fbpx
My Story

ಬರಿ ಬೆಳಗಾವಿ ಮಾತ್ರ ಅಲ್ಲ ಇಡೀ ಮಹಾರಾಷ್ಟ್ರ ನಮ್ದೇ

ಬೆಳಗಾವಿ, ಕಾರವಾರ, ನಿಪ್ಪಾಣೀನೆಲ್ಲ ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಬೇಕು ಅನ್ನುವ ಮಾತು ಮಹಾರಾಷ್ಟ್ರದ ರಾಜಕಾರಣಿಗಳಿಂದ ಆಗಾಗ ಕೇಳಿ ಬರುತ್ತದೆ. ಆದರೆ ಅವರ ಬೇಡಿಕೆಗೆ ಯಾವ ಆಧಾರವೂ ಇಲ್ಲ. ನಿಜವಾಗಲೂ ಅರ್ಧ ಮಹಾರಾಷ್ಟ್ರವನ್ನೇ ಕರ್ನಾಟಕಕ್ಕೆ ಸೇರಿಸುವುದಕ್ಕೆ ಸಾಕಷ್ಟು ಕಾರಣಗಳಿವೆ.

chalukya-map

ಇದು ಕನ್ನಡಿಗರ ಅಜ್ಞಾನವೇ? ಅಸಡ್ಡೆಯೇ? ಅಭಿಮಾನ ಶೂನ್ಯತರಯೇ? ಹೇಳುವುದು ಕಷ್ಟ. ಪ್ರಶ್ನೆ ‘ ಹಿಂದೆ ಕನ್ನಡ ನಾಡು ಎಷ್ಟಿತ್ತು?’ ಉತ್ತರ: ‘ಬೆಳಗಾವಿ ಪಕ್ಷದ ಗೋದಾವರಿಯಿಂದ ಮೈಸೂರು ಪಕ್ಕದ ಕಾವೇರಿಯವರೆಗೆ’ ಶ್ರೀವಿಜಯನ ;ಕವಿರಾಜ ಮಾರ್ಗ’ದ (ಸುಮಾರು ಕ್ರಿ.ಶ.850) ಗೋದಾವರಿ ವಾಸ್ತವವಾಗಿ ಎಲ್ಲಿ ಹರಿಯುತ್ತದೆ ಎಂಬ ಅರಿವು ಬಹಳ ಜನರಿಗಿಲ್ಲ. ಕಾವೇರಿ ಮೈಸೂರು ಸಮೀಪ ಮಾತ್ರವಲ್ಲದೆ ತಮಿಳುನಾಡು ಧರ್ಮಪುರಿ, ಸೇಲಂ ಜಿಲ್ಲೆಗಳಲ್ಲೂ ಹರಿದು ಪೂರ್ವ ಸಮುದ್ರ ಸೇರುತ್ತದೆ. ಗೋದಾವರಿ ಇಂದಿನ ಮಹಾರಾಷ್ಟ್ರದ ಉತ್ತರದ ಕೋನೆಯ ಜಿಲ್ಲೆ ನಾಸಿಕ್ ನಗರದ ಪಕ್ಕದಲ್ಲಿ ಹರಿಯುವ ನದಿ. ಯಾವುದನ್ನು ಮಹಾರಾಷ್ಟ್ರ ಎಂದು ಇಂದು ಕರೆಯುತ್ತಿದ್ದೇವೆಯೋ ಕರೆಯುತ್ತಿದ್ದೇವೆಯೋ ಅದೆಲ್ಲ ಒಂದು ಕಾಲಕ್ಕೆ ಕರ್ನಾಟಕ ಅಥವಾ  ಕನ್ನಡನಾಡು, ಶ್ರೀವಿಜಯನು ಎಂಟು, ಒಂಭತ್ತನೇ ಶತಮಾನದ ವಾಸ್ತವ ಚಿತ್ರಣವನ್ನೇ ನೀಡಿದ್ದಾನೆ. ಈ ಬಗ್ಗೆ ವಿದ್ವಾಂಸರಾದ ಶಂ.ಬಾ.ಜೋಶಿ, ನಾ.ಶ್ರೀ.ರಾಜಪುರೋಹಿತ್, ಆಲೂರು ವೆಂಕಟರಾವ್ ಮುಂತಾದವರು ಸಾಕಷ್ಟು ಕೆಲಸ ಮಾಡಿ ಆ ವಾಸ್ತವ ಚಿತ್ರಣವನ್ನು ಸ್ವೀಕರಿಸಿದ್ದಾರೆ, ನನ್ನ ‘ಭಾಷಿಕ ಬೃಹತ್ ಕರ್ನಾಟಕ’ ನೀಲಗಿರಿಯಿಂದ ನಾಸಿಕ್  ವರೆಗು’ ಕೃತಿಯಲ್ಲಿ ಹೊಸ ಮಾಹಿತಿ ನೀಡಿ ಅದನ್ನೇ ಪುಷ್ಟೀಕರಿಸಿದ್ದಾರೆ.

