fbpx
god

ಅಕಸ್ಮಾತ್ ಹಲ್ಲಿ ನಮ್ಮ ಮೇಲೆ ಬಿದ್ದರೆ ಏನು ಅದರ ಅರ್ಥ

ಎಲ್ಲರ ಮನೆಯಲ್ಲೂ ಅನಪೇಕ್ಷಿತ ಅತಿಥಿಯಾಗಿರುವ ಹಲ್ಲಿ ಎಲ್ಲರ ಅವಗಣನೆಗೆ ಗುರಿಯಾಗಿದೆ. ಇದನ್ನು ಮನೆಯಿಂದ ಓಡಿಸಲು ಏನೇನು ತಂತ್ರ ಹೂಡಿದರೂ ಮರುದಿನ ಇನ್ನೊಂದು ಮೂಲೆಯಲ್ಲಿ ಪ್ರತ್ಯಕ್ಷವಾಗಿರುತ್ತದೆ. ಎಲ್ಲರೂ ಇದನ್ನು ದೂರ ಓಡಿಸುವವರೇ ಹೊರತು ಹೊಡೆಯಲು ಹೋಗುವುದಿಲ್ಲ.

ಏಕೆಂದರೆ ಹೊಡೆಯಲು ಹೋದಾಕ್ಷಣ ಹಲ್ಲಿ ತನ್ನ ಬಾಲವನ್ನು ಕಳಚಿಕೊಂಡು ಆ ಬಾಲ ಒದ್ದಾಡುತ್ತಿರುವಂತೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ವಿಲವಿಲ ಒದ್ದಾಡುವ ಈ ಬಾಲವನ್ನು ನೋಡಲು ಅಸಹ್ಯಕರವಾಗಿದ್ದು ಯಾರೂ ಇದನ್ನು ನೋಡಬಯಸದ ಕಾರಣ ಹೊಡೆಯಲು ಹೋಗುವುದಿಲ್ಲ.

ಅಲ್ಲದೇ ಹಲ್ಲಿ ಮೇಲ್ಛಾವಣಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಡುಗೆಯಲ್ಲಿ ಬಿದ್ದರೆ, ಆ ಅಡುಗೆ ವಿಷವಾಗುತ್ತದೆ ಎಂದೂ ಜನರು ನಂಬುತ್ತಾರೆ. ಮುಂಬೈಯ ಭೆಂಡಿ ಬಜಾರ್ ನಲ್ಲಿ ಹಾಲಿನಲ್ಲಿ ಹಲ್ಲಿ ಇದೆ ಎಂದು ಹೇಳಿ ಹಾಲನ್ನು ಚೆಲ್ಲಿದ್ದ ಫಕೀರರು ತೀರಿದ ಬಳಿಕ ಅಲ್ಲಿ ಸಮಾಧಿ ಕಟ್ಟಿ ಈಗ ದರ್ಗಾ ಮಾಡಲಾಗಿದೆ. ಆಗಾಗ ಲೊಚಗುಟ್ಟುವ ಹಲ್ಲಿ ಏನೋ ಹೇಳುತ್ತಿದೆ ಎಂದು ಹೇಳಲಾಗುತ್ತದೆ.

ಹಿಂದೂ ಪುರಾಣಗಳ ಪ್ರಕಾರ ಹಲ್ಲಿ ಮೈಮೇಲೆ ಬೀಳುವುದು ಶಕುನವಾಗಿದ್ದು ಇದರ ವಿವರಗಳನ್ನು ತಿಳಿಸುವ ಶಾಸ್ತ್ರಕ್ಕೆ ಗೌಳಿಶಾಸ್ತ್ರವೆನ್ನುತ್ತಾರೆ.

ಹಿಂದೂ ಪುರಾಣಗಳಲ್ಲಿ :-
ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತಿ ನಿಕೃಷ್ಟವಾಗಿ ಕಂಡುಬಂದ ಜೀವಿಯೆಂದರೆ ಹಲ್ಲಿ. ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾವಿಷ್ಣು ಸಂಹರಿಸಿದ್ದನಂತೆ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗೂ ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ.

