fbpx
god

ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮ ದೇವಿ ಸನ್ನಿಧಿ

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಹುಲಿಗಿಯು ಇಲ್ಲಿಯ ಅಧಿದೇವತೆ ಶ್ರೀ ಹುಲಿಗೆಮ್ಮ ದೇವಿಯ ಮಹಿಮೆ ಮತ್ತು ಪವಾಡಗಳಿಂದ ಪ್ರಖ್ಯಾತಿ ಗಳಿಸಿದೆ. ಸಂಸ್ಕೃತ ಸಾಹಿತ್ಯದಲ್ಲಿ ವ್ಯಾಘ್ರಪುರಿ ಎಂದೇ ಗುರಿತಿಸಿಕೊಂಡಿರುವ ಈ  ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಸರಿಸುಮಾರು 800 ವರ್ಷಗಳ ಇತಿಹಾಸವಿದೆ.  ಗ್ರಾಮದ ಪೂರ್ವ ಭಾಗಕ್ಕೆ ತುಂಗಭದ್ರಾ ನದಿಯು ಉತ್ತರ ವಾಹಿನಿಯಾಗಿ ಹರಿಯುತ್ತಿದೆ. ನದಿಯ ತಟದಲ್ಲಿ ಶ್ರೀ ಸೋಮೇಶ್ವರ ಲಿಂಗವು ವಿರಾಜಮಾನವಾಗಿದ್ದು, ಇದು ಸಹ ಸಹಸ್ರಾರು ಶಿವಭಕ್ತರಿಂದ ಪೂಜಿಸಲ್ಪಡುತ್ತಿದೆ.

yallama-devi

ಸ್ಥಳ ಪುರಾಣ

ಭೂಮಿಯಲ್ಲಿ ದಶವತಾರವೆತ್ತಿದ ಶ್ರೀಮನ್ನಾರಾಯಣ ಪರಶುರಾಮಾವತಾರದಲ್ಲಿ ಇಲ್ಲಿ ನೆಲೆಸಿ ತಪವನ್ನಾಚರಿಸಿದರಂತೆ. ಪರಶುರಾಮರ ತಂದೆ ಜಮದಗ್ನಿ ಹಾಗೂ ತಾಯಿ ರೇಣುಕಾದೇವಿ ಇಲ್ಲಿ ಆಶ್ರಮವಾಸಿಗಳಾಗಿದ್ದರು. ಪ್ರತಿನಿತ್ಯ  ಯಜ್ಞಕ್ಕೆ ನೀರು ತರಲು ಹೊಳೆಗೆ ಹೋಗುತ್ತಿದ್ದ ರೇಣುಕಾದೇವಿ, ಮರಳಲ್ಲಿ ಮಡಕೆ ಮಾಡಿ, ಹಾವನ್ನೇ ಸಿಂಬೆಯಾಗಿಟ್ಟುಕೊಂಡು ನೀರು ತರುತ್ತಿದ್ದಳಂತೆ. ಒಂದು ದಿನ ನೀರಿನ ನೆರಳಲ್ಲಿ ಯಕ್ಷರ ಸರಸ ನೋಡಿ ಮೋಹಪರವಶಳಾದ ಕಾರಣ, ಮರಳಿನಲ್ಲಿ ಮಡಕೆ ಮಾಡಲಾಗಲಿಲ್ಲ. ಕುಪಿತನಾದ ಜಮದಗ್ನಿ ಶಾಪಕ್ಕೆ ಗುರಿಯಾಗಿ ತೊನ್ನು, ಕುಷ್ಠರೋಗಿಯಾದಳು. ಆಶ್ರಮದಿಂದ ಹೊರಗಟ್ಟಲ್ಪಟ್ಟಳು. ಹೀಗೆ ಪತಿಯಿಂದ ಪರಿತ್ಯಕ್ತೆಯಾದ ರೇಣುಕಾಮಾತೆ, ಸವದತ್ತಿಯ ಈಗಿನ ಜೋಗುಳ ಬಾವಿಯ ಬಳಿ ಬಂದು, ಎಕ್ಕಯ್ಯ, ಜೋಗಯ್ಯ ಎಂಬ ಸಿದ್ಧರ ದರ್ಶನ ಮಾಡಿ, ಅವರ ಆಣತಿಯಂತೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ಮೈಗೆ ಹರಿಶಿನ ಲೇಪಿಸಿಕೊಂಡಾಗ ರೋಗಮುಕ್ತಳಾಗಿ ಹಿಂದಿನ ರೂಪವೇ ಬರುತ್ತದೆ. ಶಾಪವಿಮೋಚನೆ ಆದ ಬಳಿಕ ಮತ್ತೆ ಆಶ್ರಮಕ್ಕೆ ಹಿಂತಿರುಗಿದ ಪತ್ನಿಯನ್ನು ಕಂಡು ಕೋಪಾಗ್ನಿಯಿಂದ ಕುದಿಯುತ್ತಿದ್ದ ಜಮದಗ್ನಿ ತನ್ನ ಮಗ ಪರಶುರಾಮರಿಗೆ ತಾಯಿಯ ತಲೆ ಕತ್ತರಿಸುವಂತೆ ಆಜ್ಞಾಪಿಸುತ್ತಾರೆ. ಪರಶುರಾಮರು ಪಿತೃವಾಕ್ಯ ಪರಿಪಾಲಿಸಿ ನಂತರ ಮತ್ತೆ ತಂದೆಯನ್ನು ಸಂತೈಸಿ, ಅವರ ತಪೋಬಲದಿಂದಲೇ ತಾಯಿಗೆ ಮರುಜನ್ಮ ದೊರಕಿಸುತ್ತಾರೆ.