1  2

ಕನ್ನಡಿಗರು ಮುಂದಿನ ವಿಶ್ವಾಸಾರ್ಹ ಆಧಾರಗಳನ್ನು ಗಮನಿಸಬೇಕು. ದೇಶಭಕ್ತ ವೀರಸಾರ್ವಕರ್ ನಾಸಿಕ್ ಜಿಲ್ಲೇಯವರೇ, ಅವರ ತಂದೆ ಊರು ‘ಭಗೂರು’; ತಾಯಿಯ ಊರು ‘ಕೋಕೂರು’ (‘ಊರ್ ಗಮನಿಸಿ), ಅವರ ಮನೆಯ ನಾಯಿಯ ಹೆಸರು ‘ಕರಿಯ’, ಅವರನ್ನು ಬಾಲ್ಯದಲ್ಲಿ ತಂದೆ ‘ಬಾಳಂಭಟ್ಟ’ ಎಂದು ಕರೆಯುತ್ತಿದ್ದರು, ‘ಅಮ್ಮ’ ಎಂದರೆ ಹಳೆಗನ್ನಡದಲ್ಲಿ ‘ಅಪ್ಪ ಎಂಬ ಅರ್ಥವಿತ್ತು, (‘ಅಲ್ಲಮ್ಮ’; ‘ಅಲ್ಲಪ್ಪ’) ಹದಿಮೂರನೆ ಶತಮಾನದ ಮಹರಾಷ್ಟ್ರದ ‘ಮಾನುಭಾವ’ ಪಂಥದ ಪ್ರವರ್ತಕ ಚಕ್ರಧರನ ಗುರುವಿನ ಹೆಸರು ‘ಗುಂಡಮ ಭಟ್ಟ’, ‘ಗುಂಡ;, ‘ಅಮ್ಮ’, ಎರಡೂ ಅಚ್ಚಗನ್ನಡ ಪದಗಳು.

3 4

ನಾಸಿಕ್ ಜಿಲ್ಲೆಯಲ್ಲಿ ‘ಹಟ್ಕಾರ್ ಕಾಡಿನ’ ಎಂಬ ಅಲೆಮಾರಿ ಜನಾಂಗವಿದೆ, ಅವರು ಅಲ್ಲಿಯ ಮೂಲನಿವಾಸಿಗಳು (ಮರಾಠಿ: ಕಾನಡಿ:ಕನ್ನಡ ಮಾತನಾಡುವ ಜನ), ಅವರು ‘ಹಟ್ಟಿ’ಗಳಲ್ಲಿ ವಾಸಿಸುವರು. ಅವರಲ್ಲಿ ಇಂದಿಗೂ ಇಂಥ ವಾಕ್ಯಗಳಿವೆ, ‘ನಿಂಗೆ ಮಗದಿರ್ ಯಾನಯುದು?’ (ನಿನಗೆ ಎಷ್ಟು ಮಕ್ಕಳು?). ‘ನಂಗೆ ಐನ್ ಮಗದಿರ್ ಎಡ್ಡು ಮಗದಿಳ್ ದಿಲ್ ಆಯ್ದು’ (ನನಗೆ ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ). ‘ನಂಗೆ ಮನೆಗ್ ಹೋಗದು ಉಸಿರಾತ್’ (ನನಗೆ ಮನೆಗೆ ಹೋಗಲು ಸಮಯ ಆಯಿತು), ಇಲ್ಲಿ ‘ಮಗದಿರ್’. ‘ಮಗಳ್ ದಿರ್’, ‘ಉಸಿರ್’ (:ಅವಸರ,ಸಮಯ) ಇವು ಸ್ಪಷ್ಟವಾಗಿ ಹಳೆಗನ್ನಡ ರೂಪಗಳು. ಹಾಗೆಯೇ ಹಟ್ಕಾರ್ ಕಾನಡಿಗಳ ಭಾಷೆಯಲ್ಲಿ ‘ಕೂಂದಲ್’ (ಕೂದಲು). ‘ಬ’ (ಅಬ್ಬೆ,ತಾಯಿ) ಇವೂ ಹಳೆಗನ್ನಡದರೂಪಗಳು. ಇದರ ಸೂಚನೆ ಸ್ಪಷ್ಟ: ಸಾವಿರ ವರ್ಷಗಳ ಹಿಂದೆ ನಾಸಿಕ್ ಪ್ರದೇಶವು ಕನ್ನಡ ಭಾಷಾ ಪ್ರದೇಶವಾಗಿತ್ತು.

