fbpx
Breaking News

ಕಪಟ ನಾಟಕವಾಡುತ್ತಿರುವ ಓಲಾ ಮತ್ತು ಫ್ಲಿಪ್‌ಕಾರ್ಟ್!!!

ಫ್ಲಿಪ್‌ಕಾರ್ಟ್ ಬಂದಾಗಿನಿಂದ ಅದೆಷ್ಟು ಅಂಗಡಿಗಳು ಮುಚ್ಚಿವೆ?? ಓಲಾ ಬಂದಾಗಿನಿಂದ ಅದೆಷ್ಟು ಇನ್ನಿತರ ಟ್ಯಾಕ್ಸೀಗಳು ಮನೆಗೆ ಸೇರಿವೆ?? ಹೊಸ ತಂತ್ರಜ್ಞಾನ ಮತ್ತು ಮಾರುಕಟ್ಟೆಯಲ್ಲಿ ನವ ಆವಿಷ್ಕಾರಗಳು ಬಂದಾಗ ಗ್ರಾಹಕ ಅದರೆಡೆಗೆ ಹೋಗುವುದು ಸಾಮಾನ್ಯ ಎಂದು ಹಲವಾರು ಅರ್ಥ ತಜ್ಞರು ಅಭಿಪ್ರಾಯ ಪಡುತ್ತಾರೆ. ಗ್ರಾಹಕನಿಗೆ ತನಗೆ ಬೇಕಿರುವ ವಸ್ತು ಕಡಿಮೆ ದರದಲ್ಲಿ ತನ್ನ ಮನೆ ಬಾಗಿಲಿಗೇ ಬಂದರೆ ಖಂಡಿತ ಇ-ಕಾಮರ್ಸ್ನೆಡೆಗೆ ಮಾರುಹೋಗುತ್ತಾನೆ. ಅದೇ ರೀತಿ ಕರೆದಲ್ಲಿಗೆ ಏಸೀ ಕಾರಿನಲ್ಲಿ ಕಡಿಮೆ ದರದಲ್ಲಿ ಹೋಗುವ ಅನುಕೂಲವಿದ್ದರೆ ಕರೆದಲ್ಲಿಗೆ ಬಾರದಿರುವ ದುಬಾರಿ ಟ್ಯಾಕ್ಸೀಗಳಿಗೆ ಯಾರು ಹೋಗುತ್ತಾರೆ..

ಹೀಗೆ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ ಸಂಸ್ಥೆಗಳನ್ನು ಓಲಾ ಮತ್ತು ಫ್ಲಿಪ್‌ಕಾರ್ಟ್ ಮಾರುಕಟ್ಟೆಯಿಂದ ಹೊರಹಾಕಿದ್ದು ಹಳೆಮಾತು. ಆದರೆ ಈಗ ಅಮಜ಼ೋನ್ ಮತ್ತು ಉಬೆರ್ ಸಂಸ್ಥೆಗಳು ಈ ಸಂಸ್ಥೆಗಳಿಗೆ ಅತೀವ ಸ್ಪರ್ಧೆಯೊಡ್ಡುತ್ತಿರುವಾಗ ಇವರು ಮಾಡುತ್ತಿರುವ ಮನವಿ ಅಮಜ಼ೋನ್ ಮತ್ತು ಉಬೆರ್ ವಿದೇಶಿ ಕಂಪನಿಗಳು, ಅವು ಭಾರತದ ಕಂಪನಿಗಳಿಗೆ ಸ್ಪರ್ಧೆಯೊಡ್ಡಲು ವಿದೇಶದಿಂದ ಸಾವಿರಾರು ಕೋಟಿ ದುಡ್ಡುತಂದು ನಮ್ಮ “ಭಾರತ”ದ ಕಂಪನಿಗಳಾದ ಓಲಾ ಮತ್ತು ಫ಼್ಲಿಪ್ ಕಾರ್ಟ್ ಸಂಸ್ಥೆಗಳು ಇವರಷ್ಟು ದುಡ್ಡು ಭರಿಸಲು ಸಾಧ್ಯವಿಲ್ಲ, ಅದಕ್ಕಾಗಿ ಈ ವಿದೇಶಿ ಕಂಪನಿಗಳ ವಹಿವಾಟಿಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ..