ಸೂರ್ಯ ಮತ್ತು ಚಂದ್ರ ಗ್ರಹಣಗಳೆಂದರೆ ರಾಹು ಸೂರ್ಯ ಅಥವಾ ಚಂದ್ರನನ್ನು ನುಂಗುವುದೆಂದೂ ಸೂರ್ಯ ಅಥವಾ ಚಂದ್ರನ ಕೊರಳಿನಿಂದ ಹೊರಬಂದು ಗ್ರಹಣವನ್ನು ಅಂತ್ಯಗೊಳಿಸುವುದೆಂದೂ ಹೇಳಲಾಗಿದೆ. ಹಲ್ಲಿಯ ಬಾಲ ಕಡಿದ ಬಳಿಕ ಜೀವಂತವಾಗಿ ಉಳಿಯುವ ಅದರ ರುಂಡವನ್ನೂ ಕೇತುವಿಗೆ ಹೋಲಿಸಲಾಗಿದೆ.ಎಲ್ಲೆಡೆ ಹಲ್ಲಿಗೆ ತಿರಸ್ಕಾರವಿದ್ದರೂ ದೀಪಾವಳಿಯ ಹೊತ್ತಿನಲ್ಲಿ ಮಾತ್ರ ಎಲ್ಲರೂ ತಮ್ಮ ಮನೆಯ ಗೋಡೆಯಲ್ಲಿ ಕಾಣಿಸಿಕೊಳ್ಳಲಿ ಎಂದೇ ಹಾರೈಸುತ್ತಾರೆ. ಏಕೆಂದರೆ ಹಲ್ಲಿ ಕಂಡರೆ ಮನೆಗೆ ಐಶ್ವರ್ಯ ಮತ್ತು ಸಮೃದ್ಧಿ ಬರುತ್ತದೆ ಎಂದು ಜನರು ನಂಬುತ್ತಾರೆ.

ಹಲ್ಲಿ ದೇಹದ ಯಾವ ಭಾಗದ ಮೇಲೆ ಮೊದಲು ಬಿತ್ತು ಎಂಬ ಅಂಶವನ್ನು ಪರಿಗಣಿಸಿ ಒಳ್ಳೆಯ ಅಥವಾ ಕೆಟ್ಟ ಶಕುನವೆಂದು ಭಾವಿಸಲಾಗುತ್ತದೆ. ಕ್ಷೋಭೆಗೊಳ್ಳುವ ಮನಸ್ಸು, ಕೆಡುವ ಆರೋಗ್ಯ, ಮನೆಯವರಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಅಥವಾ ಸಾವು ಮೊದಲಾದ ಅಪಶಕುನಗಳಿದ್ದರೆ ಐಶ್ವರ್ಯದ ಆಗಮನ, ಉತ್ತಮ ಆರೋಗ್ಯ, ಕಳೆದುಹೋದವರು ಹಿಂದಿರುಗಿ ಬರುವುದು ಮೊದಲಾದ ಶುಭಶಕುನಗಳೂ ಇವೆ.