5 6

ಮುಂಬೈ ಪ್ರಸಿದ್ಧ ಬಡಾವಣೆ ‘ಮಲಬಾರ್ ಹಿಲ್ಸ್’ ಹಿಂದೆ ಮಲೆಬರ್ (ಕನ್ನಡ ಮಲೆವರು: ‘ಮಲೆ’ ಅಥವಾ ಗುಡ್ಡನಾಡಿನವರು) ಎಂಬ ಜನ ವಾಸವಾಗಿದ್ದ ಜಾಗ . ಕ್ರಿ.ಶ.1818ರಲ್ಲಿ ಬ್ರಿಟಿಷ್ ಅಧಿಕಾರಿ ಮುಂಬೈ ಗವರ್ನರ್ ಆಗಿ ನೇಮಕಗೊಂಡಾಗ ಅಲ್ಲಿನ ಜನ ಅವನಿಗೆ ಒಪ್ಪಿಸಿದ ಗೌರವಪತ್ರ ಕನ್ನಡದಲ್ಲಿತ್ತು.

7 8

(“on his appointment as Governer of Bombay, Mount Stuart Elphinstone was presented a civil address which was written and rewrite in kanerese”). ‘ಕೆನರೀಸ್’ ಎಂಬುದು ಸಾರಸ್ತತ ಬ್ರಾಹ್ಮಣರನ್ನು ಹೇಲುತ್ತದೆ ಎಂಬ ವ್ಯಾಖ್ಯಾನವೂ ಇದೆ. ಮುಂಬೈ ದ್ವೀಪದ ಮೂಲನಿವಾಸಿಗಳಾದ ‘ಕೋಳಿ’ ಎಂಬ ಹೆಸರಿನ ಜನ ಮೂಲತಃ ಕನ್ನಡ ಮಾತನಾಡುವವರು ಎನ್ನಲು ಆಧಾರಗಳಿವೆ, ಕ್ರಿಸ್ತಶಕದ ಆರಂಭದಲ್ಲಿ ಮುಂಬೈ ದ್ವೀಪಸ ಭಾಷೆ ಕನ್ನಡವೇ ಆಗಿತ್ತು ಎಂದು ಡಾ. ಬಿ.ಎ.ಸಾಲೇತ್ತೂರರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.1534ರಲ್ಲಿ ಗುಜಾರಾತ್ ನ ಸುಲ್ತಾನನು ಪೋರ್ಚುಗೀಸರಿಗೆ ಮುಂಬೈಯನ್ನು ಬಿಟ್ಟುಕೊಟ್ಟ, ಬಳಿಕ ಪೋರ್ಚುಗೀಸ್ ದೊರೆ 1665ರಲ್ಲಿ ತನ್ನ ಅಳಿಯ, ಇಂಗ್ಲೆಂಡ್ ನ ರಾಜಕುಮಾರನಿಗೆ ಅದನ್ನು ಉಡುಗೊರೆಯಾಗಿ ನೀಡಿದನು. 1670ರಲ್ಲಿ ಬ್ರಿಟಿಷರು ಜಾರಿಗೆ ತಂದ ಇಂಗ್ಲಿಷ್ ಭಾಷೆಯಲ್ಲಿದ್ರ ಕಾನೂನನ್ನು ಪೋರ್ಚುಗೀಸರು ಮತ್ತು ಅಲ್ಲಿಯ ಕನ್ನಡ ಭಾಷಿಕ ನಿವಾಸಿಗಳಿಗೆ ಅರ್ಥವಾಗಲೆಂದು ಪೋರ್ಚುಗೀಸ್ ಮತ್ತು ಕನ್ನಡದಲ್ಲಿ ಅನುವಾದಿಸಿದರು. ಆ ಕಾಲಕ್ಕೆ ಗೋವಾದ ಪ್ರಮುಖ ಆಡುಭಾಷೆ ಕನ್ನಡವೇ ಆಗಿತ್ತು. 1737ರಲ್ಲಿ ಇಂಗ್ಲಿಷ್ ಲೇಖಕನೊಬ್ಬ ಮುಂಬೈ ದ್ವೀಪದ ಕೆಳವರ್ಗದವರ ಭಾಷೆ ಕನ್ನಡ ಎಂದಿದ್ದಾನೆ.

