fbpx
News

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಂ.1 ಸ್ಥಾನ ಪಡೆದ ಭೀಮ್‍ ಆಪ್‍!

ದೇಶದಲ್ಲಿ ಡಿಜಿಟಲ್‍ ಆಪ್‍ ಉತ್ತೇಜಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ`ಭೀಮ್‍ ಆಪ್‍’ ಗೂಗಲ್‍ ಪ್ಲೇಯಲ್ಲಿ ನಂ.1 ಸ್ಥಾನ ಅಲಂಕರಿಸಿದೆ.

ಡಾ.ಬಿ.ಆರ್‍. ಅಂಬೇಡ್ಕರ್‍ ಹೆಸರಿಡಲಾದ `ಭಾರತ್‍ ಇಂಟರ್‍ಫೇಸ್‍ ಫಾರ್‍ ಮನಿ’ ಆಪ್‍ ಅನ್ನು ಮೋದಿ ಶುಕ್ರವಾರ ಬಿಡುಗಡೆಗೊಳಿಸಿದ್ದರು. ಭಾರತದಲ್ಲಿ ಡೌನ್‍ಲೋಡ್‍ ಆಗುತ್ತಿರುವ ಉಚಿತ ಆಪ್‍ಗಳಲ್ಲಿ ಭೀಮ್‍ ಆಪ್‍ ನಂ.1 ಸ್ಥಾನ ಅಲಂಕರಿಸಿದೆ.

ಪ್ರಸ್ತುತ ಅಂಡ್ರಾಯ್ಡ್ ಮೊಬೈಲ್‍ಗಳಲ್ಲಿ ಮಾತ್ರ ಈ ಆಪ್‍ ಡೌನ್‍ಲೋಡ್‍ ಮಾಡಬಹುದಾಗಿದೆ. `ಆಪಲ್‍’ನಲ್ಲಿ ಶೀಘ್ರದಲ್ಲೇ ಹೊರಬರಲಿದೆ.

ಹೆಬ್ಬೆಟ್ಟು ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದ್ದು, ಆಧಾರ್‍ ಕಾರ್ಡ್‍ ಸಂಖ್ಯೆ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೇ ಇಂಟರ್‍ನೆಟ್‍ ಸಂಪರ್ಕ ಇಲ್ಲದೆಯೂ ಈ ಆಪ್‍ ಬಳಸಬಹುದಾಗಿದೆ.

ಆಪ್‍ನ ಪ್ರಮುಖಾಂಶಗಳು

  • ಬ್ಯಾಂಕ್‍ ಖಾತೆಗೆ ಮೊಬೈಲ್‍ ಸಂಖ್ಯೆ ಸೇರಿಸಲಾಗಿರುತ್ತದೆ. ಬ್ಯಾಂಕ್‍ ಖಾತೆಗಳಿಂದ ನೇರವಾಗಿ ಹಣ ಪಾವತಿ ಹಾಗೂ ಸ್ವೀಕೃತಿ ಮಾಡಬಹುದಾಗಿದೆ.
  • ಭೀಮ್‍ ಆಪ್‍ ಉಚಿತವಾಗಿ ಡೌನ್‍ಲೋಡ್‍ ಮಾಡಬಹುದು. ಗೂಗಲ್‍ ಪ್ಲೇನಲ್ಲಿ ಈಗ ನಂ.1 ಸ್ಥಾನ ಅಲಂಕರಿಸಿದೆ.
  • 50-100 ಡೌನ್‍ಲೋಡ್‍ ತೋರಿಸುತ್ತಿದೆ. ಆದರೆ ವಿಶ್ಲೇಷಣೆ ಸಂಖ್ಯೆ 85,000 ಇದೆ. ಮೂರರಲ್ಲಿ 2 ಭಾಗದಷ್ಟು ಜನ ಪೂರ್ಣಾಂಕ ನೀಡಿದ್ದಾರೆ.
  • ನಿಮ್ಮ ಖಾತೆಗೆ ಬಳಸುತ್ತಿರುವ ದೂರವಾಣಿ ಸಂಖ್ಯೆ ನೀಡಬಹುದು. ಮತ್ತೊಂದು ಖಾತೆಯಿಂದ ವ್ಯವಹಾರ ಮಾಡಬೇಕಾದರೆ ಬದಲಿಸಬಹದು. ಒಂದು ಆಪ್‍ನಲ್ಲಿ ಒಂದು ಖಾತೆಯನ್ನು ಮಾತ್ರ ಬಳಸಬಹುದು.
  • ವ್ಯಾಪಾರಿ ಭೀಮ್‍ ಆಪ್‍ ಬಳಸುತಿದ್ದರೆ ನಿಮ್ಮ ಮೊಬೈಲ್‍ನ ಆಪ್‍ ಓಪನ್ ‍ಮಾಡಿ ಹಣದ ಮೊತ್ತ ನಮೂದಿಸಿ `ಸೆಂಡ್‍ ಮನಿ’ ಬಟನ್‍ ಒತ್ತಿದರೆ ಸಾಕು.
  • ವ್ಯಾಪಾರಿ ಮತ್ತು ಗ್ರಾಹಕ ಹಣ ಬದಲಾವಣೆ ಮಾಡುವಾಗ `ಕ್ಯುಆರ್‍’ ಕೋಡ್‍ ಸಂಖ್ಯೆ ಸೃಷ್ಟಿಯಾಗುತ್ತದೆ. ಇದರಿಂದ ಸ್ಕ್ಯಾನಿಂಗ್ ಅವಶ್ಯಕತೆ ಬೀಳುವುದಿಲ್ಲ.
  • ಆಪ್‍ ಮುಲಕ ಒಂದು ಬಾರಿಗೆ ಗರಿಷ್ಠ ಮಿತಿ 10,000 ರೂ. ಹಾಗೂ ದಿನಕ್ಕೆ 24,000 ಗರಿಷ್ಟ ಮೊತ್ತದ ಹಣ ವರ್ಗಾವಣೆ ಮಾಡಬಹುದಾಗಿದೆ.
  • ಆಪ್‍ ಎಷ್ಟು ಬಾರಿ ಬೇಕಾದರೂ ಬಳಸಬಹುದಾಗಿದ್ದು, ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಒಂದು ವೇಳೆ ಕೈಕೊಟ್ಟರೆ ಮೊಬೈಲ್ ಅನ್ನು ರೀಬೂಟ್‍ ಅಥವಾ ಆಫ್‍ ಮಾಡಿ ಆನ್‍ ಮಾಡಬಹುದು. ಅಥವಾ ಆಪ್‍ ಅನ್ನು ಮರು ಚಾಲನೆ ಮಾಡಿದರೆ ಸರಿ ಹೋಗುತ್ತದೆ.
  • ಮೊದಲ ಬಾರಿ ಆಪ್ ‍ಬಳಸುವವರು `ಒಟಿಪಿ’ ವಿವರ ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ಕೆಲವೊಂದು ಗ್ರಾಹಕರು ಈ ಬಗ್ಗೆ ಸಮಸ್ಯೆ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top