fbpx
News

ರಸ್ತೆ ಅಪಘಾತಗಳಿಂದ ಮರಣ : ಕರ್ನಾಟಕಕ್ಕೆ ಅಗ್ರ ಸ್ಥಾನ

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಸಾವನ್ನಪ್ಪಿದವರ ರಾಜ್ಯಗಳ ಪೈಕಿ ಕರ್ನಾಟಕ 2ನೆ ಸ್ಥಾನ ಪಡೆದಿದೆ. ಪ್ರತಿನಿತ್ಯ ದೇಶದ ವಿವಿಧೆಡೆ ರಸ್ತೆ ಅಪಘಾತಗಳಲ್ಲಿ ಕನಿಷ್ಠ ಪಕ್ಷ 120 ಅವಘಡಗಳು ಸಂಭವಿಸಿ, 29 ಮಂದಿ ಸಾವನ್ನಪ್ಪಿದ್ದಾರೆ.

ದೇಶದ ಮಹಾ ನಗರಗಳಲ್ಲಿ ಸಂಭವಿಸುವ ಅತಿ ಹೆಚ್ಚು ಅಪಘಾತಗಳ ಪೈಕಿ ರಾಜಧಾನಿ ಬೆಂಗಳೂರಿಗೆ 3ನೆ ಸ್ಥಾನ ದಕ್ಕಿದೆ. 89 ನಗರಗಳ ಪೈಕಿ ಚೆನ್ನೈ 7328, ದೆಹಲಿ 7048 ಹಾಗೂ ಬೆಂಗಳೂರಿನಲ್ಲಿ 5004 ಅಪಘಾತಗಳು ನಡೆದಿವೆ. ಅವಘಡಗಳ ಪೈಕಿ ಬೆಂಗಳೂರಿನಲ್ಲಿ 899 ಪ್ರಕರಣಗಳು ನಡೆದಿದ್ದರೆ, ದೆಹಲಿ 1316 ಹಾಗೂ ಜೈಪುರದಲ್ಲಿ 939 ಪ್ರಕರಣಗಳು ದಾಖಲಾಗಿವೆ.

road-accident

ಹೆಲ್ಮೆಟ್‌ – ಸೀಟ್‌ ಬೆಲ್ಟ್‌ಗಳನ್ನು ಧರಿಸದಿರುವುದು. ರಾತ್ರಿಯ ವೇಳೆಯಲ್ಲಿ ಪ್ರಕರಣವಾದ ಹೆಡ್‌ಲೈಟ್‌ಗಳನ್ನು ಉರಿಸುವುದು, ಅಗಲ ಕಿರಿದಾದ ಅಥವಾ ದುಸ್ಥಿತಿಯಲ್ಲಿರುವ ರಸ್ತೆಗಳು ಮತ್ತು ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಕಟ್ಟು ನಿಟ್ಟಿನ ಪರೀಕ್ಷೆಗಳನ್ನು ನಡೆಸದಿರುವುದು ಪ್ರಮುಖ ಕಾರಣಗಳಾಗಿವೆ. ಇದರೊಂದಿಗೆ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಲು ಅವಶ್ಯಕ ಸಂಖ್ಯೆಯ ಪೊಲೀಸರ ಕೊರತೆಯಿಂದಾಗಿ ನಗರ, ಮಹಾ ನಗರ ಮತ್ತು ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ವಾಹನಾಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇವುಗಳಲ್ಲಿ ಪ್ರತಿಯೊಂದು ಸಮಸ್ಯೆಗೂ ಪ್ರತ್ಯೇಕವಾದ ಪರಿಹಾರವಿದ್ದು, ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಿಸಿದಲ್ಲಿ ರಸ್ತೆ ಅಪಘಾತಗಳು ಮತ್ತು ಇವುಗಳಿಂದ ಸಂಭವಿಸುವ ಮರಣಗಳ ಪ್ರಮಾಣಗಳನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ.

accident

2015ರಲ್ಲಿ ಕರ್ನಾಟಕದ ವಿವಿದೆಡೆ ರಸ್ತೆ ಅಪಘಾತ ಸಂಭವಿಸಿ 44,001 ಮಂದಿ ಸಾವನ್ನಪ್ಪಿದರೆ, ಮೊದಲ ಸ್ಥಾನದಲ್ಲಿ ನೆರೆಯ ತಮಿಳುನಾಡು 69,059 ಅಗ್ರಸ್ಥಾನದಲ್ಲಿದೆ. 2014ಕ್ಕೆ ಹೋಲಿಸಿದರೆ ರಸ್ತೆ ಅಪಘಾತಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಸದರಿ ವರ್ಷದಲ್ಲಿ 43,694 ರಸ್ತೆ ಅಪಘಾತಗಳು ಸಂಭವಿಸಿದ್ದವು. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ಇದು ಬಹಿರಂಗಗೊಂಡಿದೆ. ದೇಶದಲ್ಲಿ ಅತಿ ಹೆಚ್ಚು ರಸ್ತೆ ಅವಘಡಗಳು ಸಂಭವಿಸುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. 2015ರಲ್ಲಿ ಉತ್ತರ ಪ್ರದೇಶ 18,407, ತಮಿಳುನಾಡು 15,642, ಮಹಾರಾಷ್ಟ್ರ, 13,685 ಅಪಘಾತಗಳು ಸಂಭವಿಸಿವೆ.