ಆದರೆ ಇವರ ಮನವಿಯನ್ನು ಕೂಲಂಕುಷವಾಗಿ ಗಮನಿಸಿದರೆ ಇದು ನಗೆಪಾಟಲಿನ ವಿಷಯವೇ ಸರಿ… ಅಸಲಿಗೆ ಫ಼್ಲಿಪ್ಕಾರ್ಟ್ ಸಂಸ್ಥೆಯು ಸಿಂಗಾಪುರದಲಿ ನೋಂದಣಿಯಾಗಿದೆ ಮತ್ತೆ ಓಲಾವಿಗೆ ಸುಮಾರು ೭ ಸಾವಿರ ಕೋಟಿಯಷ್ಟು ಬಂಡವಾಳ ವಿದೇಶಿ ಹೂಡಿಕೆದಾರರಿಗೆ ಸೇರಿದ್ದು, ಸಹಜವಾಗಿ ಭಾರತದ ಗ್ರಾಹಕರ ಹಣವು ವಿದೇಶಿಯರ ಪಾಲಾಗುತ್ತದೆ. ಇವರಿಗೆ ಕಷ್ಟ ಬಂದಾಗ “ನಕಲಿ ದೇಶಪ್ರೇಮ”ದ ಬೂಟಾಟಿಕೆ ಆಡುತ್ತಿದ್ದಾರೆ. ಇವರು ಕೇವಲ ಹಣಕ್ಕಾಗಿ ತಮ್ಮ ಸಂಸ್ಥೆ ನಡೆಸುತ್ತಿರುವವರು, ನಿಜವಾದ ದೇಶಭಕ್ತಿ ಇವರಿಗೆಲ್ಲಿಂದ ಬರಬೇಕು!!! ಈ ಕೆಲ ಪ್ರಶ್ನೆಗಳಿಂದಲೇ ಇವರ “ದೇಶಪ್ರೇಮ” ತಿಳಿಯುತ್ತದೆ…

ಇವರು ತಮ್ಮ ಸೇವೆಗಳನ್ನು ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಕೊಡುತ್ತಾರೆಯೇ??
ಬೆಂಗಳೂರಲ್ಲಿ ಇರುವ ಈ ಎರಡೂ ಕಂಪನಿಗಳು, ಕನ್ನಡಿಗರಿಗೆ ಎಷ್ಟು ಕೆಲಸ ಕೊಟ್ಟಿದ್ದಾರೆ??
ಇವರ ಆಗಮನಿಕೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲದವು, ಅವರಿಗೆ ಎಷ್ಟು ಪರಿಹಾರ ಧನ ನೀಡಿದ್ದಾರೆ??

 ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಫ್ಲಿಪ್ ಕಾರ್ಟ್ ಗೆ ಕನ್ನಡ ಅನುಷ್ಠಾನದ ಬಗ್ಗೆ ಬರೆದ ಪತ್ರ ನೋಡಿ ,

15356015_10154411045793025_1170479207_n

15357072_10154411047593025_350812985_n

ಅದಕ್ಕೆ ಪತಿಯಾಗಿ ಫ್ಲಿಪ್ ಕಾರ್ಟ್ ನಿಂದ ಬೇಜವಾಬ್ದಾರಿ ಉತ್ತರ ನೋಡಿ

15416174_10154411048728025_415590679_n

ಇವರು ಕನ್ನಡ ಗ್ರಾಹಕರಿಗೆ ಕೊಡುವ ಮರ್ಯಾದೆ ನೋಡಿ , ಕನ್ನಡ ಮಾತಾಡಿ ಅಂದರೆ , ಹಿಂದಿ , ಇಂಗ್ಲಿಷ್ ಮಲಯಾಳಂ ನಲ್ಲಿ ಮಾತಾಡುತ್ತೇನೆ ಅಂತಾರೆ . ವಿಡಿಯೋ ನೋಡಿ ನಿಮಗೆ ಗೋತಗುತೆ


ಫ್ಲಿಪ್ ಕಾರ್ಟ್ ಲಕ್ಷಾಂತರ ಮಂದಿಯನ್ನು ನೇಮಿಸಿಕೊಂಡಿರಬಹುದು. ಆದರೆ ಅದರ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಏನೂ ಮಾಡುತ್ತಿಲ್ಲ. ಗ್ರಾಹಕ ಸೇವಾ ವಿಭಾಗಕ್ಕೆ ಕನ್ನಡ ಮಾತನಾಡುವವರು ಕರೆ ಮಾಡಿದರೆ, ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡುವಂತೆ ಸೂಚಿಸುತ್ತಾರೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಸರೋಜಿನಿ ಮಹರ್ಷಿ ವರದಿ ಪ್ರಕಾರ ಉದ್ಯೋಗದಲ್ಲಿ ಕನ್ನಡಿಗರಿಗೆ ಆಧ್ಯತೆ ಕೊಡಬೇಕು

ಮೋದಿರವರು ಮತ್ತು ಕೇಂದ್ರ ಸರ್ಕಾರ ಇವರ ನಾಟಕಕ್ಕೆ ಮರುಳಾಗದೆ ಇದ್ದರೆ ಒಳಿತು….

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top