9  10

ನಾಸಿಕ್ ಜಿಲ್ಲೆಯ ‘ತಿಗುಳ್’ರು ವೀಳ್ಯದೆಲೆ ಬೆಳೆಯುವದರಲ್ಲಿ ನಿಷ್ಣಾತರು. ಕರ್ನಾಟಕದಲ್ಲಿಯೂ ಅದೇ ವೃತ್ತಿಯ ಕನ್ನಡ ಮಾತನಾಡುವ ‘ತಿಗುಳ’ರಿದ್ದಾರೆ (ಕೆಲವರು ತಮಿಳು ಮಾತನಾಡುತ್ತಾರೆ). ದಕ್ಷಿಣ ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಪುರ, ನಾಂದೇಡ್, ಸಾಂಗ್ಲಿ ಇತ್ಯಾದಿ ಜಿಲ್ಲೆಗಳ ಪ್ರಾಚೀನ ಶಾಸನಗಳೆಲ್ಲ ಕನ್ನಡದಲ್ಲಿವೆ ವಚನಕಾರ ಸಿದ್ಧರಾಮನು ಸೊಲ್ಲಾಪುರದವನು” ಅವನ ತಂದೆ ಮುದು ಗೌಡ: ಅವನು ಅದೇ ಜಿಲ್ಲೆಯ ‘ಮೊರಡಿ’ ಊರಿನವನು. ‘ಮೊರಡಿ’ ಎಂದರೆ ಕನ್ನಡದಲ್ಲಿ ಗುಡ್ಡ ಎಂದರ್ಥ (ಈಗಲೂ ಆ ಜಿಲ್ಲೆಯಲ್ಲಿ ‘ಮೊರ್ಡಿ’ ಎಂಬ ಹೆಸರಿದೆ). ಅಲ್ಲಿನವರು ಈಗ ಹೊರಗಡೆ ಮರಾಠಿಯಲ್ಲಿ ಮಾತನಾಡಿದರೂ ಮನೆಯ ಮಾತು ಕನ್ನಡ – ಸ್ತ್ರಿಯರಂತೂ ಕನ್ನಡಲ್ಲೇ ವ್ಯವಹರಿಸುತ್ತಾರೆ. ಮರಾಠಿ ಅಲ್ಲಿನ ಜನಕ್ಕೆ ಆಡಳಿತ ಭಾಷೆ: ಮನೆಮಾತು. ಆತ್ಮೀಯತೆಯ ಭಾಷೆ ಕನ್ನಡ ಸುಮಾರು 1951ರಲ್ಲಿ ಸೊಲ್ಲಾಪುರದ ಶರಣೆ, ಕವಯಿತ್ರಿ ಜಯದೇವತಾಯಿ ನನಗೆ ಹೇಳಿದ್ದು, ‘ಕನ್ನಡಿಗರು ಗಂಡಸರಾದರೆ ಸೊನ್ನಲಿಗೆಯನ್ನು ಕರ್ನಾಟಕಕ್ಕೆ ಸೇರಿಸಬೇಕು’, ನಾಂದೇಡ್ ಜಿಲ್ಲೆಯ ಸಾಮಾನ್ಯ ಜನರು ಮನೆಗೆ ಅಸ್ತಿಭಾರ ಹಾಕುವುದನ್ನು ‘ಕೆಸರು ಕಲ್ಲಿಕ್ಕು’ ಎನ್ನುತ್ತಾರೆ.

