fbpx
Karnataka

ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದ RBI ಅಧಿಕಾರಿ ಮೈಕಲ್ ಬಂಧನ

ತೊಡಗಿದ್ದ ಆರೋಪದ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಸಹಾಯಕ ಅಧಿಕಾರಿಯನ್ನು ಬಂಧಿಸಲಾಗಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿ

ಸರ್ಕಾರ ಚಲಾವಣೆಗೆ ತಂದಿರುವ ಹೊಸ 2000 ರೂ. ಮುಖಬೆಲೆಯ ನೋಟುಗಳು ಇನ್ನೂ ಸಂಪೂರ್ಣವಾಗಿ ಎಲ್ಲರಿಗೂ ಸಿಕ್ಕಿಲ್ಲವಾದರೂ ಆದಾಯ ತೆರಿಗೆ, ಸಿಬಿಐ ಅಧಿಕಾರಿಗಳು ಆನೇಕ ಉದ್ಯಮಪತಿ, ಅಧಿಕಾರಿಗಳ ಮನೆ, ಕಛೇರಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಹಕರಿಸಿದ ಹಲವು ಬ್ಯಾಂಕ್ ಅಧಿಕಾರಿಗಳ ಬಂಧನವೂ ಆಗಿದೆ.

ಕಪ್ಪುಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಸಹಾಯಕ ಅಧಿಕಾರಿಯನ್ನು ಬಂಧಿಸಲಾಗಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಇದೀಗ ಸಿಬಿಐ ಅಧಿಕಾರಿಗಳು ರಿಸರ್ವ್ ಬ್ಯಾಂಕ್ ನ ವಿಶೇಷ ಅಧಿಕಾರಿ ಮೈಕೆಲ್ ಎಂಬವರನ್ನು ವಶಕ್ಕೆ ಪಡೆದಿದ್ದು, ಈತ ಕೊಳ್ಳೇಗಾಲದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ಸೇರಿದ್ದ ಸುಮಾರು 1.51 ಕೋಟಿ ರೂ. ಗಳನ್ನು ಕಾಳ ಧನಿಕರು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳಲು ನೀಡಿದ್ದನೆಂದು ಹೇಳಲಾಗಿದೆ. ಈತನ ಜೊತೆಗೆ ಮತ್ತಿಬ್ಬರು ಬಂಧನಕ್ಕೊಳಗಾಗಿದ್ದು, ಬಂಧಿತರಿಂದ ಸುಮಾರು 17 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇನ್ನು ಬಂಧಿತರಿಂದ ಜಪ್ತಿ ಮಾಡಿದ ಹಣ ಜನರ ಹಣವೇ ಅಥವಾ ಬ್ಯಾಂಕಿನ ಹಣವೇ ಎಂಬುದರ ಕುರಿತು ಇನ್ನಷ್ಟೇ ತನಿಖೆಯಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top