Awareness

ಇನ್ಮುಂದೆ ಆವಲಬೆಟ್ಟದ ಈ ಫೇಮಸ್ ಸ್ಪಾಟ್‍ನಲ್ಲಿ ಸೆಲ್ಫಿ ತೆಗೆಯುವಂತಿಲ್ಲ…

ಚಿಕ್ಕಬಳ್ಳಾಪುರ ಜಿಲ್ಲೆಯ ಆವಲಬೆಟ್ಟದಲ್ಲಿ ಕೊಕ್ಕರೆಯ ಕೊಕ್ಕಿನಂತೆ ಬಾಗಿರೋ ಸೆಲ್ಫಿ ಬಂಡೆ ಎಂದು ಫುಲ್ ಫೇಮಸ್. ಇಲ್ಲಿಗೆ ಬರೋ ಸಾವಿರಾರು ಪ್ರವಾಸಿಗರು ಈ ಬಂಡೆಯ ಅಂಚಿನಲ್ಲಿ ಕುಳಿತು, ನಿಂತು ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದರು.

ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫೋನ್ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ಕಾರಣವೊಡ್ಡಿರುವ ಜಿಲ್ಲಾಡಳಿತ ಸೆಲ್ಫಿಗೆ ಬ್ರೇಕ್ ಹಾಕಿದೆ. ಮುಂಜಾಗ್ರತಾ ಕ್ರಮವಾಗಿ ಸೆಲ್ಫಿ ಬಂಡೆ ಸೇರಿದಂತೆ ಬೆಟ್ಟದ ತುದಿಗಳ ಕಡೆ ಪ್ರವಾಸಿಗರು ಹೋಗದಂತೆ ಕಾವಲುಗಾರರನ್ನ ನೇಮಿಸಿದೆ. ಜೊತೆಗೆ ಇಲಾಖೆ ರಾಜ್ಯದ ಹಲವು ಪ್ರವಾಸಿ ತಾಣಗಳಲ್ಲಿ ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿ ಆಯಾ ಸ್ಥಳಗಳಲ್ಲಿ ಅಕ್ರಮ ಪ್ರವೇಶ ನಿಷೇಧಿಸಿದೆ ಅಂತ ನಾಮಫಲಕಗಳನ್ನ ಹಾಕಿದೆ. ಈ ಫಲಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಇನ್ನೂ ಕೆಲವೆಡೆ ಚಿತ್ರಗಳೇ ಅಪಾಯವನ್ನು ಒತ್ತಿ ಹೇಳುವ ಫಲಕಗಳನ್ನೂ ಕೂಡ ಅಳವಡಿಸಲಾಗಿದೆ.

ಇತ್ತೀಚಿಗೆ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ ಮತ್ತು ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಮಾಹಿತಿ ದೆಹಲಿ ವಿದ್ವಾಂಸರು ಹೊಸ ಅಧ್ಯಯನ ಸಂಶೋಧನೆಗಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡವರು ಭಾರತದಲ್ಲೇ ಹೆಚ್ಚುಎಂದು ವರದಿಯಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top