11 12

ಸೊಲ್ಲಾಪುರ ಜಿಲ್ಲೆಯ ಪಂಢರಪುರ ದಿವ್ಯಕ್ಷೇತ್ರದ ವಿಠ್ಠಲ ಅಥವಾ ವಿಠೋಬನು, ಮರಾಠಿ ಸಂತರ ಅಭಂಗ ಕೀರ್ತನೆಗಳ ಪ್ರಕಾರ ‘ಕನ್ನಡ’ ದೈವ. ಮರಾಠಿ ವಿದ್ವಾಂಸ ರಾ.ಬೆಂ.ಷೇರೆಯವರು ವಿಠ್ಠಲನ ‘ಕನ್ನಡತನ’ ನಿಸ್ಸಂದೇಹ ಎನ್ನುತ್ತಾರೆ. ಅವರ ಪ್ರಕಾರ ‘ವಿಠ್ಠಲನ ಬಹಳಷ್ಟು ಹಕ್ಕುದಾರರು ಸೇವಕರು ಕರ್ನಾಟಕದವರು’, ಸಂತ ಜ್ಞಾನದೇವ ತನ್ನ ಒಂದು ಅಭಂಗದಲ್ಲಿ ‘ಓ ವಿಠ್ಠಲ ನೀನು ‘ ಕಾನಡೀ’ (ಕನ್ನಡ) – ನನ್ನ ಆಕ್ರಂದನ ನಿನಗೆ ಕೇಳಿಸುತ್ತಿಲ್ಲ’ – ಎಂದು ಕೊರಗಿದ್ದಾನೆ, ಜ್ಞಾನದೇವನ ಅಭಂಗಗಳ ಭಾಷೆ ಮರಾಠಿ ಮತ್ತು ಅವನ ಮಾತಿನ ಅರ್ಥ ಸ್ವಯಂವೇದ್ಯ, ವಿಠ್ಠಲನ ರಾತ್ರಿ ಪೂಜೆ ಮುಗಿದ ಮೇಲೆ ಅರ್ಚಕರು ಮಾಡುವ ಕೊನೆಯ ಸ್ತೋತ್ರ ಕನ್ನಡದ್ದು- ಎಂದರೆ ಕನ್ನಡ ಹಾಡು ಕೇಳಿದರೆ ವಿಠ್ಠಲನಿಗೆ ಚೆನ್ನಾಗಿ ನಿದ್ರೆ ಬರುತ್ತದೆ, ಪುಣೆ ಜಿಲ್ಲೆಯ ಖಂಡೋಬನು ಮೂಲತಃ ಮೈಲಾರ ದೇವತೆ. ಈ ದೇವತೆಯನ್ನು ಈಗಲೂ ಕರ್ನಾಟಕದಲ್ಲಿ ಎಲ್ಲೆಡೆ ಪೂಜಿಸುತ್ತಾರೆ. ಹೂವಿನಡಗಲಿಯ ಮೈಲಾರ ದೇವತೆ ಬಹುಪ್ರಸಿದ್ಧ. ಖಂಡೋಬನ ಜಾತ್ರೆಯಲ್ಲಿ ಭಕ್ತರು ‘ಏಳ್ ಕೋಟಿ ಉಘೇ’ ಎಂದು ಜಯಘೋಷ ಮಾಡುತ್ತಾರೆ, ‘ ಏಳ್’ ಕನ್ನಡ ಪದ.

