fbpx
News

ಸಹಾಯಕನಿಂದ ಶೂ ಹಾಕಿಸಿಕೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ಧರಾಮಯ್ಯ ಮುಖ್ಯಮಂತ್ರಿ ಆದ ನಂತರ ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಇದೀಗ ಸಹಾಯಕ ಸಿಬ್ಬಂದಿಯಿಂದ ಶೂ ಹಾಕಿಕೊಳ್ಳುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಶನಿವಾರ ಮೈಸೂರಿನಲ್ಲಿ ನಡೆದ ಸಮಾರಂಭವೊಂದರ ವೇಳೆ ಸಿದ್ಧರಾಮಯ್ಯ ತಮ್ಮ ಸಹಾಯಕರೊಬ್ಬರಿಂದ ಕಾಲಿಗೆ ಶೂ ಹಾಕಿಕೊಂಡರು. ಈ ವೀಡೀಯೊ ಚಿತ್ರ ಇದೀಗ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂಚಲನ ಸೃಷ್ಟಿಸಿದೆ.

ಮೈಸೂರಿಗೆ ಭೇಟಿ ನೀಡಿದ್ದ ಸಿದ್ಧರಾಮಯ್ಯ, ಶುಕ್ರವಾರ ನಿಧನರಾದ ಹಿರಿಯ ನಟ ಚೇತನ್‍ ರಾಮರಾವ್‍ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ನಂತರ ಹೊರಬಂದ ಸಿದ್ಧರಾಮಯ್ಯ ಕೆಲವು ನಿಮಿಷ ಯಾರಿಗೊ ಕಾದರು. ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ಸಹಾಯಕ ಸಿಬ್ಬಂದಿ ಕುಮಾರ್ ಓಡಿ ಬಂದು ಸಿದ್ಧರಾಮಯ್ಯ ಅವರ ಕಾಲಿಗೆ ಶೂ ತೊಡಿಸಿದರು.

ಸಿದ್ಧರಾಮಯ್ಯ ಅವರ ಈ ನಡವಳಿಕೆ ಅಲ್ಲಿದ್ದವರಿಗೆ ಅಚ್ಚರಿ ಮೂಡಿಸಿತು. ಕಾಂಗ್ರೆಸ್‍ ಮುಖಂಡರೊಬ್ಬರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಸಿದ್ಧರಾಮಯ್ಯ ಅವರು ಸಹಾಯಕರನ್ನು ಈ ರೀತಿ ನಡೆಸಿಕೊಂಡಿದ್ದನ್ನು ನಾನು ಇದೇ ಮೊದಲ ಬಾರಿ ನೋಡಿದ್ದು. ಈ ಹಿಂದೆ ಅವರು ಈ ರೀತಿ ವರ್ತಿಸುತ್ತಿರಲಿಲ್ಲ ಎಂದರು. ಆದರೆ ಸಿದ್ಧರಾಮಯ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿದ್ಧರಾಮಯ್ಯ ಸ್ವತಃ ಈ ರೀತಿ ನಡವಳಿಕೆಗಳನ್ನು ಸಹಿಸುತ್ತಿರಲಿಲ್ಲ. ಕೆಳವರ್ಗದಿಂದ ಬಂದ ಬಂದ ಅವರು ಸದಾ ಸಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತಿದ್ದಾರೆ, ಆದರ ಶೂ ಹಾಕುವುದಕ್ಕಾಗಿಯೇ ಸಹಾಯಕ ಸಿಬ್ಬಂದಿ ನೇಮಿಸಿಕೊಂಡಿರುವುದು ಚರ್ಚೆಯ ವಿಷಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top