fbpx
Achivers

ಕಾಲಿದ್ದವರನ್ನೂ ಕಂಗಾಲಾಗಿಸುವ ಕಾನ್ಯಾ

ಮನದಲ್ಲಿ ಏನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷಿಗಳಿಗೂ ಅರ್ಹತೆಯ ಕೊರತೆ ಕಾಡುತ್ತದೆ.ಯಾವುದೇ ರೀತಿಯಕುಂದು ಕೊರತೆಅಥವಾ ಲೋಪದೋಷಗಳಿದ್ದರೆಸಾಧನೆಯ ಮಾರ್ಗ ಮುಚ್ಚಿದಂತಲ್ಲ.ಅದರಾಚೆಗೂದೃಷ್ಟಿ ಹರಿಸಿ ಎಲ್ಲವನ್ನೂ ಮೆಟ್ಟಿ ನಿಂತು ಬದುಕಿನತ್ತದೃಷ್ಟಿ ಹಾಯಿಸಿದರೆ ಅವಕಾಶಗಳ ಹಾದಿ ತೆರೆದುಕೊಳ್ಳುತ್ತದೆ. ಇದೆಲ್ಲದರ ನಡುವಲ್ಲೂಅದಿಲ್ಲ, ಇದಿಲ್ಲವೆಂದುಕೊರಗುವವರ ಬದುಕು ನಿಂತ ನೀರಾಗುತ್ತದೆ.ಇವೆಲ್ಲವನ್ನೂ ಬದಿಗಿಟ್ಟು, ಸಾಧನಾಪಥದಲ್ಲಿಹೊಸ ಭಾಷ್ಯ ಬರೆದ ರೂಪದರ್ಶಿ ಕಾನ್ಯಾ ಸೆಸರ್! ಈಕೆ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಸುಂದರ ರೂಪದರ್ಶಿ.ಆದರೂ ಉಳಿದವರಿಗಿಂತ ಭಿನ್ನ..! ಕಾಲಿಲ್ಲದಿದ್ದರೂ ಆಕಾಶಕ್ಕೇ ಏಣಿ ಹಾಕುವ ಮನಸ್ಸು, ತಾಕತ್ತುಳ್ಳವಳು. ಈಕೆ ಹುಟ್ಟಿನಿಂದಲೇಅಂಗವಿಕಲೆ.ಸೊಂಟದ ಕೆಳಭಾಗವಿಲ್ಲದೇ ಹುಟ್ಟಿದವಳು.ಆದರೆ ಈ ನ್ಯೂನತೆ ಒಂದಿಷ್ಟೂಅಡ್ಡಿಯಾಗದಿರುವುದೇಈಕೆಯ ಹೆಗ್ಗಳಿಕೆ.ಕಾನ್ಯಾಳ ಯಶೋಗಾಥೆಯೇ ಕುತೂಹಲಕಾರಿ.

