಂ.ಮಿ ಗಿಂತ ಅಧಿಕವಾಗದಂತೆ ಲಘುವ್ಯಾಯಮದ ಅಗತ್ಯವಿದೆ, ವಾಕಿಂಗ್, ಈಜುವುದು, ಸ್ಯೆಕಲ್ ತುಳಿಯುವುದು ಮುಂತಾದಂತಹ ಕೊಬ್ಬನ್ನು ಕರಗಿಸುವಂತಹ ಏರೊಬಿಕ್ಸ ವ್ಯಾಯಮಗಳನ್ನು ಮಾಡಬೇಕು, ಇದರಿಂದ ಕ್ಯೆಕಾಲು, ದೇಹದ ಸ್ನಾಯುಗಳಿಗೆ ಚೇತನಗೊಳ್ಳುತ್ತದೆ.

ಈ ಖಾಯಿಲೆ ಒಮ್ಮೆ ಬಂದರೆ ಜೀವನ ಪರ್ಯಂತ ಇರುವುದರಿಂದ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳುವುದೇ ಉತ್ತಮ, ಇದನ್ನು ಸಂಪೂರ್ಣ ಗುಣಪಡಿಸಲಗದ್ದಿದ್ದರೂ ಇದನ್ನು ವ್ಯೆದ್ಯರ ಸಲಹೆಗಳನ್ನು ಚಾಚುತಪ್ಪದೆ ಪಾಲಿಸುವುದರಿಂದ ಈ ಖಾಯಿಲೆಯನ್ನು ಹದ್ದು ಬಸ್ತಿನಲ್ಲಿಡಬಹುದು, ಮಧುಮೇಹ ಇದ್ದವರು ಧೂಮಪಾನ ಮಧ್ಯಪಾನ ಮಾಡದಿರುವುದೇ ಉತ್ತಮ, ಖಾಯಿಲೆ ಇದೆಯೆಂದು ಗೊತ್ತಾದ ಮೇಲೆ ಗಾಬರಿ ಪಡದೆ ಈ ಖಾಯಿಲೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಜೀವನ ಸಾಗಿಸಬಹುದು.ಗ್ಲೂಕೋಸ್ ಅಧಿಕ ಇರುವ ಅನ್ನ, ಇಡ್ಲಿ, ದೋಸೆ ಹಾಗು ಕೊಬ್ಬಿನಂಶ ಅಧಿಕ ಇರುವ ಆಹರವನ್ನು ವರ್ಜಿಸುವುದೇ ಓಳಿತು,ಅಹಾರ ಕ್ರಮದಲ್ಲಿ ಹೆಚ್ಚಾಗಿ ಹಸಿರು ತರಕಾರಿಗಳು, ನಾರಿನಂಶ ಇರುವ ತರಕಾರಿಗಳನ್ನು ತಿನ್ನಬೇಕು,ನಾವು ಸೇವಿಸುವ ಆಹಾರದಲ್ಲಿ ಶೇಕಡಾ 60 ರಷ್ಟು ಕಾರ್ಬೋಹ್ಯೆಡ್ರೆಟ್‍ಗಳು, 10 ರಿಂದ 15% ಪ್ರೊಟಿನ್ 20-25% ಕೊಬ್ಬಿನಂಶ ಹಾಗೂ ನಾರಿನಂಶ ಇರುವ ಅಹಾರ ಸೇವನೆ ಅತ್ಯಗತ್ಯ. ಹೆಚ್ಚಾಗಿ PU ಈ ಅಂಶ ಇರುವ ಹಾಗೂ ಕೊಲೆಸ್ಟಾರಾಲ್ ಕಡಿಮೆ ಇರುವ ಖಾದ್ಯತ್ಯೆಲಗಳ ಬಳಕೆ ಆಹಾರದಲ್ಲಿರಲಿ.

ಆರೋಗ್ಯವಂತ ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ಅತಿಯಾದ ಹಸಿವಾಗುವುದು, ಅತಿಯಾದ ಬಾಯಾರಿಕೆ, ಪದೆ ಪದೆ ಮೂತ್ರವಿಸರ್ಜನೆ, ಇದ್ದಕ್ಕಿದ್ದಂತೆ ಸುಸ್ತಾಗುವುದು, ಬಾಯಿ ಒಣಗುವುದು, ಗಾಯ ಬೇಗ ಗುಣವಾಗದೇ ಇರುವುದು, ಜನನೇಂದ್ರಿಯಗಳಲ್ಲಿ ಕೆಲವೊಮ್ಮೆ ಶೀಲೀಂದ್ರಗಳ ಸೋಂಕು ಇದ್ದರೆ ವ್ಯೆದ್ಯರನ್ನು ಭೇಟಿಮಾಡುವುದು ಹಾಗು ರಕ್ತ ಮೂತ್ರ ಪರೀಕ್ಷೇ ಮಾಡಿಕೊಳ್ಳುವುದು ಒಳ್ಳೆಯದು,ನಲವತ್ತು ವರ್ಷ ದಾಟಿದವರು ಮೂರುತಿಂಗಳಿಗೊಮ್ಮೆ ವ್ಯೆದ್ಯರನ್ನು ಭೇಟಿಮಾಡಿ ಮಧುಮೇಹ ಇರುವಿಕೆಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ತಿಂಡಿತಿಂದಾದ ನಂತರದ ರಕ್ತಹಾಗೂ ಮೂತ್ರ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಸೂಕ್ತ. ಮಧುಮೇಹ ಇದೆ ಏಂದಾಕ್ಷಣ ಭಯ ಬೇಡ, ವ್ಯೆದ್ಯರ ಸಲಹೆ ಹಾಗೂ ಅಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಮಧುಮೇಹವಿದ್ದು ಪೂರ್ಣಾಯುಷ್ಯವನ್ನು ಕಳೆಯಬಹುದು ನೆಮ್ಮದಿಯ ಜೀವನ ನೆಡೆಸಬಹುದಾಗಿದೆ.

ಪ್ರಕಾಶ್ ಕೆ.ನಾಡಿಗ್, ಶಿವಮೊಗ್ಗ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top