ಈ ಶಕುನಗಳನ್ನು ಕೊಂಚ ವಿವರವಾಗಿ ನೋಡೋಣ:
*ತಲೆಯ ಮೇಲೆ ನೇರವಾಗಿ ಬಿದ್ದರೆ ಕೆಡುಕು ಸಂಭವಿತುತ್ತದೆ
*ಜಡೆಯಮೇಲೆ ಬಿದ್ದರೆ ಒಳ್ಳೆಯದಾಗುತ್ತದೆ
*ಮುಖದ ಮೇಲೆ ಬಿದ್ದರೆ ಹತ್ತಿರದವರಲ್ಲಿ ಯಾರಿಗಾದರೂ ಪ್ರಾಣಾಪಾಯವಾಗುವ ಸಂಭವವಿದೆ
*ಹುಬ್ಬುಗಳ ಮೇಲೆ ಬಿದ್ದರೆ ಧನಾಗಮನವಾಗುತ್ತದೆ.
*ಗಲ್ಲದ ಮೇಲೆ ಬಿದ್ದರೆ ಹಿಂದಿನ ತಪ್ಪಿಗೆ ಶಿಕ್ಷೆಯಾಗುವ ಸಂಭವವಿದೆ
*ಮೇಲ್ತುಟಿಯ ಮೇಲೆ ಬಿದ್ದರೆ ನಿಮ್ಮ ಐಶ್ವರ್ಯವೆಲ್ಲಾ ಕರಗಿ ಬೀದಿಪಾಲಾಗುವ ಸಂಭವಿಸಲಿದೆ.
*ಕೆಳತುಟಿಯ ಮೇಲೆ ಬಿದ್ದರೆ ನಿಮಗೆ ಭಾರೀ ಐಶ್ವರ್ಯ ದೊರಕಲಿದೆ.
*ಮೂಗಿನ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಕೆಡಲಿದೆ
*ಬಲಗಿವಿಯ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲಿದೆ
*ತೆರೆದ ಬಾಯಿಯಲ್ಲಿ ಬಿದ್ದರೆ ನಿಮಗೇನೋ ಗ್ರಹಚಾರ ಕಾದಿದೆ.
*ಕುತ್ತಿಗೆಯ ಮೇಲೆ ಬಿದ್ದರೆ ನಿಮ್ಮ ವೈರಿಗಳು ತನ್ನಿಂತಾನೇ ನಾಶವಾಗುತ್ತಾರೆ.
*ಎಡಗೈಯ ಮೇಲೆ ಬಿದ್ದರೆ ನಿಮ್ಮ ಲೈಂಗಿಕ ಜೀವನ ಸುಗಮವಾಗುತ್ತದೆ.
*ಬಲಗೈ ಮೇಲೆ ಬಿದ್ದರೆ ನಿಮ್ಮ ಆರೋಗ್ಯ ಬಹಳ ಕೆಡಲಿದೆ.
*ಬಲಮಣಿಕಟ್ಟಿನ ಮೇಲೆ ಬಿದ್ದರೆ ನಿಮಗೆ ಯಾವುದೋ ತೊಂದರೆ ಎದುರಾಗಲಿದೆ.
*ಹೊಕ್ಕುಳ ಮೇಲೆ ಬಿದ್ದರೆ ನಿಮಗೆ ಅಮೂಲ್ಯ ಮಣಿಗಳು ಮತ್ತು ರತ್ನಗಳು ಲಭಿಸಲಿವೆ.
*ತೊಡೆಗಳ ಮೇಲೆ ಬಿದ್ದರೆ ನಿಮ್ಮ ತಂದೆತಾಯಿಯರಿಗೆ ಬೇಸರ, ಅಸಂತೋಷ ಎದುರಾಗಬಹುದು.
*ಮೊಣಕಾಲಿನ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
*ಹಿಮ್ಮಡಿಯ ಗಂಟಿನ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
*ಪ್ರಷ್ಠಗಳ ಮೇಲೆ ಬಿದ್ದರೆ ನಿಮಗೆ ಶುಭವಾಗುವುದು.
*ಪಾದಗಳ ಮೇಲೆ ಬಿದ್ದರೆ ನಿಮಗೆ ಶೀಘ್ರದಲ್ಲಿಯೇ ದೂರಪ್ರಯಾಣದ ಸೌಭಾಗ್ಯವಿದೆ.
*ವೃಷಣಗಳ ಅಥವಾ ಜನನಾಂಗಗಳ ಮೇಲೆ ಬಿದ್ದರೆ ಕಷ್ಟಕರ ಜೀವನ ಮತ್ತು ಬಡತನ ಎದುರಾಗಲಿದೆ

ಮಣ್ಣಿನ ಅಥವಾ ಚಿನ್ನದ ದೀಪ ಅಥವಾ ಎಳ್ಳೆಣ್ಣೆಯನ್ನು ದಾನ ಮಾಡಬೇಕು. ಗೌಳಿ ಶಾಸ್ತ್ರದ ಪ್ರಕಾರ ಹಲ್ಲಿಯನ್ನು ಮುಟ್ಟಿದರೆ ಹಿಂದಿನ ಕೆಡಕು ಮತ್ತು ದೋಷಗಳು ಪರಿಹಾರವಾಗುವುವು. ತಮಿಳುನಾಡಿನ ಕಾಂಚಿಪುರಂನಲ್ಲಿರುವ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಚಿನ್ನದ ಮತ್ತು ಬೆಳ್ಳಿಯ ಹಲ್ಲಿಗಳಿದ್ದು ಇವು ಸೂರ್ಯ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top