fbpx
god

ಪ್ರತಿಯೊಬ್ಬ ದೈವ ಭಕ್ತನೂ ಓದಲೇಬೇಕಾದ ಸಂಗತಿ: ಶನಿದೋಷ ನಿವಾರಣೆ ಹೇಗೆ?

ಶನಿ ದೋಷ ಪರಿಹಾರಕ್ಕಾಗಿ ಶಿವ/ ಆಂಜನೇಯ/ ಅಥವಾ ಶನಿ ಪರಮಾತ್ಮನ ದೇವಸ್ಥಾನಗಳು ಸೂಕ್ತ.

ವಿಧಾನಗಳು:

೧) ಕಪ್ಪು ಎಳ್ಳನ್ನು ಒಂದು ಕಪ್ಪು ಬಟ್ಟೆಯಲ್ಲಿ ಕಪ್ಪು ದಾರದ ಮೂಲಕ ಕಟ್ಟಿ ಶನಿವಾರದ ದಿನ ಪೂರ್ತಿ ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು.

೨)ಸಂಜೆ  ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳಿನ ಬಟ್ಟೆಯಲ್ಲಿ  ಎಳ್ಳೆಣ್ಣೆ ಅಥವಾ ತುಪ್ಪದ ಸಹಾಯದಿಂದ ದೀಪ ಬೆಳಗಿಸಬೇಕು.

Image result for shani temple

೩) ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಿ ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿಸಬೇಕು.

೩)ಎಳ್ಳಿನಿಂದ ಮಾಡಿದ ಪ್ರಸಾದವನ್ನು ಇತರರಿಗೂ ಕೊಟ್ಟು ತಾವು ಸೇವಿಸಬೇಕು.

೫)ಶನಿ ಗಾಯತ್ರಿ ಅಥವಾ ಮೂಲ ಮಂತ್ರವನ್ನು ೯/೨೭/೮೧/೧೦೮ ಬಾರಿ ಹೇಳಿಕೊಂಡು ಪ್ರಾರ್ಥಿಸಬೇಕು.

೬) ಸೋಮವಾರ ಶಿವನಿಗೆ ಅಥವಾ ಶನಿವಾರ ಶನಿ ದೇವರಿಗೆ ಅಭಿಷೇಕ ಮಾಡಿಸಬೇಕು.

Image result for shani

೭) ಈ ಸಮಯದಲ್ಲಿ ಮಧ್ಯಪಾನ, ಧೂಮಪಾನ, ಮಾಂಸ ಭಕ್ಷಣೆ, ಲೈಂಗಿಕ ಸಂಪರ್ಕದಿಂದ  ದೂರವಿರಬೇಕು.

೮) ಶನಿವಾರ ಬೆಳಿಗ್ಗೆ ಇಂದ ಭಾನುವಾರ ಬೆಳಗಿನ ಜಾವದ ವರೆಗೂ ಉಪವಾಸವಿರಬೇಕು.

೯) ಸಾಧ್ಯವಾದಷ್ಟು ಶನಿವಾರದ ದಿನ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನೇ ಧರಿಸಬೇಕು.

೧೦) ಮನೆಯಲ್ಲಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ ನೀಲಿ ಪುಷ್ಪಗಳನ್ನು ಅರ್ಪಿಸಿ ಜಪವನ್ನು ಮಾಡಿ ಪ್ರಸಾದವನ್ನು ಹಸುವಿಗೆ ನೀಡಿ ನಂತರ ಸೇವಿಸಬೇಕು.

ಹೀಗೆ ಮಾಡಿದ್ದಲ್ಲಿ ಶನಿದೋಷ ನಿವಾರಣೆಯಾಗಿ ಉತ್ತರೋತ್ತರ ಅಭಿವೃದ್ಧಿಯು ನಿಮ್ಮದಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top