fbpx
Business

Idea ದ ಈ ಹೊಸ ‘ಐಡಿಯಾ 1 ರೂಪಾಯಿಗೆ ಅನ್’ಲಿಮಿಟೆಡ್ 4ಜಿ ಇಂಟರ್’ನೆಟ್

ನವದೆಹಲಿ : ಜಾಗತಿಕ ಮಟ್ಟದಲ್ಲಿ ಟಿಲಿಕಾಮ್ ಕಂಪನಿಗಳ ನಿದ್ದೆಗೆಡಿಸಿದ್ದ ಜಿಯೋ ಆಫರ್ ಗಳ ಅಬ್ಬರ ಮರೆಯಾಗುವ ಮುನ್ನವೇ ಐಡಿಯಾ ಟೆಲಿಕಾಮ್ ಹೊಸ ಐಡಿಯಾ ಒಂದನ್ನು ರೂಪಿಸಿದೆ. ತನ್ನ ಬಳಕೆದಾರರಿಗೆ ಕೇವಲ 1 ರೂಗೆ ಫ್ರೀ 4ಜಿ ಇಂಟರ್ ನೆಟ್ ನೀಡಲು ಮುಂದಾಗಿದೆ ಆದ್ರೆ ಈ ಹೊಸ ಆಫರ್ ಗೆ ಕೆಲವು ನಿಬಂಧನೆಗಳನ್ನು ಹಾಕಿದೆ.

ಐಡಿಯಾದ ಹೊಸ ಆಫರ್

ತನ್ನ ಹೊಸ ಆಫರ್ ಮೂಲಕ ಐಡಿಯಾ ತನ್ನ ಗ್ರಾಹಕರಿಗೆ ಒಂದು ರೂಪಾಯಿಗೆ ಅನ್’ಲಿಮಿಟೆಡ್ 4ಜಿ ಇಂಟರ್’ನೆಟ್ ನೀಡುತಯ್ತಿದೆ. ಸದ್ಯ ಈ ಆಫರ್ ಕೇವಲ ಒಂದು ಗಂಟೆಗೆ ಸೀಮಿತವಾಗಿದೆ. ಈ ಆಫರ್’ನ ಲಾಭ ಹಳೆಯ ಹಾಗೂ ಹೊಸ ಬಳಕೆದಾರರು ಪಡೆಯಬಹುದಾಗಿದೆ. ಈ ಆಫರ್’ನ್ನು ಬಳಸಿಕೊಳ್ಳಲು ಬಳಕೆದಾರರು 411 ನಂಬರ್’ಗೆ ಕರೆ ಮಾಡಬೇಕು. ಬಳಿಕ ಇಲ್ಲಿ ತಿಳಿಸುವ ಸೂಚನೆಗಳನ್ನು ಅನುಸರತಿಸಬೇಕು. ಆದರೆ ಕರೆ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್’ನಲ್ಲಿ 1 ರೂಪಾಯಿಗೂ ಅಧಿಕ ಬ್ಯಾಲೆನ್ಸ್ ಇರಬೇಕು. ಈ ಆಫರ್ ಆ್ಯಕ್ಟಿವೇಟ್ ಆಗುತ್ತಿದ್ದಂತೆಯೇ ನಿಮ್ಮ ಬ್ಯಾಲೆನ್ಸ್’ನಲ್ಲಿ 1 ರೂಪಾಯಿ ಕಡಿತಗೊಳ್ಳುತ್ತದೆ.

ಆದರೆ ಇದು ನೋಡಿದಷ್ಟು ಸರಳವಾದ ಆಫರ್ ಅಲ್ಲ. ಇದನ್ನು ಆ್ಯಕ್ಟಿವೇಟ್ ಮಾಡುವ ಮುನ್ನ ಕಂಪೆನಿಯ ಬಹುದೊಡ್ಡ ಶರತ್ತನ್ನು ಪಾಲಿಸಬೇಕಾಗುತ್ತದೆ. ಈ ಆಫರ್ ಈಗಿರುವ ಐಡಿಯಾ ಬಳಕೆದಾರರಿಗಷ್ಟೇ ಅನ್ವಯಿಸುತ್ತದೆ. ಇದರೊಂದಿಗೆ ಬಳಕೆದಾರರಲ್ಲಿ 4ಜಿ ಮೊಬೈಲ್ ಹಾಗೂ ಐಡಿಯಾದ 4ಜಿ ಸಿಮ್ ಇರುವುದು ಅಗತ್ಯ. ಅಲ್ಲದೆ ಈ ಒಂದು ಗಂಟೆಯ ಅವಕಾಶ ಕೇವಲ ಒಂದು ಬಾರಿಯಷ್ಟೇ ಬಳಸಲು ಸಾಧ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top