fbpx
Achivers

72 ಗಂಟೆಯಲ್ಲಿ 4000 ಇ-ಮೇಲ್‍ ಮೂಲಕ ಕಾಳಧನಿಕರ ಮಾಹಿತಿ

ನವದೆಹಲಿ/ಮುಂಬೈ: ಕಪಪುಹಣ ಹೊಂದಿದ, ತೆರಿಗೆ ವಂಚನೆ ಮಾಡಿದವರ ಮಾಹಿತಿ ನೀಡುವಂತೆ ಕೋರಿ ತೆರಿಗೆ ಇಲಾಖೆ ಪ್ರಕಟಿಸಿದ್ದ ಇ-ಮೇಲ್‍ ವಿಳಾಸಕ್ಕೆ 72 ಗಂಟೆಯಲ್ಲಿ 4000ಕ್ಕೂ ಅಧಿಕ ಸಂದೇಶಗಳು ಬಂದಿವೆ,

ಹಣಕಾಸು ಇಲಾಖೆ ಮಂಗಳವಾರ ಈ ವಿವರ ನೀಡಿದ್ದು, ಕಾಳಧನಿಕರ ಬಗ್ಗೆ ಮಾಹಿತಿ ನೀಡುವಂತೆ ಪ್ರಕಟಿಸಲಾಗಿದ್ದ blackmoneyinfo@incometax.gov.in ವಿಳಾಸಕ್ಕೆ ಮಾಹಿತಿಗಳು ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿವೆ ಎಂದು ತಿಳಿಸಿದೆ.

ಇ-ಮೇಲ್‍ ಸಂದೇಶದ ಜೊತೆಗೆ ಕಪ್ಪುಹಣ ಹೊಂದಿರುವವರ ವಿವರ ಹಾಗೂ ದಾಖಲೆ ಪತ್ರಗಳನ್ನೂ ಒದಗಿಸಲಾಗಿದೆ, ಹಣಕಾಸು ಇಲಾಖೆ ಸಿಬ್ಬಂದಿ ಈ ವಿವರಗಳನ್ನು ಪ್ರತಿನಿತ್ಯ ಪರಿಶೀಲಿಸುತ್ತಿದ್ದು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top