fbpx
Karnataka

೮೨ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ರಾಯಚೂರು:82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಕನ್ನಡದ ತೇರು ಎಳೆಯಲು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಜ್ಜಾಗಿದ್ದಾರೆ.ಇಂದು ಬೆಳಗ್ಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆರಂಭವಾಗುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಸಮ್ಮೇಳನ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ ಬರಗೂರು ರಾಮಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ತನ್ಬೀರ್ ಸೇಠ್ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತಿ

೮೨ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಜ್ಯೋತಿ ಬೆಳಗಿಸುವ ಮೂಲಕ ಸಿಎಂ ಸಿದ್ದರಾಮಯ್ಯ  ಸಮ್ಮೇಳನ ಉದ್ಘಾಟಿಸಿ ಕನ್ನಡ ನಾಡಿನ ಜನತೆಗೆ ಸಾಹಿತ್ಯ ಸಮ್ಮೇಳನದ ಶುಭಾಶಯಗಳನ್ನು ತಿಳಿಸಿದರು.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ಔಧಾರ್ಯಕ್ಕೆ ಮತ್ತೊಂದು ಹೆಸರು ಕನ್ನಡಿಗರು. ಸಾಹಿತಿ ತಾನು ಮೇಲೆರದೆ ಸಮಾಜವನ್ನು ಮೇಲಕ್ಕೆ ಕೊಂಡೊಯ್ಯಲಾರ.  ರಾಜಕಾರಣಕ್ಕೂ ಸಾಹಿತ್ತಕ್ಕೂ ಅವಿನಾಭಾವ ಸಂಬಂಧವದೆ. ಸಾಹಿತ್ಯಕ್ಕೆ ಬದುಕಿನ ಬದ್ಧತೆ ದೊಡ್ಡದು. ಬದುಕಿನಲ್ಲಿ ಬದಕಿನ ನಿರ್ಣಾಯಕ ಪಾತ್ರ ವಹಿಸುತ್ತೆ. ಬದುಕಿನ ಬದಲಾವಣೆಗೆ ಕ್ರಾಂತಿ ಅನಿವಾರ್ಯ. ಅದರಲ್ಲಿ ಚರಿತ್ರಿಯೇ ಇದೆ. ವಚನ ಕ್ರಾಂತಿ, ಫ್ರಾನ್ಸ್ ಕ್ರಾಂತಿ , ನಡೆದಿದ್ದು ಕೂಡ ಸಾಹಿತ್ಯದ ಮೂಲಕ ಎಂದು ಹೇಳಿದರು.

ಕನ್ನಡ ಭಾಷೆಯ ಬಗ್ಗೆ ಮಾತನಾಡಿದರು, ಭಾಷಾ ಮಾಧ್ಯಮವನ್ನು ಆಯ್ಕೆ ಮಾಡುವುದು ಹೆತ್ತವರ ಆಯ್ಕೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.‌ ಇದು ಪ್ರಾದೇಶಿಕ ಭಾಷೆಗಳ ಅವನತಿಗೆ ಕಾರಣವಾಗುತ್ತೆ.‌ ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಸೂಕ್ತ ಕಾನೂನು ತಿದ್ದುಪಡಿ ತರಬೇಕು.‌ ಇದಕ್ಕಾಗಿ ನಾ ನರೇಂದ್ರ ಮೋದಿ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಎಲ್ಲ ರಾಜ್ಯಗಳ ಸಿಎಂಗಳಿಗೆ ಸಭೆ ನಡೆಸಲು ಪತ್ರ ಬರೆದಿದ್ದೇನೆ. ಎಲ್ಲಾ ರಾಜ್ಯಗಳು ಒಟ್ಟುಗೂಡಿ ಚರ್ಚೆ ನಡೆಸಬೇಕು. ಇಲ್ಲದೆ ಹೋದರೆ ಕನ್ನಡ ಮಾತ್ರವಲ್ಲ ಇತರ ಪ್ರಾದೇಶಿಕ ಭಾಷೆಗಳಿಗೂ ಉಳಿವಿಲ್ಲ ಎಂದು ಕನ್ನಡ ಭಾಷೆಯ ಒಲವನ್ನು ವ್ಯಕ್ತಪಡಿಸಿದರು.

ಇದೇ ವೇಳೇ ಶಿಕ್ಷಣ ಸಚಿವ ತನ್ವಿರ್ ಸೇಠ್ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಮಾತನಾಡಿದರು.  ಯಾವುದೇ ಕನ್ನಡ ಶಾಲೆಯನ್ನು ಮುಚ್ಚಿಸುವುದಿಲ್ಲ. ಅಂತ ಯಾವುದೇ ಪ್ರಯತ್ನ ಮಾಡುವುದಿಲ್ಲ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಸ್ ಡಿ ಎಂ ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಲಾಗುವುದು. ಆ ಮೂಲಕ ಕನ್ನಡ ಶಾಲೆಗಳ ಅಭಿವೃದ್ಧಿ. ಪಡಿಸಲಾಗುವುದು ಎಂದು  ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ  ಶಾಲೆಗಳ ವಿಲೀನ ಕೂಡ ಬೇಡ. ಕನ್ನಡ ಶಾಸ್ತ್ರೀಯ ಸ್ಥಾನ ಮಾನಗಳ ಸಂಶೋಧನ ಕೇಂದ್ರಕ್ಕೆ ಜಾಗ ನೀಡಿ ಕಟ್ಟಡ ಕಟ್ಟಿಕೊಡಬೇಕು. ಪ್ರಾದೇಶಿಕ ಶಿಕ್ಷಣ ಮಾಧ್ಯಮ ಕಡ್ಡಾಯ ಮಾಡಿ, ಅದಕ್ಕೆ ನೆರೆ ರಾಜ್ಯಗಳ ಸಿಎಂಗಳ ಜೊತೆ ನೇತೃತ್ವ ವಹಿಸಿ ಆ ಮೂಲಕ ಹೊಸ ಹೆಜ್ಜೆ ಇಡಿ ಎಂದು ಸಿಎಂಗೆ ಮನವಿ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸಲಹೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top