fbpx
Karnataka

2017 ಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ಸಾರ್ವತ್ರಿಕ ರಜೆ ಪಟ್ಟಿ ವಿವರ

 

ಬೆಂಗಳೂರು: 2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಮುಂದಿನ ವರ್ಷಕ್ಕೆ ರಾಜ್ಯ ಸರಕಾರ 22 ಸಾರ್ವತ್ರಿಕ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಎಲ್ಲಾ ಸರಕಾರಿ ಕಛೇರಿ, ಶಾಲಾ-ಕಾಲೇಜುಗಳಿಗೆ ಈ ದಿನಗಳಂದು ರಜೆ ಇರಲಿದೆ. ಕಳೆದ ವರ್ಷ ರಜೆ ಘೋಷಿಸಲಾಗಿದ್ದ ಮಹಾವೀರ್ ಜಯಂತಿ ಮತ್ತು ಮೊಹರ್ರಂ ಕೊನೆಯ ದಿನದ ಹಬ್ಬಗಳು ಈ ಬಾರಿ ಭಾನುವಾರ ಇರುವುದರಿಂದ ಅವುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿಪಡಿಸಿದ ದಿನಾಂಕದಂದು ಆಚರಣೆಯಾಗದಿದ್ದರೆ ಬದಲಿ ಹಬ್ಬದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 4 ರಂದು ಜರುಗುವ ಹುತ್ತರಿಹಬ್ಬ ಆಚರಣೆಯ ರಜೆಯನ್ನು ಕೊಡಗು ಜಿಲ್ಲೆಗೆ ಸೀಮಿತವಾಗಿ ಘೋಷಿಸಲಾಗಿದೆ.

ನೂತನ ವರ್ಷಾರಂಭವಾದ ಜನವರಿ 1, ಮಧ್ವನವಮಿಯ ಫೆಬ್ರವರಿ 5, ಹೋಳಿಹಬ್ಬ ಮಾರ್ಚ್ 12, ಏ.30 ಶಂಕರಾಚಾರ್ಯ ಜಯಂತಿ, ಸೆ. 17ರ ವಿಶ್ವಕರ್ಮ ಜಯಂತಿ, ಡಿ.24ರ ಕ್ರಿಸ್‍ಮಸ್ ಈವ್ , ಏಪ್ರಿಲ್ 14ರ ಸೌರಮಾನ ಯುಗಾದಿ, ಮೇ 1 ರಂದು ರಾಮಾನುಜಾಚಾರ್ಯರ ಜಯಂತಿ ರಜೆ ಪಟ್ಟಿಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

2017ರ ಸಾರ್ವತ್ರಿಕ ರಜೆಗಳ ಪಟ್ಟಿ:

1) ಜನವರಿ 14, ಶನಿವಾರ – ಸಂಕ್ರಾಂತಿ

2) ಜನವರಿ 26, ಗುರುವಾರ – ಗಣರಾಜ್ಯೋತ್ಸವ

3) ಫೆಬ್ರುವರಿ 24, ಶುಕ್ರವಾರ – ಮಹಾಶಿವರಾತ್ರಿ

4) ಮಾರ್ಚ್ 29, ಬುಧವಾರ – ಚಾಂದ್ರಮಾನ ಯುಗಾದಿ

5) ಏಪ್ರಿಲ್ 14, ಶುಕ್ರವಾರ – ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ

6) ಏಪ್ರಿಲ್ 29, ಶನಿವಾರ – ಬಸವ ಜಯಂತಿ

7) ಮೇ 1, ಸೋಮವಾರ – ಮೇ ಡೇ(ಕಾರ್ಮಿಕರ ದಿನ)

8) ಜೂನ್ 25, ಸೋಮವಾರ – ರಂಜಾನ್

9) ಆಗಸ್ಟ್ 15, ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ

10) ಆಗಸ್ಟ್ 25, ಶುಕ್ರವಾರ – ಗಣೇಶ ಹಬ್ಬ

11) ಸೆಪ್ಟಂಬರ್ 2, ಶನಿವಾರ – ಬಕ್ರೀದ್

12) ಸೆಪ್ಟಂಬರ್ 19, ಮಂಗಳವಾರ – ಮಹಾಲಯ ಅಮಾವಾಸ್ಯ

13) ಸೆಪ್ಟೆಂಬರ್ 29, ಶುಕ್ರವಾರ – ಮಹಾನವಮಿ, ಆಯುಧಪೂಜೆ

14) ಸೆಪ್ಟಂಬರ್ 30, ಶನಿವಾರ – ವಿಜಯದಶಮಿ

15) ಅಕ್ಟೋಬರ್ 2, ಸೋಮವಾರ – ಗಾಂಧಿ ಜಯಂತಿ

16) ಅಕ್ಟೋಬರ್ 5, ಗುರುವಾರ – ವಾಲ್ಮೀಕಿ ಜಯಂತಿ

17) ಅಕ್ಟೋಬರ್ 18, ಬುಧವಾರ – ನರಕ ಚತುರ್ಥಿ

18) ಅಕ್ಟೋಬರ್ 20, ಶುಕ್ರವಾರ – ಬಲಿಪಾಡ್ಯಮಿ, ದೀಪಾವಳಿ

19) ನವೆಂಬರ್ 1, ಬುಧವಾರ – ಕನ್ನಡ ರಾಜ್ಯೋತ್ಸವ

20) ನವೆಂಬರ್ 6, ಸೋಮವಾರ – ಕನಕದಾಸ ಜಯಂತಿ

21) ಡಿಸೆಂಬರ್ 1, ಶುಕ್ರವಾರ – ಈದ್ ಮಿಲಾದ್

22) ಡಿಸೆಂಬರ್ 25, ಸೋಮವಾರ – ಕ್ರಿಸ್ಮಸ್

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top