ಪ್ರತಿನಿತ್ಯ ದೇಶದ ವಿವಿಧೆಡೆ ರಸ್ತೆ ಅಪಘಾತಗಳಲ್ಲಿ ಕನಿಷ್ಠ ಪಕ್ಷ 120 ಅವಘಡಗಳು ಸಂಭವಿಸಿ, 29 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 2015ರಲ್ಲಿ ಕನಿಷ್ಠ ಪ್ರತಿನಿತ್ಯ ಇಬ್ಬರಿಂದ ಮೂವರು ಕೊನೆಯುಸಿರೆಳೆದಿದ್ದಾರೆ. ಮೇ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 4077, ಜನವರಿಯಲ್ಲಿ 3970 ಹಾಗೂ ಡಿಸೆಂಬರ್‍ನಲ್ಲಿ 3841 ಅಪಘಾತಗಳು ಸಂಭವಿಸಿವೆ. ರಸ್ತೆ ಅಪಘತಗಳು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಸಂಭವಿಸಿದ

ರಸ್ತೆ ಅಪಘಾತಗಳು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಸಂಭವಿಸಿವೆ. ಇದಲ್ಲದೆ ಮದ್ಯಪಾನ ಸೇವಿಸಿ ಚಾಲನೆ ಮಾಡುವುದು, ಹದಗೆಟ್ಟ ರಸ್ತೆಗಳೂ ಸಹ ಅಪಘಾತಕ್ಕೆ ಕಾರಣ ಎಂಬುದು ವರದಿಯಲ್ಲಿ ಉಲ್ಲೇಖವಾಗಿವೆ. ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಸಹಭಾಗಿತ್ವದಲ್ಲಿ ಕೆಲವು ಸುಧಾರಣೆಗಳನ್ನು ತರಬೇಕಾದ ಅಗತ್ಯವಿದೆ. ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್, ಹೆದ್ದಾರಿಗಳಲ್ಲಿ ಹೆಚ್ಚಿನ ಚೆಕ್‍ಪೋಸ್ಟ್, ಸೂಚನಾ ಫಲಕಗಳು, ತುರ್ತು ಅಪಘಾತ ಸಂಭವಿಸಿದ ವೇಳೆ ಚಿಕಿತ್ಸೆ ನೀಡುವ ಅಗತ್ಯವಿದೆ.

ಪರಿಹಾರ ಕ್ರಮ:

ಪ್ರಸ್ತುತ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಬೇಕಿದ್ದಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ವಿಸ್ತರಿಸಿ ಪುನರ್‌ ನವೀಕರಿಸಬೇಕು. ಜೊತೆಗೆ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ಸಂಚಾರ ವಿಭಾಗದ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ವಾಹನಗಳು ಮತ್ತು ಚಾಲಕರ ದಾಖಲೆಗಳನ್ನು ಪರಿಶೀಲಿಸಿ, ತಪ್ಪಿಸತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸಾರಿಗೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸ್ಥಳದಲ್ಲೇ ದಂಡವನ್ನು ವಿಧಿಸಬೇಕು. ಇವೆಲ್ಲಕ್ಕೂ ಮಿಗಿಲಾಗಿ ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಪ್ರತಿಯೊಬ್ಬ ಅಭ್ಯರ್ಥಿಯ ಮೌಖೀಕ, ಲಿಖೀತ ಮತ್ತು ವಾಹನ ಚಾಲನಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗದೆ ಪರವಾನಿಗೆಯನ್ನು ನೀಡದಿರುವುದೇ ಮುಂತಾದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ, ಭಾರತದಲ್ಲಿ ರಸ್ತೆ ಅಪಘಾತಗಳ ಮತ್ತು ಇವುಗಳಿಗೆ ಬಲಿಯಾಗುವವರ ಸಂಖ್ಯೆಗಳು ನಿಶ್ಚಿತವಾಗಿಯೂ ಕಡಿಮೆಯಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top