fbpx
Awareness

ಡಿ.30ರ ನಂತರ ಹಳೆಯ ನೋಟುಗಳನ್ನು ಹೊಂದಿದ್ದರೆ 50 ಸಾವಿರ ದಂಡ

ನವದೆಹಲಿ: ಡಿಸೆಂಬರ್ 30ರ ನಂತರವೂ ಹಳೆಯ ನಿಷೇಧಿತ ನೋಟುಗಳನ್ನು ಹೊಂದಿದ್ದರೆ 50 ಸಾವಿರ ದಂಡ ವಿಧಿಸಲು ಮುಂದಾಗಿದೆ.

ನ. 8ರಂದು 500 ಮತ್ತು 1000 ರೂ. ನೋಟುಗಳನ್ನು ಅಪಮೌಲ್ಯ ಮಾಡಿದ್ದ ಕೇಂದ್ರ ಸರಕಾರ, ನಿಷೇಧಿತ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಡಿ. 30ರ ವರೆಗೆ ಅವಕಾಶ ನೀಡಿದೆ. ಈ ಗಡುವು ಮುಗಿದ ಹಳೆಯ ನೋಟುಗಳನ್ನು ನೇರವಾಗಿ ರಿಸರ್ವ್ ಬ್ಯಾಂಕ್ ನಲ್ಲಿ ಮಾ. 31ರ ವರೆಗೂ ಜಮೆ ಮಾಡಲು ಅವಕಾಶ ಕಲ್ಪಿಸಿದೆ. ಆ ಅವಧಿ ಮುಗಿಯುವ ಮುನ್ನವೇ ಈಗ ನಿಷೇಧಿತ ನೋಟು ಹೊಂದಿದವರ ಮೇಲೆ ಗದಾ ಪ್ರಹಾರ ನಡೆಸಲು ಹೊರಟಿದೆ.

ಮೂಲಗಳ ಪ್ರಕಾರ ಕಾಳಧನಿಕರನ್ನು ಗುರುತಿಸಲು ಮತ್ತು ಕಪ್ಪುಹಣ ಬಿಳಿಯಾಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮತ್ತೊಂದು ಸುಗ್ರೀವಾಜ್ಞೆ ಹೊರಡಿಸಲು ಸಿದ್ಧತೆ ನಡೆಸಿಕೊಂಡಿದೆ. ನೂತನ ಸುಗ್ರೀವಾಜ್ಞೆಯಂತೆ ಡಿಸೆಂಬರ್ 30ರ ಬಳಿಕ ಯಾವುದೇ ವ್ಯಕ್ತಿ ತನ್ನ ಬಳಿ ದಾಖಲೆ ಇಲ್ಲದ 10ಕ್ಕಿಂತಲೂ ಹೆಚ್ಚು ನಿಷೇಧಿತ ಹಳೆಯ ನೋಟುಗಳನ್ನು ಹೊಂದಿದ್ದರೆ ಆತನಿಗೆ ಕನಿಷ್ಠ 50 ಸಾವಿರ ರು. ಅಥವಾ ಇರುವ ಹಣಕ್ಕಿಂತ ಐದು ಪಟ್ಟು ದಂಡ ವಿಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ 31ರವರೆಗೂ ಕಾಲಾವಕಾಶವಿದ್ದು, ಡಿಸೆಂಬರ್ 31 ರ ಬಳಿಕ ಜಮೆಯಾಗುವ ಹಣಕ್ಕೆ ಬ್ಯಾಂಕು ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.

ಈ ಅಫಿಡವಿಟ್ ನಲ್ಲಿ ಹಣ ಜಮಾವಣೆಗೆ ಏಕೆ ತಡವಾಯಿತು? ಮತ್ತು ಹಣದ ಮೂಲ ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಬೇಕಿರುತ್ತದೆ. ಒಂದು ವೇಳೆ ಆ ಉತ್ತರಗಳು ಸಮರ್ಪಕವಾಗಿರದೇ ಇದ್ದಲ್ಲಿ ಆಗ ಅಂತಹ ವ್ಯಕ್ತಿಗೆ ದುಬಾರಿ ಪ್ರಮಾಣದ ದಂಡ ಹಾಗೂ ಕಾನೂನು ರೀತ್ಯ ಕ್ರಮ ಅನುಸರಿಸುವುದಾಗಿ ಈ ಹಿಂದೆಯೇ ಕೇಂದ್ರ ಸರ್ಕಾರ ಹೇಳಿತ್ತು. ಹೀಗಾಗಿ ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಲು ಮುಂದಾಗಿರುವ ನೂತನ ಸುಗ್ರೀವಾಜ್ಞೆ ಕುರಿತಂತೆ ಭಾರಿ ಕುತೂಹಲ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top