fbpx
Karnataka

ಅಕ್ರಮ ಸಕ್ರಮ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ಸೂಚಿಸಿದ ನ್ಯಾಯಪೀಠ

ಬೆಂಗಳೂರು:  ‘ಅಕ್ರಮ ಸಕ್ರಮ ಯೋಜನೆ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಮತ್ತು   ಗ್ರಾಮೀಣ ಯೋಜನಾ ಕಾಯ್ದೆಗೆ ತರಲಾಗಿರುವ ತಿದ್ದುಪಡಿ  ಜನರ ಅವಶ್ಯಕತೆಗೆ ಅನುಗುಣವಾಗಿಯೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಕಡೆಗೂ ಕಾಲಾವಕಾಶ ಕೂಡಿ ಬಂದಿದ್ದು, ಯೋಜನೆ ಅನುಷ್ಠಾನಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಅಕ್ರಮ-ಸಕ್ರಮ ಯೋಜನೆ ಜಾರಿ ಸಂಬಂಧ ರಾಜ್ಯ ಸರಕಾರ 2014ರ ಮೇ 28ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ಮಂಗಳೂರು ಅಭಿವೃದ್ಧಿಯ ನಾಗರಿಕ ವೇದಿಕೆ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿತು. ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ಸಕ್ರಮಗೊಳಿಸಲು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರ ಸಂವಿಧಾನಬಾಹಿರವಾದ ಕಾರಣ ಅಕ್ರಮ-ಸಕ್ರಮ ಯೋಜನೆಯ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾ|

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 16.75 ಲಕ್ಷ ನಿವೇಶನ ಹಾಗೂ ಕಟ್ಟಡಗಳಿವೆ. ಆ ಪೈಕಿ 2.93 ಲಕ್ಷ ಅಕ್ರಮ ನಿವೇಶನ/ಕಟ್ಟಡಗಳು ಇದ್ದು, ಅದರಲ್ಲಿ 1.53 ಲಕ್ಷದಷ್ಟು ಅಕ್ರಮ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಅಕ್ರಮ ಕಟ್ಟಡಗಳ ಪ್ರಮಾಣ ಇಷ್ಟು ದೊಡ್ಡದಾಗಿರುವುದರಿಂದ ಜನರ ಜೀವನ ಹಾಗೂ ಜೀವನಾಧಾರಕ್ಕೆ ತೊಂದರೆಯಾಗದಂತೆ ಅಕ್ರಮ ಕಟ್ಟಡಗಳನ್ನು ಸರಿಪಡಿಸುವುದು ಅಸಾಧ್ಯ. ಅದರ ಬದಲು ನಿಗದಿತ ಶುಲ್ಕ ಸಂಗ್ರಹಿಸಿ ಸಕ್ರಮಗೊಳಿಸುವುದು ಸೂಕ್ತ. ಇದರಿಂದ ಸರಕಾರಕ್ಕೆ ಆದಾಯ ಬರುತ್ತದೆ ಎಂದು ಬಿಬಿಎಂಪಿ ಆಯುಕ್ತರು 2014ರ ಎ.19ರಂದು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಸರಕಾರ ತಿಳಿಸಿರುವುದನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖೀಸಿದೆ.

ಯಾವುದು ಸಾಧ್ಯ?

ವಸತಿ ಉದ್ದೇಶದ ನಿವೇಶನ, ಕಟ್ಟಡಗಳಲ್ಲಿ ಶೇ.50ರವರೆಗೆ ನಿಯಮ ಉಲ್ಲಂಘನೆಯಾಗಿದ್ದರೆ ಸಕ್ರಮ ಮಾಡಿಕೊಳ್ಳಬಹುದು. ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲಿ ಶೇ.25ರಷ್ಟು ಉಲ್ಲಂಘನೆಯಾಗಿದ್ದರೆ ದಂಡ ಕಟ್ಟಿ ಸಕ್ರಮ ಮಾಡಿಕೊಳ್ಳಬಹುದು.

ಸಂವಿಧಾನದ ಉಲ್ಲಂಘನೆಯಾಗಿಲ್ಲ

ಕೆರೆ ಅಚ್ಚುಕಟ್ಟು, ರಾಜಕಾಲುವೆ, ಒಳಚರಂಡಿ, ಮಳೆನೀರು ಕಾಲುವೆ, ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನ, ಹೈಟೆನ್ಶನ್ ತಂತಿ ಹಾದು ಹೋಗುವ ಕೆಳಗಿನ ಪ್ರದೇಶ, ಆಟದ ಮೈದಾನ ಮತ್ತು ಉದ್ಯಾನವನ ಪ್ರದೇಶದ ಒತ್ತುವರಿ ಮಾಡಿ ನಿರ್ಮಿಸಿದ ಜಾಗದಲ್ಲಿ (ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ) ಮತ್ತು ನೆಲ ಮಹಡಿಯಲ್ಲಿ ಕಟ್ಟಡ ನಿರ್ಮಾಣವನ್ನು ಸಕ್ರಮ ಮಾಡಲು ಅವಕಾಶವಿಲ್ಲ.

2013ರ ಅ.19ಕ್ಕೆ ಹಿಂದಿನ ಕಟ್ಟಡಗಳು ಮಾತ್ರ ಸಕ್ರಮ ಅಕ್ರಮ-ಸರಕಾರ ಜಾರಿಯಾದರೆ ಬಿಬಿಎಂಪಿ ಸೇರಿದಂತೆ ರಾಜ್ಯದ ಇತರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಅಕ್ರಮ ಬಡಾವಣೆ, ನಿವೇಶನ, ಕಟ್ಟಡಗಳು ಸಕ್ರಮವಾಗುತ್ತವೆ. ವಾಣಿಜ್ಯ ಕಟ್ಟಡಗಳು ಶೇ. 25 ಮತ್ತು ವಸತಿ ಕಟ್ಟಡಗಳು ಶೇ.50ರಷ್ಟು ಉಲ್ಲಂಘನೆಯಾಗಿದ್ದರೆ ಮಾತ್ರ ಸಕ್ರಮಗೊಳಿಸಬಹುದು. ಅದಕ್ಕಿಂತ ಹೆಚ್ಚಿನ ಉಲ್ಲಂಘನೆಯಾಗಿದ್ದಲ್ಲಿ ಆ ಭಾಗವನ್ನು ಕಟ್ಟಡ ಮಾಲೀಕರೇ ತೆರವುಗೊಳಿಸಬೇಕಾಗುತ್ತದೆ. 2013ರ ಅ. 19ಕ್ಕೂ ಮೊದಲು ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಈ ಯೋಜನೆಯಡಿ ಸಕ್ರಮಕ್ಕೆ ಅವಕಾಶವಿದೆ. ನಿಯಮ ಉಲ್ಲಂಘನೆಗಾಗಿ ಕಟ್ಟಡ ಮಾಲಕರು ಸರಕಾರಕ್ಕೆ ದಂಡ ಪಾವತಿಸಬೇಕಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top