15749042_433342807056044_338619561_o 14

ಕನ್ನಡ ಭಾಷೆ ಕನಿಷ್ಟ ಎರಡೂವರೆ ಸಾವಿರ ವರ್ಷದಷ್ಟು ದಾಖಲಾತಿ ಇತಿಹಾಸವಿದ್ದರೆ ಮರಾಠಿ ಒಂದು ಸಾವಿದಷ್ಟು ಮಾತ್ರ ಇದೆ. ಶ್ರವಣ ಬೆಳಗೊಳದಲ್ಲಿ ಚಾವುಂಡರಾಯನು ಕ್ರಿ.ಶ.983ರಲ್ಲಿ ಗೊಮ್ಮಟ ವಿಗ್ರಹವನ್ನು ಕಡೆಯಿಸಿ ಅಲ್ಲಿ ಕೆಳಗೆ ಮರಾಠಿ. ಕನ್ನಡ, ತಮಿಳು ಶಾಸನಗಳನ್ನು ಬರೆಯಸಿದ. ;ಚಾವುಂಡರಾಯೇಂ ಕರವಿಲಯಂಲೇಂ’ ಎಂಬ ಪ್ರಬುದ್ದವಾಗಿರಲಿಲ್ಲ – ಗೋದಾವರಿ ಉತ್ತರಕ್ಕಿದ್ದ ಭಾಷಿಗರಿಗಾಗಿ ಆ ಮರಾಠಿ ಶಾಸನ ಬರೆಯಿಸಿದ್ದು. ವಿಶೇಷವಾಗಿ 12-13ನೇ ಶತಮಾನದ ದೇವಗಿರಿ (ಈಗಿನ ದೌಲತಾಬಾದ್) ಯಾದವರ ಕಾಲದಿಂದ ಈಚೆಗೆ ಮರಾಠಿ ದಕ್ಷಿಣಕ್ಕೆ ನುಗ್ಗಿ ಕನ್ನಡ ಮೇಲೆ ಆಕ್ರಮಣ ಮಾಡಿತು. ಅವರಿಗಿಂತ ಮುಂಚೆ ಹಳಿಯ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಕಾಲದಲ್ಲಿ ಇಣದಿನ ಮಹಾರಾಷ್ಟ್ರದ ತುಂಬೆಲ್ಲ ಕನ್ನಡ ಹಬ್ಬಿತ್ತು. ಮುಬೈ ಪಕ್ಕದ ಎಲಿಫೇಂಟ ಗುಹಾಂತರ ದೇವಾಲಯ ಕರತ್ತಿಸಿದ್ದು  ರಾಷ್ಟ್ರಕೂಟರು; ಅವರಿಗಿಂತ ಮೊದಲೇ ಬಾದಾಮಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯು ನರ್ಮದಾ ನದಿ ಆಚೆಗಿನ ಶ್ರೀಹರ್ಷನನ್ನು ಸೋಲಿಸಿದ್ದ. ಅವರ ಕಾಲದಲ್ಲೇ ಅಜಂತಾ, ಎಲ್ಲೋರಗಳು ಕಲಾಕೇಂದ್ರಗಳಾದವು. ಅಜಂತಾದ ಗುಹೆಯೊಂದರ ಭಿತ್ತಿಚಿತ್ರ ಇಮ್ಮಡಿ ಪುಲಿಕೇಶಿಯದು ಎಂದು ವಿದ್ವಾಂಸರು ಊಹಿಸಿದ್ದಾರೆ.

15 16

ಮರಾಠಿ ಭಾಷೆಯ ದೈನಂದಿನ ಬಳಕೆಯ ನೂರಾರು ಪದಗಳು ಕನ್ನಡದವು ಕೆಲ ಉದಾಹರಣೆಗಳು: ಓಳಗೇ, ಔಳೇ (ಒಳಗೆ), ಕೋಲು, ತೂಪ (ತುಪ್ಪ), ಮುದಿಲ (ಹಳೆಗನ್ನಡ. ಮೊದಲು). ಓಲಿ (ಒಲೆ), ಕೋಂಶ್(ಃಕೊಂತ, ಒಂದು ಅಯುಧ). ಅಕ್ಕಾ (ಅಕ್ಕ). ಅಣ್ಣಾ(ಅಣ್ಣ). ಬಾಳಂತಿ(ಬಾಣಂತಿ), ವೀರಗಲ್ (ವೀರಗಲ್ಲು), ಮೇಚು(ಮೆಚ್ಚು), ಹೋನ್ (ಹೊನ್ನು), ಮರಾಠಿಯು ಕನ್ನಡದ ಅಸ್ತಿಭಾರದ ಮೇಲೆ ರೂಪಿತವಾಗಿರುವ ಆರ್ಯನ್ ಭಾಷೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರವನ್ನು ಮೊದಲು ಅಳಿದ ಶಾತವಾಹನರು (ಕ್ರಿ.ಶ.3ನೇ ಶತಮಾನ) ಕನ್ನಡಿಗರೆಂದೇ ಡಾ.ಎಸ್.ಶ್ರೀಕಂಠ ಶಾಸ್ತ್ರಿಗಳ ಅಭಿಪ್ರಾಯ. ಆಂಧ್ರಪ್ರದೇಶ, ಚಿತ್ತೂರು, ಸೇಲಂ, ಧರ್ಮಪುರಿ, ನೀಲಗಿರಿ) ಮೂಲತಃ ಕನ್ನಡ ಭಾಷಾ ಪ್ರದೇಶಗಳು, ಒಂದು ಸಾವಿರ ವರ್ಷ ಹಿಂದೆ ಕನ್ನಡ ಭಾಷಾ ಪ್ರದೇಶ ಕಾವೇರಿಯಿಂದ ಗೋದಾವರಿಯವರೆಗೆ ವ್ಯಪಿಸಿತ್ತು ಎಂದು ಪ್ರತಿಪಾದಿಸಲು ಇನ್ನೂ ಹಲವು ನಿರ್ಣಾಯಕ ಆಧಾರಗಳಿವೆ.