yallama temple

ಶಾಪವಿಮೋಚನೆಗೆ ಕಾರಣವಾದ ಬಾವಿ

ಸವದತ್ತಿ ಎಲ್ಲಮ್ಮ ದೇವಾಲಯ -ಹೀಗೆ ಎರಡು ಬಾರಿ ಹುಟ್ಟಿದ ತಾಯಿ ರೇಣುಕಾದೇವಿ, ತನ್ನ ಶಾಪವಿಮೋಚನೆಗೆ ಕಾರಣವಾದ ಬಾವಿಯ ಬಳಿ ಎಲ್ಲಮ್ಮನಾಗಿ ನೆಲೆಸಿ ಭಕ್ತರನ್ನು ಹರಸುತ್ತಿದ್ದಾಳಂತೆ.ಈ ಪವಿತ್ರ ತಾಣದಲ್ಲಿ ಜಮದಗ್ನಿ ಹಾಗೂ ಪರಶುರಾಮರ ದೇವಾಲಯಗಳೂ ಇವೆ.

ಮತ್ತೊಂದು ಕಥೆಯ  ಪ್ರಕಾರ, ಶ್ರೀಮಂತ ವೀರಶೈವ ಕುಟುಂಬದಲ್ಲಿ ಜನಿಸಿದ ಎಲ್ಲಮ್ಮ. ತೊನ್ನು ರೋಗಕ್ಕೆ ತುತ್ತಾಗುತ್ತಾಳೆ. ಯಾರೂ ಆಕೆಯನ್ನು ಮದುವೆಯಾಗುವುದಿಲ್ಲ. ಸವದತ್ತಿಗೆ ಬಂದು ಗುಡ್ಡದಲ್ಲಿ ಎಕ್ಕಯ್ಯ ಜೋಗಯ್ಯರ ಪಾದುಕೆಯ ಮೇಲಿನ ಮಳೆನೀರು ಬಿದ್ದಕ್ಷಣವೇ ತೊನ್ನು ಮಾಯವಾಯಿತು. ಆಗ ಆಕೆ ಸಿದ್ದರ ಧ್ಯಾನದಲ್ಲಿ ಅಲ್ಲೇ ಕುಳಿತಳು. ಕೊನೆಗೆ ಪ್ರತ್ಯಕ್ಷರಾದ ಅವರು ಎಲ್ಲ ರೀತಿಯ ಯಂತ್ರ ಮಂತ್ರ ರಸವಿದ್ಯೆಗಳನ್ನು ಹೇಳಿಕೊಟ್ಟರಂತೆ. ಎಲ್ಲಮ್ಮನಿಗೆ ಪರಮಪವಿತ್ರವಾದ ಶಿವಪಂಚಾಕ್ಷರಿ ಮಂತ್ರವನ್ನೂ  ಉಪದೇಶಿಸಿದರಂತೆ. ಗುರುವಾಜ್ಞೆಯಂತೆ  ಎಲ್ಲಮ್ಮ ಅಲ್ಲಿಯೇ ನೆಲೆಸಿ ತಪವನ್ನಾಚರಿಸಿ, ಭಕ್ತರ ಅಭಿಷ್ಠ ಪೂರೈಸಲು ದೇವತೆಯಾಗಿ ಅಲ್ಲಿಯೇ ಪ್ರತಿಷ್ಠಾಪಿತಳಾದಳಂತೆ.