ಒಳ ಉಡುಪುಗಳ ರೂಪದರ್ಶಿ ಕಾನ್ಯಾಳ ಇಂದಿನ ಸಾಧನೆಯ ಮೂಲ ಶಿಲ್ಪಿಗಳೇ ಪಾಲಕರು. ತಮ್ಮ ದತ್ತು ಪುತ್ರಿಯ ಅಂಗವೈಕಲ್ಯವನ್ನು ಸರಿಪಡಿಸಲಾಗದಿದ್ದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ತುಂಬಿ ಬೆಳೆಸಿದರು. ಪರಿಣಾಮ ಕೇವಲ 15 ವರ್ಷದವಳಿದ್ದಾಗಲೇ ಕಾನ್ಯಾ ಕ್ರೀಡಾ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಲಾರಂಭಿಸಿದಳು. ಸೌಂದರ್ಯವೆಂದರೇನು? ಹೇಗಿರುತ್ತದೆ ಎಂಬುದನ್ನು ಜನರಿಗೆ ತೋರಿಸುವುದು ನನಗಿಷ್ಟ ಎನ್ನುತ್ತಾಕ್ರಮೇಣಒಳ ಉಡುಪುಗಳ ರೂಪದರ್ಶಿಯಾಗಿ ಹೆಸರುಮಾಡಲಾರಂಭಿಸಿದಳು. 2015ರಲ್ಲಿ ನೈಕ್, ಬಿಲ್ಲಾಬಾಂಗ್‍ನಂಥ ಪ್ರತಿಷ್ಠಿತ ಬ್ರ್ಯಾಂಡ್‍ಗಳ ಒಳ ಉಡುಪುಗಳಿಗೆ ರೂಪದರ್ಶಿಯಾಗಿ ಈಕೆ ನಟಿಸಿದ ಜಾಹೀರಾತುಗಳು ಜಗತ್ತಿನಾದ್ಯಂತ ಮಾಧ್ಯಮಗಳ ಗಮನ ಸೆಳೆದವು.ಅಲ್ಲದೇಕಾಸ್ಮೋಪಾಲಿಟಿನ್, ಪೀಪಲ್ ಮ್ಯಾಗಝೀನ್, ಜಿಯಾಲ್ಯಾಂಡ್ ಹೆರಾಲ್ಡ್, ಪ್ಲೇ ಬಾಯ್, ಡೇಲಿ ಮೇಲ್, ಸ್ಟಾರ್, ಸ್ಟೆರ್ನ್‍ನಂಥ ಪ್ರತಿಷ್ಠಿತ ಮ್ಯಾಗಜೀನ್‍ಗಳಲ್ಲಿ ಪ್ರಕಟಗೊಳ್ಳುವ ಮೂಲಕ ಫ್ಯಾಷನ್ ಮತ್ತು ಜಾಹೀರಾತು ಲೋಕದ ಪರಿಭಾಷೆಯನ್ನೇಬದಲಾಯಿಸಿದವು.`ಲಿಂಗರಿ ಮಾಡೆಲ್’ (ಒಳ ಉಡುಪುಗಳ ರೂಪದರ್ಶಿ) ಎಂದೇ ಪ್ರಖ್ಯಾತಳಾದ ಆಕೆಯಒಂದು ದಿನದ ಆದಾಯವೇ ಒಂದು ಸಾವಿರ ಡಾಲರ್!