17

15749916_433342733722718_1628710218_n

ಮುಂಬೈ ಬ್ರಿಟನ್ ಸರ್ಕಾರದ 1940ರ ಮರಾಠಿ ಪಠ್ಯಗ್ರಂಥದಲ್ಲಿ ‘ಅರ್ವಾಚೀನ ಕರ್ನಾಟಕ’ (ಆಧುನಿಕ ಕರ್ನಾಟಕ) ಶಿರ್ಷಿಕೆಯಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿ ಕರ್ನಾಟಕ ಬೆಳಗಾವಿ ಸೇರಿದೆ. 1909ರ ಪಠ್ಯಗ್ರಂಥದಲ್ಲಿನ ಚಿತ್ರದಲ್ಲಿ ಬೆಳಗಾವಿ ಮಾತ್ರವಲ್ಲ. ಗೋವ. ಕೊಲ್ಲಾಪುರ, ಸೊಲ್ಲಾಪುರಗಳು ಸೇರಿವೆ (ಚಿತ್ರಗಳನ್ನು ನೋಡಿ). ಈ  ಚಿತ್ರಗಳನ್ನು ಮುಂಬೈ ಸರ್ಕಾರವೇ ಪ್ರಕಟಿಸಿದ್ದು ಎಂಬುದು ಗಮನಾರ್ಹ. ಈ ಮಾಹಿತಿ ಕನ್ನಡಿಗರನ್ನು ಬಡಿದೆಬ್ಬಿಸಿದ್ದರೆ, ಇನ್ನು ಚಾಟಿ ಅಥವಾ ಬಡಿಗೋಲಿನಿಂದ ಸಾಧ್ಯ?

11698827_1068243743203623_6821073425312096667_o

ಕೃಪೆ  : ಡಾ. ಎಂ. ಚಿದಾನಂದಮೂರ್ತಿ (ಲೇಖಕರು ಹಿರಿಯ ಸಂಶೋಧಕರು)

: mysore gazetteer

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
ನಯನ್ ರಾಜ್ says:

ಇತಿಹಾಸದ ಪುಟಗಳು ನೈಜ ಸಂದೇಶಗಳನ್ನು ವಿವರಿಸಿದರೂ, ನಮ್ಮ ನಾಡಿನ ಜನತೆ ಅವರವರ ಅನುಗುಣವಾಗಿ ಇದ್ದಾರೆಯೇ ಹೊರತು ನಾಡು-ನುಡಿಗಾಗಿ ಅಲ್ಲ . ಈ ರಾಜಕೀಯದಿಂದ ಬರೀ ಒಡಕುಗಳೇ ಹೊರತು, ಒಂದುಗೂಡಿಸುವ ಪ್ರಯತ್ನ ಅಂತು ಇಲ್ಲಾ, ಒಳ್ಳೆಯ ಸರ್ಕಾರ, ನಾಯಕರು ಇದ್ದಿದ್ದರೆ ಇಂತಹ ಕೈ ತಪ್ಪುವ ನಮ್ಮ ನಾಡುಗಳು ನಮ್ಮನ್ನು ಬಿಟ್ಟು ಹೋಗುತ್ತಿರಲಿಲ್ಲ..ಕರ್ನಾಟಕ ೩೦೦೦ ವರ್ಷಗಳ ಇತಿಹಾಸ ಹೊಂದಿರುವ ನಾಡು,,ನುಡಿಯು ಅಷ್ಟೇ ಸ್ವಚ್ಚ ….

LAKSHMINARAYANA says:

Yatha drvede evattu nama Kannada alli asthivadalli ela …..

To Top