ಇರುವುದು, ಕೋಮಲ ಬಾಳೆ ದಿಂಡಿನ ಪಾಲಕಿಯಲ್ಲಿ ಪೂಜಾರಿಗಳು ಕುಳಿತರೂ ಬಾಳೆ ದಿಂಡು ಕೊಂಕದಿರುವುದು, ಅಗ್ನಿಕುಂಡದಲ್ಲಿ ಅರ್ಚಕರು ನಿಶ್ಚಿಂತರಾಗಿ ಚಲಿಸುವುದು.. ಇತ್ಯಾದಿ ಪವಾಡಗಳು ನೆರೆದ ಭಕ್ತರನ್ನು ನಿಬ್ಬೆರಗೊಳಿಸುತ್ತದೆ.

ಇನ್ನು ಸರಕಾರಿ ಕಾಗದಪತ್ರಗಳೇ ಹೇಳುವಂತೆ ಒಮ್ಮೆ ಟಿಪ್ಪು ಸುಲ್ತಾನ್‌ ದಂಡಯಾತ್ರೆ ಮಾಡುತ್ತಾ ಹುಲಿಗೆಗೂ ಬಂದು ಯುದ್ದ ಸಾರಿದ್ದು, ಆಗ ಹುಲಿಗೆಮ್ಮಳ ಪರಮ ಭಕ್ತನಾಗಿದ್ದ ಹುಲಿಗೆಯ ಪಾಳೆಗಾರ ದೇವಿ ಸ್ತೋತ್ರ ಮಾಡಿ, ದೇವಿಯಿಂದ ಅಭಯ ಹಸ್ತ ಪಡೆದನು. ನಂತರ ದೇವಿಯು ಪ್ರತ್ಯಕ್ಷಳಾಗಿ ಟಿಪ್ಪುಗೆ “”ನಾನು ಚಾಮುಂಡಿ, ಮೈಸೂರಿನಲ್ಲಿ ನೀನು ಹೇಗೆ ನನ್ನ ಪರಮಭಕ್ತನೋ ಹಾಗೆ ಈ ಊರಲ್ಲಿ ಈ ಪಾಳೇಗಾರನು ನನ್ನ ಪರಮ ಭಕ್ತ. ಹಾಗಾಗಿ ನೀನು ಯುದ್ಧ ಮಾಡದೇ ಹೊರಟು ಹೋಗು ಎಂದು ಅಜಾnಪಿಸಿದಳಂತೆ.  ಇದಾದನಂತರ ಟಿಪ್ಪು ಒಂದು ಬಹು ಅಮೂಲ್ಯವಾದ ಮುತ್ತಿನ ದಂಡೆಯನ್ನು ಶ್ರೀದೇವಿಗೆ ಕಾಣಿಕೆಯಾಗಿ ಕೊಟ್ಟಿರುವ ಬಗ್ಗೆ ದಾಖಲೆಗಳಿವೆ.

ಈಗ ಈ ದೇಗುಲ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಆದಿಶಕ್ತಿಗೆ ದಿನನಿತ್ಯ ಪೂಜೆಗಳು ಸಲ್ಲುತ್ತಿದ್ದು, ಪ್ರತಿ ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ, ಹಬ್ಬ-ಹರಿದಿನಗಳು, ನವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆಗಳು ನೆರವೇರಲಿವೆ.

ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top