ಕಾಲಿಲ್ಲ, ಕೈಯಿಲ್ಲವೆಂದು ಭಿಕ್ಷೆಗೆಕೈಚಾಚುವವರೆಲ್ಲಿ?ಈ ಕೊರತೆಯನ್ನು ಮೀರಿ ನಿಂತು ಯಶಸ್ವಿಯಾದ ಕಾನ್ಯಾಎಲ್ಲಿ? ಕ್ರೀಡಾಸಕ್ತಿತನ್ನ ಅಂಗವೈಕಲ್ಯವನ್ನು ಕೀಳಾಗಿ ಪರಿಗಣಿಸದ ಕಾನ್ಯಾಳಿಗೆ ಬಾಲ್ಯದಿಂದಲೇಕ್ರೀಡೆಗಳ ಮೇಲೆ ಆಸಕ್ತಿ. ಕಾಲಿದ್ದವರನ್ನೂ ಕಂಗಾಲಾಗಿಸುವ ಕಾನ್ಯಾಜಾಹೀರಾತು ಲೋಕದ ನವತಾರೆ ಕಾನ್ಯಾಕಾಲಿಲ್ಲದಿದ್ದರೂ ಆಕಾಶಕ್ಕೆ ಏಣಿ ಹಾಕುವವಳುಸಾಧನೆಗೆಅಡ್ಡಿಯಾಗದ-ಅಂಗವೈಕಲ್ಯರೂಪದರ್ಶಿಯರಿಗೆ ಸವಾಲೊಡ್ಡಿದ ಕಾನ್ಯಾ ತನ್ನದೈಹಿಕ ಸ್ಥಿತಿಗೊಪ್ಪುವಂತಹ ಸ್ಕೇಟ್‍ಬೋರ್ಡಿಂಗ್, ಸರ್ಫಿಂಗ್, ಮೊನೊ ಸ್ಕೈಯಿಂಗ್, ಟೆನಿಸ್, ವ್ಹೀಲ್‍ಚೇರ್‍ರಗ್ಬಿ, ವ್ಹೀಲ್‍ಚೇರ್ ಬಾಸ್ಕೆಟ್‍ಬಾಲ್, ವ್ಹೀಲ್‍ಚೇರ್ ರೇಸಿಂಗ್, ಸ್ವಿಮ್ಮಿಂಗ್, ಬ್ರೇಕ್‍ಡಾನ್ಸಿಂಗ್, ಕ್ವಾಡ್‍ಡ್ರೈವಿಂಗ್‍ನಂಥ ಕ್ರೀಡೆಗಳನ್ನು ಲೀಲಾಜಾಲವಾಗಿ ಆಡುತ್ತಿದ್ದಕಾನ್ಯಾಶಾಲೆಯಲ್ಲಿದ್ದಾಗ100, 200, 400 ಮೀ. ವ್ಹೀಲ್‍ಚೇರ್ ರೇಸಿಂಗ್‍ನಲ್ಲಿ ಭಾಗವಹಿಸಿ ವಿಜೇತಳಾದವಳು.ಪ್ರಸಕ್ತಮೂನ್-ಸ್ಕೀನಲ್ಲಿ ತರಬೇತಿ ಪಡೆಯುತ್ತಿದ್ದು, 2018ರಲ್ಲಿ ದಕ್ಷಿಣಕೊರಿಯಾದಲ್ಲಿ ನಡೆಯಲಿರುವವಿಂಟರ್‍ಪ್ಯಾರಾಲಂಪಿಕ್ಸ್‍ನಲ್ಲಿ ಭಾಗವಹಿಸಲಿದ್ದಾಳೆ.ಎಲ್ಲಕ್ಕಿಂತ ವಿಶೇಷವೆಂದರೆಕಾಲೇ ಇಲ್ಲದ ಈಕೆ ವೀಲ್‍ಚೇರ್‍ಗೆ ಬದಲುವ್ಹೀಲ್ ಸ್ಕೇಟ್‍ಬೋರ್ಡ್ ಅಥವಾ ಕೈಗಳನ್ನೇ ಬಳಸುತ್ತಾಳೆ.ಪ್ರಿಯಕರನ ಬೆಂಬಲನನ್ನೆಲ್ಲ ಸಾಧನೆಗೆಪಾಲಕರು ಬೆಂಬಲ-ಪ್ರೋತ್ಸಾಹ ನೀಡಿದ್ದಾರೆ. ಒತ್ತಾಸೆಯಾಗಿ ನಿಂತುಆತ್ಮವಿಶ್ವಾಸತುಂಬಿರುವುದುನನ್ನ ಪ್ರಿಯಕರ ಬ್ರಿಯಾನ್ ವಾಟರ್ಸ್‍ಎನ್ನುವಕಾನ್ಯಾ, ಆತ ನನ್ನ ಬಹು ದೊಡ್ಡಅಭಿಮಾನಿ ಎಂದು ನಗೆ ಬೀರುತ್ತಾಳೆ.ವಿಷಾದದ ಸಂಗತಿಇಬ್ಬರೂಒಂದು ತಿಂಗಳಷ್ಟೇ ಜೊತೆಗಿದ್ದು, ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಬ್ರಿಯಾನ್ ಈಗಲೂ ಆಕೆಗೆ ಒತ್ತಾಸೆಯಾಗಿ ನಿಂತಿರುವುದರಕುರಿತುಕಾನ್ಯಾಅಭಿಮಾನದ ಮಹಾಪೂರ!

ಜಾಹೀರಾತುಗಳೇ ನನ್ನಶಕ್ತಿನ್ಯೂನತೆಯನ್ನೇ ಸಾಮಥ್ರ್ಯವನ್ನಾಗಿಸಿಕೊಂಡಿರುವ ಕಾನ್ಯಾ ಜಾಹೀರಾತುಗಳೇ ನನ್ನ ಶಕ್ತಿ ಎನ್ನುತ್ತಎಗ್ಗಿಲ್ಲದೇ ಒಳ ಉಡುಪುಗಳನ್ನು ಧರಿಸಿ ಜಾಹೀರಾತುಗಳಿಗೆ ನಾನಾ ಬಗೆಯ ಪೋಸ್ ಕೊಡುತ್ತಾಳೆ. ಓರ್ವ ಮಹಿಳೆ ಅಥವಾ ಅಂಗವಿಕಲೆಯಾಗಿ ಗುರುತಿಸಿ ಕೊಳ್ಳುವುದು ನನಗಿಷ್ಟವಿಲ್ಲ. ನನ್ನನ್ನು ಎಲ್ಲರಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲು ಬಯಸುವುದರಿಂದಲೇ ಒಳ ಉಡುಪುಗಳಿಗೆ ರೂಪದರ್ಶಿ ಯಾಗಿರುವುದು. ತನ್ಮೂಲಕ ಹೆಣ್ಣಿಗೆ ಸೌಂದರ್ಯ ಮತ್ತು ರೂಪವಲ್ಲ ಆತ್ಮವಿಶ್ವಾಸವೇ ಬಹು ದೊಡ್ಡಆಭರಣ ಎಂಬುದನ್ನು ಜಗತ್ತಿಗೆ ತೋರಿಸಬಯಸುತ್ತೇನೆ ಎನ್ನುತ್ತಾಳೆ ಕಾನ್ಯಾ. ಕೊನೆಹನಿದೃಢನಿಶ್ಚಯ ಮತ್ತುಪರಿಶ್ರಮವೊಂದಿದ್ದರೆ ಸೌಂದರ್ಯನಗಣ್ಯ.

