fbpx
News

ಕೇಂದ್ರ ಸರ್ಕಾರದಿಂದ ಆಧಾರ್ ಪೇಮೆಂಟ್ App ಬಿಡುಗಡೆ

ಹಳೆ ನೋಟುಗಳ ಬ್ಯಾನ್ ಬಳಿಕ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ರಾಹಕ ಸ್ನೇಹಿ ‘ಆಧಾರ್ ಪೇಮೆಂಟ್ ಆ್ಯಪ್’ ಅನ್ನು ಇಂದು ನೂತನ ಆಧಾರ್ ಪೇಮೆಂಟ್ ಆ್ಯಪ್ ಬಿಡುಗಡೆಗೊಳಿಸುತ್ತಿದೆ. ಈ ಆ್ಯಪನ್ನು ಯುಐಡಿಎಐ (ಆಧಾರ್) ಐಡಿಎಫ್ಐ ಬ್ಯಾಂಕ್ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ ಎಂದು ಯುಎಐಡಿಎಐ ಸಿಇಓ ಅಜಯ್ ಭೂಷಣ್ ತಿಳಿಸಿದ್ದಾರೆ. ದೇಶದಲ್ಲಿ ಈಗಾಗಲೇ 40 ಕೋಟಿ ಆಧಾರ್‌ ಕಾರ್ಡ್‌ಗಳು ಬ್ಯಾಂಕ್‌ ಖಾತೆಯೊಂದಿಗೆ ಜೋಡಿಸಲ್ಪಟ್ಟಿವೆ. 2017ರ ಮಾರ್ಚ್‌ ಒಳಗೆ ಎಲ್ಲ ಆಧಾರ್‌ ಕಾರ್ಡ್‌ಗಳನ್ನು ಬ್ಯಾಂಕ್‌ ಖಾತೆಗೆ ಜೋಡಿಸುವ ಗುರಿ ಹೊಂದಲಾಗಿದೆ ಎಂದವರು ಹೇಳಿದರು.

ಆಧಾರ್‌ ಪೇಮೆಂಟ್‌ ಆ್ಯಪ್‌ನ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಮತ್ತು ಮಾಹಿತಿ-ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರಿಗೆ ನಡೆಸಿಕೊಡಲಾಗಿದ್ದು ಅವರು ಈ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

IDFC ಬ್ಯಾಂಕ್‌ ಮತ್ತು ಯುಐಡಿಎಐ (ಆಧಾರ್‌) ಜತೆಗೂಡಿ ಸಿದ್ಧಪಡಿಸಿರುವ ಆಧಾರ್ ಪೇಮೆಂಟ್ ಆ್ಯಪ್ ನಿರ್ವಹಣೆ ತುಂಬಾ ಸರಳ.

  • ವ್ಯಾಪಾರಿಗಳು ಈ ಆ್ಯಪನ್ನು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ಗಳಿಗೆ ಡೌನ್ ಲೋಡ್ ಮಾಡಿಕೊಳ್ಳಬೇಕು.
  • ಇದಕ್ಕೆ ಕೇವಲ 2,000 ರೂ. ಬೆಲೆಗೆ ಲಭ್ಯವಿರುವ ಬೆರಳಚ್ಚು ಬಯೋಮೆಟ್ರಿಕ್ ಸಾಧನವನ್ನು ಜೋಡಿಸಿಕೊಳ್ಳಬೇಕು.
  • ಗ್ರಾಹಕರು ಆಧಾರ್ ಕಾರ್ಡನ್ನು ವ್ಯಾಪಾರಿಗೆ ಕೊಟ್ಟರೆ, ಅವರು ಅದನ್ನು ಆ್ಯಪ್ಗೆ ಫೀಡ್ ಮಾಡುತ್ತಾರೆ. ಬಳಿಕ ಗ್ರಾಹಕರು ತಮ್ಮ ಬೆರಳಚ್ಚನ್ನು ಬಯೋಮೆಟ್ರಿಕ್ ಸಾಧನದಲ್ಲಿ ದಾಖಲಿಸಬೇಕು. ಇದೇ ಪಾಸ್ವರ್ಡ್ ಆಗಿ ವರ್ಕ್ ಆಗುತ್ತದೆ. ಆಗ ನೀಡಬೇಕಾದ ಹಣ ಗ್ರಾಹಕರ ಖಾತೆಯಿಂದ ವ್ಯಾಪಾರಿಗೆ ಪಾವತಿಯಾಗುತ್ತದೆ.

ಗ್ರಾಹಕರಿಗೇನು ಅನುಕೂಲ?

  • ಪೇ ಟಿ ಎಂ ಮಾದರಿಗಳ ಆ್ಯಪ್ ಗಳ ಅಗತ್ಯವಿಲ್ಲ.
  • ಸಾಧಾರಣ ಮೊಬೈಲ್ ಫೋನ್ ಕೂಡ ಬೇಕಿಲ್ಲ.
  • ಈ ವ್ಯವಸ್ಥೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಕೆಯಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top