fbpx
god

ಕಲಿಯುಗದ ಕಾಮಧೇನು : ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು

ಸತ್ಯ ಹಾಗೂ ಧರ್ಮಗಳ ಪ್ರತಿರೂಪವೆಂದೇ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರು ರಾಘವೇಂದ್ರರಿಗೆ ಮಾತ್ರ. ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಬಿಡುಗಡೆ ಮಾಡಿ ಸುಖಮಯ ಜೀವನವನ್ನು ಸಾಗಿಸಲು ಬೇಕಾಗುವ ಶಕ್ತಿ ಹಾಗೂ ಚೈತನ್ಯಗಳನ್ನು ಅವರು ನಮಗೆ ಪ್ರಸಾದಿಸುತ್ತಾರೆ ಎಂಬ ನಂಬಿಕೆ ನಮ್ಮ ಭಕ್ತ ಜನರಲ್ಲಿ ಅಪಾರವಾಗಿದೆ.

ಶ್ರೀ ಗುರು ರಾಘವೇಂದ್ರರನ್ನು ಪೂಜಿಸಿದವರಿಗೆ ಸಿರಿ-ಸಂಪತ್ತುಕೊರತೆ ಇರದು. ಮಂತ್ರಾಲಯದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರರನ್ನು ಧ್ಯಾನಿಸಿ, ಸ್ಮರಿಸಿ, ಮುಕ್ತಿ ಹೊಂದಬಹುದು. ಭಕ್ತರು 365 ದಿನವೂ ಸ್ವಾಮಿಯ ದರ್ಶನ ಹಾಗೂ ಸೇವೆ ಮಾಡಿ ಪುನೀತರಾಗುತ್ತಿದ್ದಾರೆ. ಶ್ರೀ ಗುರುರಾಯರು ಸಿದ್ಧಿಯನ್ನು ಪಡೆದ ಕ್ಷೇತ್ರವೇ ಮಂತ್ರಾಲಯ. ವಿಷ್ಣುವಿನ ಭಕ್ತ ಪ್ರಹ್ಲಾದನೇ ಶ್ರೀ ರಾಘವೇಂದ್ರರಾಗಿ ಜನಿಸಿದ್ದಾರೆಂದು ಭಕ್ತರಲ್ಲಿ ದೃಢವಾದ ನಂಬಿಕೆಯಿದೆ.

ಕಲಿಯುಗದ ಕಾಮಧೇನು

ರಾಯರನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ದೈವವನ್ನೇ ಆಗಲಿ, ಗುರುವನ್ನೇ ಆಗಲಿ ಮೊದಲು ನಂಬಬೇಕು. ನಂತರ ನಮ್ಮ ಭಕ್ತಿ ಪರಿಶುದ್ಧವಾಗಿರಬೇಕು ಮತ್ತು ಏಕಭಾವದ ನಿಶ್ಚಲತೆ, ದೃಢತೆ ಇರಬೇಕು. ಆಗ ನಮ್ಮ ಸಮಸ್ಯೆಗಳಿಗೆ ಗುರುರಾಯರು ಯಾವುದಾದರೂ ಒಂದು ರೂಪದಲ್ಲಿ ಪರಿಹಾರವನ್ನು ತೋರಿಸುತ್ತಾರೆ. ರಾಯರ ಆರಾಧನೆ ಕಳೆದ ವರ್ಷವೂ ಬಂದಿತ್ತು. ಈ ವರ್ಷವೂ ಬಂದಿದೆ. ಮುಂದಿನ ವರ್ಷವೂ ಬರುತ್ತದೆ. ಎಷ್ಟೇ ಸಂವತ್ಸರ ಕಳೆದರೂ ಭಕ್ತರ ಭಕ್ತಿಯ ತೀವ್ರತೆ, ಸಡಗರ ಮತ್ತು ಶ್ರದ್ಧೆ, ಭಕ್ತಿ ಕಡಿಮೆ ಆಗಿಲ್ಲ ಆಗುವುದೂ ಇಲ್ಲ. ಈ ಪರಮ ಪುಣ್ಯ ಆರಾಧನೆಯ ಶುಭ ದಿನದಲ್ಲಿ ಭಕ್ತಿಯಿಂದ ರಾಯರ ಸ್ಮರಣೆಯನ್ನು ಮಾಡಿ ಧನ್ಯರಾಗೋಣ.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜರಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ||

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top