ನಿಮ್ಮಲ್ಲಿರುವ ಕುಂದು ಕೊರತೆ ಅಥವಾಅನರ್ಹತೆಗಳು ಕೇವಲ ನಿಮ್ಮ ಮನಸ್ಸಿನಲ್ಲಿರುವ ಭ್ರಮೆಗಳು. ಇವುಗಳ ಮೇಲೆ ಗೆಲುವು ಪಡೆಯಲು ಬಯಸುವಿರಾದರೆ ಮೊದಲು ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಆ ನಂತರ ಜಗತ್ತನ್ನುಗೆಲ್ಲಿಎನ್ನುವುದುಕಾನ್ಯಾಳ ಕಿವಿಮಾತು.ಅಂಗವೈಕಲ್ಯಅಥವಾಇತರೇ ಕಾರಣಗಳಿಂದ ತಮ್ಮಕುರಿತು ಕೀಳರಿಮೆ, ಆತ್ಮಾನುಕಂಪದಿಂದಕುಗ್ಗುತ್ತ, ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಕಾನ್ಯಾಳ ಸಾಧನೆ, ಅತ್ಮವಿಶ್ವಾಸ ಹೊಸದೊಂದುದಾರಿತೋರಬಹುದು. ನ್ಯೂನತೆಯನ್ನೇ ಮುಂದು ಮಾಡಿ ಹೆಚ್ಚಿನ ಅವಕಾಶಗಳಿಗೆ ತಡಕಾಡದೆ, ಅಸಹಾಯಕತೆ-ಅಸಾಮಥ್ರ್ಯ ತೋರುತ್ತ ಜಡವಾಗುತ್ತ ಕುಗ್ಗುವ ಮನಸ್ಸುಗಳಿಗೆ ಕಾನ್ಯಾಳ ಬದುಕು ಸ್ಫೂರ್ತಿಯಾಗಲಿ.

ಮಗುವನ್ನು ತ್ಯಜಿಸಿದ ಪಾಲಕರು

ಹೆತ್ತವರು ಯಾರೆಂದುಯಾರಿಗೂ ಗೊತ್ತಿಲ್ಲ. ಥೈಲ್ಯಾಂಡಿನ ಬುದ್ಧದೇವಾಲಯದ ಮೆಟ್ಟಿಲ ಮೇಲೆ ಅನಾಥವಾಗಿ ಮಲಗಿದ್ದಒಂದು ವಾರದ ಕಾಲುಗಳಿಲ್ಲದ ಮಗುವನ್ನು ಅಲ್ಲಿನಬೌದ್ಧ ಸನ್ಯಾಸಿಗಳು ಒಂದು ವರ್ಷದವರೆಗೆ ಜೋಪಾನ ಮಾಡಿ ನಂತರಅನಾಥಾಲಯಕ್ಕೆ ಕಳುಹಿಸಿದ್ದರು.ಆಕೆ ಐದು ವರ್ಷದವಳಾದಾಗ ಪೋರ್ಟ್‍ಲ್ಯಾಂಡಿನ್‍ಓರೆಗಾನ್‍ನಮಕ್ಕಳಿಲ್ಲದ ದಂಪತಿ ಆಕೆಯನ್ನುದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top